ಚಿಕ್ಕಬಳ್ಳಾಪುರ: ಆಯಾ ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ನೇತೃತ್ವದಲ್ಲಿ ಪ್ರತಿ ವರ್ಷವೂ ಪ್ರತಿಯೊಂದು ಜಿಲ್ಲೆಯಲ್ಲಿಯೂ ‘ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ’ ತಯಾರಿಸಲಾಗುತ್ತದೆ.

ಜಿಲ್ಲೆಯ ಸಮಗ್ರ ಅಭಿವೃದ್ಧಿ, ರಸ್ತೆ, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಮೂಲಸೌಕರ್ಯಗಳು ಈ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ಒಳಪಡುತ್ತವೆ.

ಪ್ರತಿಯೊಂದು ಇಲಾಖೆಗಳಿಗೆ ಭೌತಿಕ ಗುರಿಗಳು ಮತ್ತು ಅನುದಾನದ ಬೇಡಿಕೆಯ ಅಂಕಿ ಅಂಶಗಳನ್ನು ಈ ವರದಿ ಹೊಂದಿರುತ್ತದೆ. ಆ ವರ್ಷ ಜಿಲ್ಲೆಯಲ್ಲಿ ಕೈಗೊಳ್ಳುವ ಪ್ರಮುಖ ಚಟುವಟಿಕೆಗಳು (ಕಾಮಗಾರಿ) ಈ ಕರಡು ಯೋಜನೆಯಲ್ಲಿ ಇರುತ್ತವೆ. ನಮ್ಮ ಇಲಾಖೆಗೆ ಇಂತಿಷ್ಟು ಹಣ ಅಗತ್ಯವಿದೆ, ಇಂತಹ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಈ ಕರಡು ಅಭಿವೃದ್ಧಿ ಯೋಜನೆಯನ್ನು ಸಲ್ಲಿಸಲಾಗುತ್ತದೆ.

ಆ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ 2026-27ನೇ ಸಾಲಿನ ಜಿಲ್ಲಾ ಕರಡು ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ಈ ಕರಡು ಯೋಜನೆ ಗಮನಿಸಿದರೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಸ್ವಕ್ಷೇತ್ರ ಪ್ರೀತಿ ಎದ್ದು ಕಾಣುತ್ತಿದೆ.

ವಿವಿಧ ಇಲಾಖೆಗಳ ಒಟ್ಟು 31 ಕಾಮಗಾರಿಗಳಲ್ಲಿ 11ರಿಂದ 12 ಕಾಮಗಾರಿಗಳು ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿವೆ. ನಂತರ ಗೌರಿಬಿದನೂರು ಕ್ಷೇತ್ರವಿದೆ.

ಚಿಂತಾಮಣಿಯ ಕಾಮಗಾರಿಗಳು: ಮುರುಗಮಲ್ಲದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ನಿರ್ಮಾಣ, ಮುರುಗಮಲ್ಲ ದರ್ಗಾದಲ್ಲಿ ಹೂವಿನ ಅಂಗಡಿಗಳು, ಶೌಚಾಲಯಗಳು, ಶೆಡ್ ಮತ್ತು ಅಭಿವೃದ್ಧಿ ಕಾಮಗಾರಿಗಳು, ಚಿಂತಾಮಣಿಯ ಪಾಲಿಟೆಕ್ನಿಕ್ನಲ್ಲಿ ಗ್ರಂಥಾಲಯ, ಸಭಾಂಗಣ ನಿರ್ಮಾಣ, ಚಿಂತಾಮಣಿ ತಾಲ್ಲೂಕು ಆಸ್ಪತ್ರೆಯನ್ನು 100ರಿಂದ 150 ಹಾಸಿಗೆಗಳಿಗೆ ಉನ್ನತೀಕರಣ, ಚಿಂತಾಮಣಿ ತಾಲ್ಲೂಕಿನಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯ ನಿರ್ಮಾಣದ ಬಗ್ಗೆ ಕರಡು ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಚಿಂತಾಮಣಿ ತಾಲ್ಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮತ್ತು ಇತರೆ ನೂತನ ಸೌಲಭ್ಯಗಳ ಅಳವಡಿಕೆ, ಚಿಂತಾಮಣಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಅಭಿವೃದ್ಧಿ, ಚಿಂತಾಮಣಿ ನಗರದಲ್ಲಿ ಹಾಲಿ ಇರುವ ಬಾಹ್ಯ ವಾಹಕವನ್ನು ಕಳಚಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ, ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಚಿಂತಾಮಣಿ ನಗರದ ವೆಕ್ಕುಂದಿ ದೊಡ್ಡಕೆರೆ ಆಳಗೊಳಿಸುವುದು, ಸಾಮರ್ಥ್ಯ ಹೆಚ್ಚಿಸಿ ಮುಖ್ಯ ಏರಿ ಬಲಪಡಿಸುವ ಕಾಮಗಾರಿ, ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಕಟ್ಟಡ ಉಳಿಕೆ ಕಾಮಗಾರಿಯ ಬಗ್ಗೆ ಪ್ರಸ್ತಾಪಿಸಲಾಗಿದೆ.

ಎತ್ತಿನಹೊಳೆ ಪ್ರಸ್ತಾಪ: ಎತ್ತಿನಹೊಳೆ ಯೋಜನೆಯ ಎರಡನೇ ಹಂತದ ಕಾಮಗಾರಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆಯೂ ಮಾಹಿತಿ ನೀಡಲಾಗಿದೆ.

