ಚಿಂತಾಮಣಿ: ಕರ್ತವ್ಯದಲ್ಲಿದ್ದ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ನಾಗಮ್ಮ ಫಕೀರಪ್ಪಗೋಳ್, ಜೀಪ್ ಚಾಲಕ ವೇಣುಗೋಪಾಲ್ ಮೇಲೆ ಶನಿವಾರ ಆತ್ರಿ ತಾಲ್ಲೂಕಿನ ಚಿನ್ನಸಂದ್ರದ ಬಳಿಯ ಅಂಗಡಿಯೊಂದರ ಬಳಿ ಯುವಕರ ಗುಂಪು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿದೆ.

ಈ ಸಂಬಂಧ ಅವರು ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಪವಿಭಾಗದ ಚಿಂತಾಮಣಿ ವೃತ್ತದಲ್ಲಿ ರಾತ್ರಿ ಗಸ್ತು ಕರ್ತವ್ಯಕ್ಕೆ ಜೀಪಿನಲ್ಲಿ ತೆರಳಿದ್ದ ವೇಳೆ ಘಟನೆ ನಡೆದಿದೆ.

ನಗರ, ಬೂರಗಮಾಕಲಹಳ್ಳಿ, ಮಾಡಿಕೆರೆ ಕ್ರಾಸ್, ಕುರುಟಹಳ್ಳಿ ಕ್ರಾಸ್ ಗಸ್ತು ಮುಗಿಸಿಕೊಂಡು ಚಿನ್ನಸಂದ್ರ ಗ್ರಾಮದ ಬಳಿ ಬಂದಾಗ ರಾತ್ರಿ 12.40 ಸಮಯದಲ್ಲಿ ಗಂಟೆಯಾಗಿತ್ತು. ಚಿನ್ನಸಂದ್ರ ಗ್ರಾಮದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯ ಜಮ್ ಜಮ್ ಹೋಟೆಲ್ ತೆರೆದಿತ್ತು. ಜೀಪ್ ಚಾಲಕ ವೇಣುಗೋಪಾಲ್, ಇಷ್ಟು ಹೊತ್ತಾದರೂ ಹೋಟೆಲ್ ತೆರೆದ್ದೀರಿ, ಬಂದ್ ಮಾಡಿ ಸೂಚಿಸಿದರು. ಮಾಲೀಕ ಹೋಟೆಲ್ ಬಾಗಿಲು ಮುಚ್ಚುವ ವೇಳೆ ಯುವಕರ ಗುಂಪೊಂದು ಅಂಗಡಿ ಏಕೆ ಮುಚ್ಚಬೇಕೆಂದು ವೇಣುಗೋಪಾಲ್ ಅವರೊಂದಿಗೆ ಮಾತಿನ ಚಕಮುಖಿಗೆ ಇಳಿದಿದ್ದಾರೆ.

‘ಈ ದೃಶ್ಯವನ್ನು ಮೊಬೈಲ್ ಮೂಲಕ ವೀಡಿಯೊ ಮಾಡುತ್ತಿದ್ದೆ. ನಾಗೇಂದ್ರ ಎಂಬ ಯುವಕ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡು ಏಕೆ ವೀಡಿಯೊ ಮಾಡುತ್ತಿಯಾ ಎಂದು ಎದೆಯ ಭಾಗದಿಂದ ಹಿಂದಕ್ಕೆ ನೂಕಿದ್ದಾನೆ. ಅವನ ಜತೆಯಲ್ಲಿದ್ದ ಐವರು ಏಕಾಏಕಿ ವೇಣುಗೋಪಾಲ್ ಮೇಲೆ ಕೈಗಳಿಂದ ಹಲ್ಲೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಈ ಆರು ಜನರ ಗುಂಪು ನನ್ನ ಮೇಲೆ ಹಾಗೂ ವೇಣುಗೋಪಾಲ್ ಮೇಲೆ ಆಲಂಬಗಿರಿ ಗ್ರಾಮದ ನಾಗೇಂದ್ರ, ನವೀನ್, ನರೇಂದ್ರ ಯಾದವ್, ಬೆಂಗಳೂರಿನ ಯಲಹಂಕದ ಪುನೀತ್ ಹಾಗೂ ಮತ್ತಿಬ್ಬರು ಅಪರಿಚಿತರು’ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-18-1396749077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.