ಚೇಳೂರು: ಪಟ್ಟಣದ ಹೋಟೆಲ್ ಹಾಗೂ ಉಪಾಹಾರ ಮಂದಿರಗಳಲ್ಲಿ ವಾಣಿಜ್ಯ ಸಿಲಿಂಡರ್ಗಳ ಬದಲಿಗೆ ನಿಯಮಬಾಹಿರವಾಗಿ ಗೃಹಬಳಕೆಯ ಸಿಲಿಂಡರ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದ್ದರೂ ತಾಲ್ಲೂಕು ಆಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಈ ನಡುವೆ ಸಾರ್ವಜನಿಕರ ದೂರಿಗೆ ಮಣಿದು ಕಾಟಾಚಾರದ ದಾಳಿಯನ್ನೂ ನಡೆಸಿದೆ.

ಹಲವು ದಿನಗಳಿಂದ ಚೇಳೂರಿನ ಬಹುತೇಕ ಹೋಟೆಲ್ಗಳಲ್ಲಿ ಸಬ್ಸಿಡಿ ಸಹಿತ ಗೃಹಬಳಕೆಯ ಸಿಲಿಂಡರ್ಗಳನ್ನು ರಾಜಾರೋಷವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬ ಆರೋಪಗಳಿದ್ದವು. ಈ ಬಗ್ಗೆ ಮೇಲಧಿಕಾರಿಗಳಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ತಾಲ್ಲೂಕು ಆಡಳಿತದ ಅಧಿಕಾರಿಗಳು ಪಟ್ಟಣದಲ್ಲಿ ದಾಳಿ ನಡೆಸಿದ್ದಾರೆ.

ಆದರೆ, ಇಡೀ ಪಟ್ಟಣದಲ್ಲಿ ಹತ್ತಾರು ಹೋಟೆಲ್ಗಳಿದ್ದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಿದ್ದು ಮಾತ್ರ ಕೇವಲ ಎರಡು ಹೋಟೆಲ್ಗಳು! ಪಟ್ಟಣದ ಪ್ರಮುಖ ಎರಡೇ ಹೋಟೆಲ್ಗಳ ಮೇಲೆ ಮಾತ್ರ ದಾಳಿ ನಡೆಸಿರುವ ಅಧಿಕಾರಿಗಳು, ತಲಾ ಒಂದು ಗೃಹಬಳಕೆ ಸಿಲಿಂಡರ್ ವಶಪಡಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ.

ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳಿಗೆ ರಜೆ ಇರುವ ದಿನದಂದು ಇಂತಹ ದಾಳಿಗಳು ನಡೆಯುವುದು ಕಡಿಮೆ. ಆದರೆ ಚೇಳೂರಿನಲ್ಲಿ ರಜಾ ದಿನವೇ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ದೊಡ್ಡ ಹೋಟೆಲ್ ಮಾಲೀಕರಿಗೆ ದಾಳಿಯ ಮಾಹಿತಿ ಮುಂಚೆಯೇ ದೊರೆತಿತ್ತೇ? ಸಣ್ಣ ಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿವೆ.

ವಾಣಿಜ್ಯ ಸಿಲಿಂಡರ್ ಮತ್ತು ಗೃಹಬಳಕೆ ಸಿಲಿಂಡರ್ಗಳ ಬೆಲೆಯಲ್ಲಿ ಭಾರಿ ವ್ಯತ್ಯಾಸವಿದೆ. ಹೋಟೆಲ್ ಮಾಲೀಕರು ಲಾಭದ ಆಸೆಗೆ ಬಿದ್ದು ಬಡವರಿಗೆ ಸಿಗಬೇಕಾದ ಸಬ್ಸಿಡಿ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸುತ್ತಿದ್ದಾರೆ.

ಇದರಿಂದ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಸೋರಿಕೆಯಾಗುತ್ತಿದೆ. ಚೇಳೂರಿನ ಬಹುತೇಕ ಕಡೆಗಳಲ್ಲಿ ಸಿಲಿಂಡರ್ ರಿಫಿಲ್ಲಿಂಗ್ ದಂಧೆ ಕೂಡ ಅವ್ಯಾಹತವಾಗಿದೆ.

ಅಧಿಕಾರಿಗಳು ದಾಳಿ ಮಾಡುವುದಾದರೆ ಪಟ್ಟಣದ ಎಲ್ಲಾ ಹೋಟೆಲ್ಗಳನ್ನು ಸಮಾನವಾಗಿ ಪರಿಶೀಲಿಸಬೇಕು. ಕೇವಲ ಎರಡು ಹೋಟೆಲ್ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸರಿಯಲ್ಲ. ಇದು ಕೇವಲ ಮೇಲಧಿಕಾರಿಗಳಿಗೆ ತೋರಿಸಲು ನಡೆಸಿದ ನಾಟಕದಂತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಚೇಳೂರು ಪಟ್ಟಣದಾದ್ಯಂತ ದಾಳಿ ನಡೆಸಿದ್ದು ಪ್ರಮುಖ ಎರಡು ಹೋಟೆಲ್ಗಳಲ್ಲಿ ಎರಡು ಗೃಹಬಳಕೆ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದೇವೆ. ನಮಗೆ ಯಾವುದೇ ಒತ್ತಡವಿಲ್ಲ’ ಎಂದು ತಹಶೀಲ್ದಾರ್ ಶ್ವೇತಾ ಬಿ.ಕೆ ತಿಳಿಸಿದ್ದಾರೆ.

‘ನಾವು ಒಂದು ಕಡೆ ದಾಳಿ ಮಾಡುತ್ತಿದ್ದರೆ, ಮಿಕ್ಕಿದವರೆಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಈ ದಾಳಿ ಇದೇ ಕೊನೆಯಲ್ಲ. ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಮುಂದುವರಿ ಯುತ್ತದೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-16-1202345751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.