ಚಿಂತಾಮಣಿ: ತಾಲ್ಲೂಕಿನ ಕೈವಾರ ಹೋಬಳಿಯ ಜೀಡರಹಳ್ಳಿ ಬಳಿ ₹45 ಕೋಟಿ ವೆಚ್ಚದಲ್ಲಿ ಡ್ರೋನ್ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು. 20 ಎಕರೆ ಸ್ಥಳವನ್ನು ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಕೈವಾರ ಹೋಬಳಿಯ ಹುಲುಗುಮ್ಮನಹಳ್ಳಿಯಲ್ಲಿ ಶುಕ್ರವಾರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಡ್ರೋನ್ ಪರೀಕ್ಷಾ ಕೇಂದ್ರ ಸ್ಥಾಪನೆಯನ್ನು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ. ಯೋಜನೆ ಪ್ರಾರಂಭವಾದರೆ ಅನೇಕರಿಗೆ ಉದ್ಯೋಗ ದೊರೆಯುತ್ತದೆ. ತಾಲ್ಲೂಕಿನಲ್ಲಿ ದೊಡ್ಡಮಟ್ಟದಲ್ಲಿ ಕೈಗಾರಿಕೀಕರಣ ಆಗುತ್ತಿದೆ. ಕೈಗಾರಿಕಾ ಪ್ರಾಂಗಣ ಸ್ಥಾಪನೆಯಿಂದ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುತ್ತಿದ್ದು, ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ ಎಂದರು.

ಹುಲುಗುಮ್ಮನಹಳ್ಳಿಯಿಂದ ಕೈವಾರಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ₹56 ಲಕ್ಷ ವೆಚ್ಚದಲ್ಲಿ ರಸ್ತೆ ಮಂಜೂರಾಗಿದ್ದು, ಮತ್ತೆ ₹48 ಲಕ್ಷ ಅಗತ್ಯವಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಉತ್ತಮ ಗುಣಮಟ್ಟದ ರಸ್ತೆಗಾಗಿ ಹೆಚ್ಚುವರಿ ಅನುದಾನ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.

ಕೈವಾರ ಹೋಬಳಿಯಲ್ಲಿ ಗುಟ್ಟಹಳ್ಳಿ ರಸ್ತೆ, ತಳಗವಾರ-ಹೊಸಹಳ್ಳಿ ರಸ್ತೆ, ನಾಯಿಂದ್ರಹಳ್ಳಿಯಿಂದ ಚಿಕ್ಕಕಟ್ಟಿಗೇನಹಳ್ಳಿ ರಸ್ತೆ ಅಭಿವೃದ್ಧಿಪಡಿಸಿ ನೆರ್ನಹಳ್ಳಿವರೆಗೂ ಸಂಪರ್ಕಿಸಲಾಗಿದೆ. ಹೊಸಹಳ್ಳಿ-ಅಟ್ಟೂರು ರಸ್ತೆಯನ್ನು ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಸಾಲ ಯೋಜನೆಯಲ್ಲಿ ಸೇರಿಸಲಾಗಿದೆ. 3-4 ಬಾರಿ ಸರ್ವೆ, ವೀಕ್ಷಣೆ ನಡೆದಿದೆ. ಬೀರ್ಜೇನಹಳ್ಳಿ- ಅಕ್ಕಿಮಂಗಲ ರಸ್ತೆಗೂ ಟೆಂಡರ್ ಆಗಿದೆ. ಮಸ್ತೇನಹಳ್ಳಿಯಿಂದ ಜಂಗಮಶೀಗೇಹಳ್ಳಿ ರಸ್ತೆ, ಕೈವಾರದಿಂದ ಹುಣಸೇನಹಳ್ಳಿ ರಸ್ತೆಗೂ ಏಜೆನ್ಸಿ ನೇಮಕ ಮಾಡಲಾಗಿದ್ದು ನಂತರ ಟೆಂಡರ್ ಕರೆಯಲಾಗುತ್ತದೆ ಎಂದು ಹೇಳಿದರು.