ಜಿಲ್ಲೆಯ ಬಹುತೇಕ ತಾಲ್ಲೂಕು ಪಂಚಾಯಿತಿ ಕಟ್ಟಡಗಳ ಕಾಮಗಾರಿಗಳಿಗೆ ಕರಡು ಅಭಿವೃದ್ಧಿ ಯೋಜನೆಯಲ್ಲಿ ಹಣ ಮೀಸಲಿಡಲಾಗಿದೆ. ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಹೊಸ ಕಟ್ಟಡ ಕಾಮಗಾರಿ, ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಕಟ್ಟಡ ಉಳಿಕೆ ಕಾಮಗಾರಿ, ಬಾಗೇಪಲ್ಲಿ ತಾಲ್ಲೂಕು ಪಂಚಾಯಿತಿ ಕಟ್ಟಡ ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿಗೆ ಹಣ ಮೀಸಲಿಡಲಾಗಿದೆ.

55 ಶಾಲೆಗಳಲ್ಲಿ ಹೊಸ ಕಟ್ಟಡ: ಜಿಲ್ಲೆಯ ಶಾಲಾ ಶಿಕ್ಷಣದ ಅಭಿವೃದ್ಧಿಗಾಗಿ ಒಟ್ಟು ₹68.47 ಕೋಟಿ ಅನುದಾನವನ್ನು ಕರಡಿನಲ್ಲಿ ನಿಗದಿಪಡಿಸಲಾಗಿದೆ. ಅಡುಗೆ ಕೋಣೆ, ಕುಡಿಯುವ ನೀರು, ಶೌಚಾಲಯ ಮತ್ತು ಮಳೆ ನೀರು ಕೊಯ್ಲು ಮುಂತಾದ ಮೂಲ ಸೌಕರ್ಯಗಳಿಗೆ ಅತಿ ಹೆಚ್ಚು ₹33.92 ಕೋಟಿ ಮೀಸಲಿಡಲಾಗಿದೆ.

415 ಶಾಲೆಗಳ ಹಳೆಯ ಕಟ್ಟಡಗಳ ದುರಸ್ತಿಗೆ ₹14.93 ಕೋಟಿ ಹಂಚಿಕೆ ಮಾಡಲಾಗಿದೆ. 55 ಹೊಸ ಶಾಲಾ ಕಟ್ಟಡ ಅಥವಾ ಕೊಠಡಿಗಳ ನಿರ್ಮಾಣಕ್ಕಾಗಿ ₹8.38 ಕೋಟಿ ವ್ಯಯಿಸಲಾಗುತ್ತಿದೆ. ಕಂಪ್ಯೂಟರ್ಗಳು, ಸ್ಮಾರ್ಟ್ ಬೋರ್ಡ್ಗಳು, ಪ್ರಯೋಗಾಲಯ ಉಪಕರಣಗಳು ಮತ್ತು ಕ್ರೀಡಾ ಸಾಮಗ್ರಿಗಳಿಗೆ ₹4.75 ಕೋಟಿ ನಿಗದಿಪಡಿಸಲಾಗಿದೆ. ಗ್ರಂಥಾಲಯ, ಆಟದ ಮೈದಾನ, ಕಾಂಪೌಂಡ್ ಮತ್ತು ಗೇಟ್ ನಿರ್ಮಾಣಕ್ಕಾಗಿ ₹5.91 ಕೋಟಿ ಲಕ್ಷ ಮೀಸಲಿದೆ.

ಹೀಗೆ ಜಿಲ್ಲೆಯಲ್ಲಿ ಯಾವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಮ್ಮ ಸ್ವಕ್ಷೇತ್ರಕ್ಕೆ ಅನುದಾನದ ಹೊಳೆ ಹರಿಸುತ್ತಿದ್ದಾರೆ. ಕರಡು ಯೋಜನೆಯಲ್ಲಿಯೂ ಇದು ಎದ್ದು ಕಾಣುತ್ತಿದೆ.

ಕೊಳವೆಬಾವಿ ಬಳಿ ಇಂಗುಗುಂಡಿ

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3,543 ಕೊಳವೆಬಾವಿ ಕೊರೆಯಲಾಗಿದ್ದು ಈ ಕೊಳವೆ ಬಾವಿಗಳಿಗೆ ಇಂಗು ಗುಂಡಿ ಅಳವಡಿಸಿ ಅಂತರ್ಜಲ ವೃದ್ಧಿಗೊಳಿಸುವ ಉದ್ದೇಶದಿಂದ ಒಂದು ಕೊಳವೆ ಬಾವಿ ಬಳಿ ಇಂಗು ಗುಂಡಿ ನಿರ್ಮಾಣಕ್ಕೆ ಅಂದಾಜು ₹1.40 ಲಕ್ಷ ವೆಚ್ಚ ಮಾಡುವ ಬಗ್ಗೆ ಕರಡಿನಲ್ಲಿ ತಿಳಿಸಲಾಗಿದೆ.

ಅನುದಾನಕ್ಕೆ ಬೇಡಿಕೆ

ಶಿಕ್ಷಣ, ಆರೋಗ್ಯ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಅರಣ್ಯ, ಸಹಕಾರ, ಸಣ್ಣ ನೀರಾವರಿ, ಲೋಕೋಪಯೋಗಿ, ವಸತಿ ಹೀಗೆ ಜಿಲ್ಲೆಯ 37 ಇಲಾಖೆಗಳ ಅನುದಾನದ ಬೇಡಿಕೆಯನ್ನು ನಿಗದಿಗೊಳಿಸಲಾಗಿದೆ. ಒಟ್ಟು ₹5,008.38 ಕೋಟಿ ಅನುದಾನದ ಬೇಡಿಕೆ ಸಲ್ಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.