ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ಕೋಲಾರ ಬರ ಪೀಡಿತ ಜಿಲ್ಲೆಗಳಿಗೆ ಹೊಸ ಮುಖ್ಯಮಂತ್ರಿ ಅವರು ನೀರು ತಂದು ನೀರಿನ ದಾಹ ನೀಗಿಸಬೇಕು. ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನೀರು, ನೆಲ, ಜನರ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಕರ್ತರ ಮಕ್ಕಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಮಣ್ಣು ಶ್ರೇಷ್ಠವಾದುದು. ಇಲ್ಲಿಯ ರೈತರ ಬೆವರಿನ ಹನಿ ಭೂಮಿಗೆ ಬಿದ್ದರೆ ಭೂಮಿ ತಾಯಿ ಒಳ್ಳೆಯ ಬೆಳೆ ಕೊಡುತ್ತಾಳೆ. ಒಂದು ಕಾಲದಲ್ಲಿ ಇಡೀ ಬೆಂಗಳೂರಿಗೆ ತರಕಾರಿ, ಹಣ್ಣು, ರೇಷ್ಮೆ, ಕೊಡುವ ಕೆಲಸ ಈ ಜಿಲ್ಲೆಗಳು ಮಾಡುತ್ತಿದ್ದವು. ಇಲ್ಲಿ ಐದು ನದಿಗಳಿದ್ದರೂ ಬತ್ತಿವೆ ಎಂದರು.

ನಾನು ನೀರಾವರಿ ಸಚಿವನಾಗಿದ್ದಾಗ ಕೋಲಾರದ ಪತಕರ್ತರು ಇಲ್ಲಿ ಫ್ಲೋರೈಡ್ ಯುಕ್ತ ನೀರಿದೆ ಎಂದರು. ನಾನು ಬಂದು ನೋಡಿದೆ. ತಾಂತ್ರಿಕ ತಜ್ಞರೊಡನೆ ಮಾತನಾಡಿದೆ. ಅಂತರರಾಜ್ಯ ವಿವಾದ ಇಲ್ಲದಂತೆ ಎತ್ತಿನ ಹೊಳೆ ಯೋಜನೆ ರೂಪಿಸಿದೆ. ಅದಕ್ಕೂ ಮೊದಲು ನೇತ್ರಾವತಿ ತಿರುವು ಯೋಜನೆ ಪ್ರಸ್ತಾಪ ಇತ್ತು. ಅದರಿಂದ ಸುಮಾರು 11 ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತಿತ್ತು. ಹೀಗಾಗಿ ಆ ಯೋಜನೆ ಸಾಧ್ಯವಾಗಲಿಲ್ಲ ಎಂದರು.

ಪೈಪ್ಲೈನ್ ಮೂಲಕ ಹತ್ತು ಟಿಎಂಸಿ ಅಡಿ ನೀರನ್ನು ತಂದು ಈ ಎರಡೂ ಜಿಲ್ಲೆಗೆ ಕೊಡಬಹುದಿತ್ತು. ಯಾರಿಗೆ ತಾಂತ್ರಿಕ ಜ್ಞಾನ ಇಲ್ಲವೋ ಅವರು ಅಲ್ಲಿ ನೀರೇ ಇಲ್ಲ ಎಂದರು. ಅದಕ್ಕಾಗಿ ಎರಡು ವರ್ಷ ಹಾಳಾಯಿತು. ಕಾಲುವೆ ಮೂಲಕ ನೀರು ತರುವ ಪ್ರಯತ್ನ ನಡೆದಿದೆ. ಈಗ ಹೊಸ ಮುಖ್ಯಮಂತ್ರಿ ಬಂದಿದ್ದಾರೆ. ಅವರು ನೀರಾವರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಬರ ಪೀಡಿತ ಜಿಲ್ಲೆಗಳಿಗೆ ನೀರು ತಂದು ನೀರಿನ ದಾಹ ನೀಗಿಸಬೇಕು ಎಂದು ಕೋರಿದರು.

ನಾನು ಮುಖ್ಯಮಂತ್ರಿ ಆಗಿದ್ದಾಗ ಸ್ಥಳೀಯ ಪತ್ರಿಕೆಗಳಿಗೆ 4 ಪುಟಗಳ ಜಾಹೀರಾತು ನೀಡಲು, ಹಿಂದುಳಿದ ವರ್ಗಗಳ ಪತ್ರಿಕೆಗಳಿಗೆ ಜಾಹೀರಾತು ನೀಡಲು ಆದೇಶಿಸಿದೆ. ಎಲ್ಲ ಸಮುದಾಯಗಳ ಧ್ವನಿಗಳು ಬೆಳಕಿಗೆ ಬರಬೇಕು. ಕೇವಲ ಶಹರದ ಸುದ್ದಿಯನ್ನು ಮಾಡದೇ ಎಲ್ಲ ವರ್ಗದ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.

ಮಕ್ಕಳ ಪ್ರತಿಭೆಗಳನ್ನು ಗುರುತಿಸಿರುವುದು ಬಹಳ ಸಂತೋಷವಾಗಿದೆ. ಸಂಸದ ಡಾ. ಸುಧಾಕರ್ ಅವರು ಬಂದ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಯಾಗಿದೆ. ವೈದ್ಯಕೀಯ ಶಿಕ್ಷಣ ಕಾಲೇಜು, ಕನ್ನಡ ಭವನ ತರಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಮಾಜಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಪ್ರಜಾಪ್ರಭುತ್ವ ಉತ್ತಮವಾಗಿ ನಡೆಯಬೇಕು ಎಂದರೆ ಮಾಧ್ಯಮ ರಂಗ ಪ್ರಮುಖವಾದುದು. ಪ್ರಬಲ ವಿರೋಧ ಪಕ್ಷಗಳಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ ಎಂದು ಹೇಳಿದರು.

ಬೆಂಗಳೂರು ಉತ್ತರ ವಿವಿ ಕುಲಪತಿ ಬಿ.ಕೆ. ರವಿ, ಜಿಲ್ಲಾಧಿಕಾರಿ ಜಿ.ಪ್ರಭು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರವಿಕುಮಾರ್ ಹಾಗೂ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-16-433747641

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.