ಚಿಕ್ಕಬಳ್ಳಾಪುರ: ಕೆ.ಸಿ ವ್ಯಾಲಿ, ಎಚ್.ಎನ್.ವ್ಯಾಲಿ ಮತ್ತು ವೃಷಭಾವತಿ ನೀರಾವರಿ ಯೋಜನೆಯ ಕುರಿತು ಕೆಲವು ಸಚಿವರು ಸಭೆ ನಡೆಸಿದ್ದಾರೆ. ಸಭೆಯಲ್ಲಿನ ಹೇಳಿಕೆಗಳು ಸಂಶಯ ಮತ್ತು ಅನುಮಾನಾಸ್ಪವಾಗಿವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ವಿಜ್ಞಾನಿಗಳ ಸೋಗಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹೆಸರು ದುರ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಬೇಕಾದ ರೀತಿಯಲ್ಲಿ ವರದಿ ಬರೆದುಕೊಡುತ್ತಿದ್ದಾರೆ. ಈ ವಿಚಾರವನ್ನು ಐಐಎಸ್ಸಿ ನಿರ್ದೇಶಕರ ಗಮನಕ್ಕೆ ತರುತ್ತೇವೆ. ಇದರಲ್ಲಿ ಸಂಸ್ಥೆಯ ಪಾತ್ರವೇನು ಎನ್ನುವುದನ್ನು ಜನರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಶಾಸಕರು ಮೂರು ಹಂತದಲ್ಲಿ ಶುದ್ಧೀಕರಿಸಿ ಕೊಳಚೆ ನೀರನ್ನು ತಮ್ಮ ಕ್ಷೇತ್ರ ವ್ಯಾಪ್ತಿಯ ಕೆರೆಗಳಿಗೆ ತುಂಬಿಸಬೇಕು ಎಂದು ಆಗ್ರಹಿಸಿದ್ದಾರೆ ಎಂದರು.

ವ್ಯಾಲಿ ನೀರು ಸುರಕ್ಷಿತವಾಗಿದೆ. ಆತಂಕಪಡುವ ಅಗತ್ಯವಿಲ್ಲ. ನೀರು ಸಮರ್ಪಕವಾಗಿ ಶುದ್ಧೀಕರಣವಾಗುತ್ತಿದೆ. ಮಣ್ಣು, ನೀರಿಗೆ ಹಾನಿಯಾಗಿಲ್ಲ. 1,500 ಅಡಿಗೆ ದೊರೆಯುತ್ತಿದ್ದ ನೀರು 50ರಿಂದ 100 ಅಡಿಗೆ ದೊರೆಯುತ್ತಿದೆ ಎಂದು ಸಚಿವರು ಆತ್ಮವಂಚನೆಯ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಮೂರು ಸಚಿವರು ಈ ಬಗ್ಗೆ ತೀರ್ಮಾನ ಕೈಗೊಂಡು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸಚಿವರಿಗೆ ಬದ್ಧತೆ ಇದ್ದರೆ ಮೂರು ಜಿಲ್ಲೆಯ ನೀರಾವರಿ ಹೋರಾಟಗಾರರು ಮತ್ತು ಶಾಸಕರನ್ನು ಪಕ್ಷಾತೀತವಾಗಿ ಕರೆದು ಸಭೆ ನಡೆಸಿ ಚರ್ಚಿಸಬೇಕು ಎಂದರು.

ಐಐಎಸ್ಸಿ ವಿಜ್ಞಾನಿಗಳು ಎಂದು ಕೆಲವರು ಸಂಸ್ಥೆ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರು ಮತ್ತು ನೀರಾವರಿ ಇಲಾಖೆ ಏಜೆಂಟರ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯನ್ನು ರೂಪಿಸಿಕೊಟ್ಟು ಮತ್ತು ಗುಣಮಟ್ಟ ಪರಿಶೀಲನೆಗೂ ಮುನ್ನವೇ ಪ್ರಶಂಸೆ ಸಹ ವಿಜ್ಞಾನಿಗಳು ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ಯೋಜನೆಯ ಕುರಿತು ಐಐಎಸ್ಸಿ ವಿಜ್ಞಾನಿಗಳಿಗೆ ಇರುವ ಆಸಕ್ತಿಯ ಬಗ್ಗೆ ನಾವು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದೇವೆ. ಇವರ ಉಸ್ತುವಾರಿ ಮತ್ತು ಸಂಶೋಧನೆಗೆ ಮೂರು ಕಾಸಿನ ಬೆಲೆ ಇಲ್ಲ ಎಂದು ಕಿಡಿಕಾರಿದರು.

ಸರ್ಕಾರಕ್ಕೆ ಬದ್ಧತೆ ಇದ್ದರೆ ಸಿಪಿಎಚ್ಒ ಮಾರ್ಗಸೂಚಿ ಅನ್ವಯ ಮೂರು ಹಂತದಲ್ಲಿ ನೀರು ಶುದ್ಧೀಕರಿಸಬೇಕಿತ್ತು. ರಾಷ್ಟ್ರೀಯ ಹಸಿರು ಪೀಠ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹ ಈ ಹಿಂದೆಯೇ ಮೂರು ಹಂತದಲ್ಲಿ ವ್ಯಾಲಿ ನೀರು ಶುದ್ಧೀಕರಣ ಆಗಬೇಕು ಎಂದಿವೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಇತ್ತೀಚೆಗೆ ವರದಿಯೊಂದನ್ನು ಬಿಡುಗಡೆ ಮಾಡಿದೆ. ಆ ವರದಿಯಲ್ಲಿ ಕೆ.ಸಿ ವ್ಯಾಲಿ, ಎಚ್.ಎನ್.ವ್ಯಾಲಿ ನೀರು ಹರಿದ ಮಣ್ಣಿನಲ್ಲಿ, ತರಕಾರಿ ಮಾದರಿಯಲ್ಲಿ ಅನೇಕ ರೀತಿಯ ಭಾರಿ ಲೋಹ, ನೈಟ್ರೇಟ್, ಸೀಸದ ಅಂಶಗಳು ಬಂದಿವೆ ಎಂದಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-16-1914737979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.