ಚೇಳೂರು: ಚೇಳೂರು ನೂತನ ತಾಲ್ಲೂಕು ಎನಿಸಿದ ನಂತರ ಭೂಮಿ ಇಲಾಖೆಯ ತಾಂತ್ರಿಕ ದೋಷದಿಂದಾಗಿ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರ ಜಮೀನುಗಳ ಪಹಣಿಗಳು ದೊರೆಯುತ್ತಿರಲಿಲ್ಲ.

ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಇತ್ತು. ಪಹಣಿ ಸಮಸ್ಯೆಗೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಒಂದು ವಾರದಲ್ಲಿ ಪಹಣಿಗಳು ರೈತರ ಕೈ ಸೇರಲಿವೆ. ತಹಶೀಲ್ದಾರ್ ಶ್ವೇತಾ ಬಿ.ಕೆ. ಅವರ ಮುತುವರ್ಜಿಯಿಂದಾಗಿ ಈ ಸಮಸ್ಯೆ ಬಗೆಹರಿದಿದೆ.

ಏನಿದು ಸಮಸ್ಯೆ: ಚೇಳೂರು ತಾಲ್ಲೂಕು ಕೇಂದ್ರವಾದ ನಂತರ ಭೂಮಿ ಇಲಾಖೆಯ ವ್ಯಾಪ್ತಿಯಲ್ಲಿ ತಾಂತ್ರಿಕ ಬದಲಾವಣೆಗಳಾಗಿದ್ದವು. ಇದರಿಂದಾಗಿ ಎಂ. ನಲ್ಲಗುಟ್ಲಪಲ್ಲಿ, ಚಾಕವೇಲು ಪಂಚಾಯಿತಿ ವ್ಯಾಪ್ತಿಯ ಆರ್. ನಲ್ಲಗುಟ್ಲಪಲ್ಲಿ, ಪೋಲನಾಯಕನಪಲ್ಲಿ ವ್ಯಾಪ್ತಿಯ ಗುಮ್ಮಳಪಲ್ಲಿ ಮತ್ತು ಹೊಸಹುಡ್ಯ ಹಾಗೂ ಚೇಳೂರು ಪಂಚಾಯಿತಿ ವ್ಯಾಪ್ತಿಯ ಗುಮ್ಮಳಪಲ್ಲಿ ಮತ್ತು ಹೊಸಹುಡ್ಯ ಗ್ರಾಮಗಳ ಹೆಸರುಗಳು ಒಂದೇ ರೀತಿಯಲ್ಲಿ ಇರುವುದರಿಂದ ರೈತರಿಗೆ ಪಹಣಿ ಲಭ್ಯವಾಗುತ್ತಿರಲಿಲ್ಲ.

ಇದರಿಂದ ಕೃಷಿ ಸಾಲ ಹಾಗೂ ಇತರ ಸೌಲಭ್ಯ ಪಡೆಯಲು ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.

ಸಮಸ್ಯೆಯ ಅರಿತ ತಹಶೀಲ್ದಾರ್ ಶ್ವೇತಾ ಬಿ.ಕೆ, ಇದನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಮುಂದಾದರು. ಶಾಸಕರು ಹಾಗೂ ಜಿಲ್ಲಾಧಿಕಾರಿ ಜೊತೆ ಸಮಾಲೋಚಿಸಿದರು. ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿದ್ದರು. ಆ ಪ್ರಯತ್ನದ ಫಲವಾಗಿ ತಾಂತ್ರಿಕ ದೋಷಗಳು ನಿವಾರಣೆಯಾಗಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-16-1808421082

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.