ಚಿಂತಾಮಣಿ: ನಗರದ ಬ್ರಾಹ್ಮಣರಪೇಟೆ ನಿವಾಸಿ ಸ್ಟ್ಯಾಂಪ್ ವೆಂಡರ್ ಬಿ.ಎಸ್. ಸುಬ್ರಮಣ್ಯಂ (60) ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರಿಗೆ ಪತ್ನಿ, ಪುತ್ರ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅವರ ಮಗ ಹೊಸಕೋಟೆಯಲ್ಲಿ ವಾಸವಿದ್ದಾರೆ. ಸುಬ್ರಮಣ್ಯಂ ಅವರು ಪ್ರತಿನಿತ್ಯವೂ ಚಿಂತಾಮಣಿಯಿಂದ ಹೊಸಕೋಟೆಗೆ ಮತ್ತು ಹೊಸಕೋಟೆಯಿಂದ ಚಿಂತಾಮಣಿಗೆ ಬಂದು ಹೋಗುತ್ತಿದ್ದರು. ಅದೇ ರೀತಿ ಮಂಗಳವಾರವೂ ಚಿಂತಾಮಣಿಗೆ ಬರಲು ಹೊಸಕೋಟೆಯಲ್ಲಿ ಬಸ್ ಹತ್ತಿದ್ದಾರೆ. ಚೊಕ್ಕಹಳ್ಳಿ ಕೈಗಾರಿಕಾ ಪ್ರಾಂಗಣದ ಬಳಿ ಸುಬ್ರಮಣ್ಯಂ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಸ್ನಲ್ಲೇ ಮೃತಪಟಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಸಂಜೆ ನಗರದ ನೆಕ್ಕುಂದಿ ಅಗ್ರಹಾರದ ಬ್ರಾಹ್ಮಣರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-16-1719690198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.