ಕೈವಾರ ಹೋಬಳಿಯ ಮಡಬಹಳ್ಳಿ ಬಳಿ ಕಾರ್ಮಿಕ ಇಲಾಖೆಯಿಂದ ₹45 ಕೋಟಿ ವೆಚ್ಚದಲ್ಲಿ ಶ್ರಮಿಕರ ವಸತಿ ಶಾಲೆ ಸ್ಥಾಪನೆಯಾಗಲಿದೆ. 10 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ. ಅದರ ಸಮೀಪದಲ್ಲೇ ರಮಾಬಾಯಿ ಅಂಬೇಡ್ಕರ್ ವಸತಿ ಶಾಲೆ ಆರಂಭವಾಗಲಿದ್ದು 10 ಎಕರೆ ಮಂಜೂರು ಮಾಡಲಾಗಿದೆ. ದೊಡ್ಡಗಂಜೂರು ಗ್ರಾಮದ ಬಳಿ ಹಿಂದುಳಿದ ವರ್ಗಗಳ ಇಲಾಖೆಯಿಂದ ವಸತಿ ಶಾಲೆಗಾಗಿ 10 ಎಕರೆ ಜಾಗವನ್ನು 2012ದಲ್ಲೇ ಮಂಜೂರು ಮಾಡಿಸಿದ್ದೆ. ಆದರೆ ನಂತರ ಅದರ ಬಗ್ಗೆ ಯಾರು ಗಮನಹರಿಸದೆ ಮಂಜೂರು ಆಗಿದ್ದ ಶಾಲೆಯೇ ಆರಂಭವಾಗದೆ ವಾಪಸ್ ಹೋಗಿತ್ತು. ಮತ್ತೆ ಮರು ಮಂಜೂರಾತಿ ಮಾಡಿಸಿದ್ದೇನೆ ಎಂದರು.

ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿಯ ನೀರನ್ನು ಕೆರೆಗಳಿಗೆ ಹರಿಸುತ್ತಿರುವುದು ಅಂತರ್ಜಲ ವೃದ್ಧಿಗಾಗಿ ಮಾತ್ರ ಎಂದು ಸ್ಪಷ್ಟಪಡಿಸಲಾಗಿದೆ. ಭೂಮಿಯಲ್ಲಿ ಇಂಗುವಾಗ ಉಳಿದಿರುವ ಅಂಶಗಳು ಪದರಗಳಲ್ಲಿ ಉಳಿದುಕೊಳ್ಳುತ್ತದೆ. ಕೆರೆಗಳಲ್ಲಿ ಕೊಳವೆಬಾವಿ ಕೊರೆಯಬಾರದು ಎಂದು ಆದೇಶಿಸಲಾಗಿದೆ. ಕೆಲವರು ಬಾಟಲ್ ನೀರು ತಂದು ಇದನ್ನು ಕುಡಿಯಲಿ ಎಂದು ಮಾಧ್ಯಮಗಳ ಮುಂದೆ ಪ್ರಚಾರ ಪಡೆಯುತ್ತಿದ್ದಾರೆ. ಕೆರೆಗಳ ನೀರು ಕುಡಿಯಬೇಕು ಎಂದು ಯಾರು ಹೇಳಿದ್ದಾರೆ ಎಂದು ಪ್ರಶ್ನಿಸಿದರು.

ಜನರಿಗೆ ತೊಂದರೆ, ಹಾನಿಯಾಗುವಂತೆ ಯಾವುದೇ ಸರ್ಕಾರ ನಡೆದುಕೊಳ್ಳುವುದಿಲ್ಲ. ನೀರಿನ ಶುದ್ಧೀಕರಣ ಪ್ಲಾಂಟ್ಗಳಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವುದರಿಂದ ಮೂರನೇ ಹಂತದ ಶುದ್ಧೀಕರಣದಷ್ಟೇ ಶುದ್ಧವಾಗುತ್ತಿದೆ. ಐ.ಐ.ಎಸ್.ಸಿ ವಿಜ್ಞಾನಿಗಳು ಪ್ರತಿನಿತ್ಯ ನಿರಂತರವಾಗಿ ವರದಿ ನೀಡುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಒಳಚರಂಡಿ ನೀರು ಕೆರೆಗೆ ಹರಿಯುತ್ತಿದೆ. ನ್ಯಾಯಾಲಯದಲ್ಲೂ ದೂರು ದಾಖಲಾಗಿದ್ದು ಎಲ್ಲ ಮಾಹಿತಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ಕೇವಲ ಬಾಯಿ ಚಪಲಕ್ಕೆ ಮಾತನಾಡುವುದು ಸರಿಯಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ, ಎಸ್.ಎನ್.ಚಿನ್ನಪ್ಪ, ನಂಜುಂಡಗೌಡ, ಶ್ರೀನಿವಾಸನ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-16-1164312561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.