ಗೂಳೂರು (ಬಾಗೇಪಲ್ಲಿ): ತಾಲ್ಲೂಕಿನ ಗೂಳೂರು-ಬಿಳ್ಳೂರು ಮಾರ್ಗದ ಚಿನ್ನಕಾಯಲಪಲ್ಲಿ ಗ್ರಾಮದ ಕ್ರಾಸ್ನಲ್ಲಿ ಸೋಮವಾರ ಬೆಳಿಗ್ಗೆ ಬಿದ್ದ ಗುಡುಗು, ಮಿಂಚಿನ ಮಳೆಗೆ ಮರವೊಂದು ರಸ್ತೆ ಮೇಲೆ ಬಿದ್ದಿದೆ. ಇದರಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು.

ಪಟ್ಟಣ ಮತ್ತು ತಾಲ್ಲೂಕಿನಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಮೋಡ ಕವಿದ ವಾತಾವರಣ ಇತ್ತು. ಸೋಮವಾರ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಭಾರಿ ಗುಡುಗು, ಮಳೆ ಬಿದ್ದಿದೆ. ಡಾ.ಎಚ್.ಎನ್.ವೃತ್ತ, ವಾಲ್ಮೀಕಿ, ಡಾ.ಬಿ.ಆರ್.ಅಂಬೇಡ್ಕರ್ ನಗರ ಮತ್ತು 9ನೇ ವಾರ್ಡ್ನ ರಸ್ತೆಗಳಲ್ಲಿ ಮಳೆಯ ಮತ್ತು ಚರಂಡಿ ನೀರು ಹರಿಯಿತು. ಇದರಿಂದ ರಸ್ತೆ ಕೆಸರುಮಯ ಆಗಿತ್ತು.

ಗೂಳೂರು ಹೋಬಳಿಯ ಚಿನ್ನಕಾಯಲಪಲ್ಲಿ ಗ್ರಾಮದ ರಸ್ತೆಗೆ ಮರ ಬಿದ್ದಿದೆ. ಆಟೊ, ಶಾಲಾ ವಾಹನ ಸೇರಿದಂತೆ ಬಸ್ ಸಂಚಾರಕ್ಕೆ ತೊಂದರೆ ಆಗಿದೆ.

ಚಿನ್ನಕಾಯಲಪಲ್ಲಿ ಗ್ರಾಮದ ಕೆ.ವಿ.ಪ್ರಶಾಂತ್ಕುಮಾರ್ ಮತ್ತು ರೈತರು ಆಗಮಿಸಿ ಯಂತ್ರದ ಮೂಲಕ ಮರದ ಕೊಂಬೆ ತೆರವುಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-16-88571452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.