ಗೂಳೂರು(ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು ಗ್ರಾಮದೇವತೆ ಪಾತಕೋಟ ಗಂಗಮ್ಮ 5ನೇ ವರ್ಷದ ಹೂವಿನ ಕರಗ ಮಹೋತ್ಸವ ಶುಕ್ರವಾರ ರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.

ಗ್ರಾಮದ ರಾಜಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪಾತಕೋಟ ಗಂಗಮ್ಮ ದೇಗುಲದ ಒಳ ಮತ್ತು ಹೊರ ಆವರಣದಲ್ಲಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ದೇವಿಗೆ ಫಲಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಮತ್ತು ಹಸಿ ಕರಗ ನಡೆಯಿತು.

ಗ್ರಾಮದಲ್ಲಿ ಮಹಿಳೆಯರು, ಹೆಣ್ಣುಮಕ್ಕಳು ತಂಬಿಟ್ಟಿನ ದೀಪದಾರತಿ ಮೆರವಣಿಗೆ ಮಾಡಿದರು. ದೇವಿಗೆ ದೀಪ ಬೆಳಗಿಸಿ, ಮುಂಗಾರು ಮಳೆ ಆಗಿ, ಉತ್ತಮವಾಗಿ ಬೆಳೆ ಆಗಲಿ ಎಂದು ಹರಕೆ ಹೊತ್ತರು. ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ಕೋಲಾರ ಜಿಲ್ಲೆಯ ಎಸ್.ಅಗ್ರಹಾರದ ಪಿ.ಶಿವರಾಜ್ ಕೈಗಳಿಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ನಂತರ ಗಂಗಮ್ಮ ದೇವಾಲಯಕ್ಕೆ ಆಗಮಿಸಿ, ಪಿ.ಶಿವರಾಜ್ ಹೂವಿನ ಕರಗ ತಲೆ ಮೇಲೆ ಹೊತ್ತು ಬರುತ್ತಿದ್ದಂತೆ ವೀರಕುಮಾರರು ಕೈಯಲ್ಲಿ ಇದ್ದ ಕತ್ತಿಗಳನ್ನು ಎದೆಗೆ ಹೊಡೆದುಕೊಂಡು ಭಕ್ತಿ ಸಮರ್ಪಿಸಿದರು. ಕರಗಕ್ಕೆ ಮಹಿಳೆಯರು ಕರ್ಪೂರದ ದೀಪ ಬೆಳಗಿಸಿದರು. ದೇವಾಲಯದ ಮುಂದೆ ಕೆಲ ಕಾಲ ನೃತ್ಯ ಮಾಡಿದರು.

ಗ್ರಾಮದ ಬಸ್ ನಿಲ್ದಾಣದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಮತ್ತು ತೆಲುಗು ಚಲನಚಿತ್ರಗಳ ಹಾಡುಗಳಿಗೆ ಕಲಾವಿದರು ನೃತ್ಯ ಮಾಡಿದರು.

ಗ್ರಾಮದ ರಾಜಬೀದಿಗಳಲ್ಲಿ ಕರಗಕ್ಕೆ ಸ್ವಾಗತಿಸಲು ಮಹಿಳೆಯರು, ಹೆಣ್ಣುಮಕ್ಕಳು ಮನೆಗಳ ಮುಂದೆ ರಂಗೋಲಿ ಬಿಡಿಸಿದ್ದರು. ಮನೆಗಳ ಮುಂದೆ ಬಂದ ಹೂವಿನ ಕರಗಕ್ಕೆ ದೀಪ ಬೆಳಗಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಗ್ರಾಮದ ಹಿರಿಯರಾದ ಎಸ್.ಎಸ್.ರಮೇಶಬಾಬು, ಗೂಳೂರು ಬಾಬು ಚಾಲನೆ ನೀಡಿದರು. ಎಸ್.ಎಸ್.ರಮೇಶಬಾಬು, ಬಾಬುರೆಡ್ಡಿ, ಕೃಷ್ಣಪ್ಪ, ಸುಬ್ಬುರಾಮು, ಮಧುಸೂದನರೆಡ್ಡಿ, ವೆಂಕಟೇಶ್, ಗೊರ್ತಪಲ್ಲಿ ಶಂಕರರೆಡ್ಡಿ, ಎ.ವಿ.ಪೂಜಪ್ಪ, ವಿಷ್ಣುವರ್ಧನ ರೆಡ್ಡಿ, ನರಸಿಂಹಪ್ಪ, ಯಶ್ವಂತ್, ನೂರಿ, ಜಿ.ವೆಂಕಟೇಶ್, ಬಾಬಾ, ಮುನ್ನಾಖಾನ್, ಸುಭಾನ್ಸಾಬ್, ವೀರನಾರಾಯಣ, ಆದಿನಾರಾಯಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-16-1167142640

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.