ಭಾನುವಾರ, 17 ಮೇ 2026
×
ADVERTISEMENT

ಚಿಕ್ಕಬಳ್ಳಾಪುರ: ಬಿಸಿಲಿನ ಝಳಕ್ಕೆ ಜನರು ಹೈರಾಣು

ನರೇಂದ್ರ ಕೆ
Published : 19 ಏಪ್ರಿಲ್ 2026, 0:15 IST
Last Updated : 19 ಏಪ್ರಿಲ್ 2026, 6:28 IST
ADVERTISEMENT
ಫಾಲೋ ಮಾಡಿ
Comments
ಕಳೆದ ವರ್ಷಕ್ಕಿಂತ ಈ ವರ್ಷ ಬಿಸಿಲು ಹೆಚ್ಚಾಗಿದೆ. ಪಟ್ಟಣದಲ್ಲಿ ನೆರಳು ಇಲ್ಲ. ಕುಡಿಯಲು ನೀರೂ ಇಲ್ಲ. ಸ್ಥಳೀಯ ಆಡಳಿತ ಕೂಡಲೇ ಅಲ್ಲಲ್ಲಿ ಅರವಂಟಿಕೆಗಳನ್ನು ಸ್ಥಾಪಿಸಿ ಜನರ ಬಾಯಾರಿಕೆ ನೀಗಿಸಬೇಕು.
– ರಾಮಕೃಷ್ಣಪ್ಪ, ಸ್ಥಳೀಯ ನಿವಾಸಿ
ಮಧ್ಯಾಹ್ನದ ಮೇಲೆ ರಸ್ತೆಯಲ್ಲಿ ಜನರೇ ಇರುವುದಿಲ್ಲ. ಹೀಗಾಗಿ ವ್ಯಾಪಾರವೂ ಕಡಿಮೆಯಾಗಿದೆ. ಆಟೊದಲ್ಲಿ ಕುಳಿತರೂ ಬಿಸಿಗಾಳಿ ಅಪ್ಪಳಿಸುತ್ತದೆ. ಪಟ್ಟಣದ ಮುಖ್ಯ ರಸ್ತೆಗಳಲ್ಲಿ ದೊಡ್ಡ ಮರಗಳಿಲ್ಲದ ಕಾರಣ ಆಟೊ ನಿಲ್ಲಿಸಲು ನೆರಳಿನ ಜಾಗ ಸಿಗುವುದೇ ಕಷ್ಟವಾಗಿದೆ. ಪಟ್ಟಣದ ಅಭಿವೃದ್ಧಿ ಬಗ್ಗೆ ಮಾತನಾಡುವ ನಾಯಕರು ಜನಸಾಮಾನ್ಯರಿಗೆ ಬೇಕಾದ ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು.
– ಶಂಕರ್, ಆಟೊ ಚಾಲಕ
ಅತಿಯಾದ ಉಷ್ಣಾಂಶದಿಂದ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಕೂಲರ್ ಅಥವಾ ಎ.ಸಿ ಇಲ್ಲದೆ ಮನೆಯೊಳಗೆ ಇರಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಿದ್ಯುತ್ ಬಿಲ್ ಕೂಡ ಏರಿಕೆಯಾಗುತ್ತಿದೆ.
– ಶಾರದಮ್ಮ, ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT