ಚಿಂತಾಮಣಿ: ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕೃಷ್ಣ ಅವರ ತೋಟದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೊ ವತಿಯಿಂದ ಕೇತ್ ಸುರಕ್ಷಾ ಅಭಿಯಾನ ಯೋಜನೆಯಡಿ ಸಮತೋಲನ ರಸಗೊಬ್ಬರಗಳ ಬಳಕೆ ಹಾಗೂ ಇತರೆ ಕೃಷಿ ಸಾಮಗ್ರಿಗಳ ಕುರಿತು ಜಾಗೃತಿ ಅಭಿಯಾನವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಎಂ.ಪಾಪಿರೆಡ್ಡಿ ಮಾತನಾಡಿ ‘ಹೊಲ ಉಳಿಸಿ- ಕೃಷಿ ಉಳಿಸಿ’ ಎಂಬ ಘೋಷ ವಾಕ್ಯದೊಂದಿಗೆ ವಿಜ್ಞಾನಿಗಳ ತಂಡ ಗ್ರಾಮಗಳಿಗೆ ತೆರಳಿ ರೈತರ ಜಮೀನುಗಳಲ್ಲೇ ಸಮತೋಲನ ರಸಗೊಬ್ಬರಗಳ ಬಳಕೆ ಕುರಿತು ರೈತರಿಗೆ ಅರಿವು ಮೂಡಿಸುವ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಈಚಿನ ವರ್ಷಗಳಲ್ಲಿ ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಭೂಮಿ ಹಾಳಾಗುತ್ತಿದೆ. ಈ ನಿಟ್ಟಿನಲ್ಲಿ ಚಿಂತನೆ ನಡೆಸಿ ಸರಿಪಡಿಸಿಕೊಳ್ಳದಿದ್ದರೆ, ಮುಂದೆ ರೈತರು ಬಾರಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ರೈತರು ಶೇ 25ರಷ್ಟಾದರೂ ಸಾವಯವ ಕೃಷಿಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.

ರೈತರು ಸಾವಯವ, ನೈಸರ್ಗಿಕ, ರಾಸಾಯನಿಕಗಳ ಸಮತೋಲನ ಕೃಷಿಯನ್ನು ಕೈಗೊಂಡು ಭೂಮಿಯನ್ನು ಮತ್ತು ಜನರ ಆರೋಗ್ಯವನ್ನು ಕಾಪಾಡಬೇಕು. ಯಥೇಚ್ಚವಾಗಿ ರಾಸಾಯನಿಕ ಗೊಬ್ಬರಗಳ ಮೂಲಕವೇ ಕೃಷಿಯನ್ನು ಕೈಗೊಂಡರೆ ರೈತರು ಸಹ ದಿವಾಳಿಯಾಗಬೇಕಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸಿಕೊಂಡು ವಿಜ್ಞಾನಿಗಳ ಸಲಹೆಯಂತೆ ಮಾತ್ರ ರಸಗೊಬ್ಬರ ಬಳಸಬೇಕು ಎಂದರು.

ಸಾವಯವ ಹಾಗೂ ಸಮಗ್ರ ಕೃಷಿ ನೀತಿಯನ್ನು ಅಳವಡಿಸಿಕೊಂಡಿರುವ ಪ್ರಗತಿಪರ ರೈತ ರಾಧಾಕೃಷ್ಣ ಅವರು ರೈತರಿಗೆ ತನ್ನ ತೋಟದ ಪ್ರಾತ್ಯಕ್ಷಿಕೆ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು. ಬೀಜ, ಗೊಬ್ಬರ ಯಾವುದನ್ನು ಹೊರಗಡೆಯಿಂದ ತರುವುದಿಲ್ಲ. ಯಾವುದನ್ನು ಖರೀದಿಸದೆ, ಉತ್ಪಾದನೆಯನ್ನು ಮಾಡಿ ನಾವೇ ಮಾರಾಟ ಮಾಡುತ್ತೇವೆ ಎಂದು ವಿವರಿಸಿದರು.

ರೈತರು ಮತ್ತು ವಿಜ್ಞಾನಿಗಳು ಸಾವಯವ ಕೃಷಿಯ ಎಲ್ಲ ವಿಭಾಗಗಳನ್ನು ಹಾಗೂ ಸಮಗ್ರ ಕೃಷಿಯ ಜೇನು ಸಾಕಣೆ, ಕುರಿ– ಮೇಕೆಗಳ ಸಾಕಣೆ, ಹೈನುಗಾರಿಕೆಯ ಎಲ್ಲ ವಿಭಾಗಗಳ ಪರಿಚಯ ಮಾಡಿಕೊಟ್ಟರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಬೆಂಗಳೂರಿನ ಹೆಬ್ಬಾಳದ ವಿಜ್ಞಾನಿಗಳು, ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-16-1951313219

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.