ಶಿಡ್ಲಘಟ್ಟ: ಕೈವಾರ ತಾತಯ್ಯನವರ 300ನೇ ವರ್ಷದ ಜಯಂತಿ ಅಂಗವಾಗಿ ತಾಲ್ಲೂಕಿನ ಬೈರಗಾನಹಳ್ಳಿ ಲಕ್ಷ್ಮಿನರಸಿಂಹ ದೇವಾಲಯದಿಂದ ಸಾದಲಿ ರಾಮಮಂದಿರದವರೆಗೆ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಂ ಅವರ ನೇತೃತ್ವದಲ್ಲಿ ರಾಮದಂಡು ಸಂಕೀರ್ತನಾ ಪಾದಯಾತ್ರೆ ಶನಿವಾರ ನಡೆಯಿತು.

ಬೆಳಗ್ಗೆ 6 ಗಂಟೆಗೆ ಬೈರಗಾನಹಳ್ಳಿ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಾಯಿತು. ಸಾವಿರಾರು ಭಕ್ತರು ನಾರೇಯಣ ಧ್ವಜ ಹಿಡಿದು ಭಜನೆ ಮಾಡುತ್ತಾ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಸುಬ್ಬರಾಯನಹಳ್ಳಿ, ಈ. ತಿಮ್ಮಸಂದ್ರ, ವೆಂಕಟಾಪುರ, ನೇರಳೇಮರದಹಳ್ಳಿ, ಪೂಸಗಾನದೊಡ್ಡಿ, ಸಾದಲಿ ಕ್ರಾಸ್ ಮಾರ್ಗವಾಗಿ ಸಾದಲಿ ರಾಮಭಜನಾ ಮಂದಿರದಲ್ಲಿ ಪಾದಯಾತ್ರೆಯ ಸಂಕೀರ್ತನೆಯ ಸಮರ್ಪಣೆ ಮಾಡಲಾಯಿತು. ನಂತರ ಸಾದಲಿಯ ಸಾದಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ರಾಮದಂಡು ಪಾದಯಾತ್ರೆಗೆ ಗ್ರಾಮಗಳನ್ನು ಸಿಂಗರಿಸಲಾಗಿತ್ತು. ಗ್ರಾಮಸ್ಥರು ದಾರಿಯುದ್ದಕ್ಕೂ ರಸ್ತೆಗಳಲ್ಲಿ ತಳಿರು ತೋರಣ ಕಟ್ಟಲಾಗಿತ್ತು. ರಸ್ತೆಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಹಾಕಲಾಗಿತ್ತು. ಗ್ರಾಮಗಳಲ್ಲಿ ಭಕ್ತರು ರಾಮ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಪಾದಯಾತ್ರೆಯ ಭಜನೆ ಸಂಕೀರ್ತನೆ ಉಸ್ತುವಾರಿಯನ್ನು ಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್ ವಹಿಸಿದ್ದರು.

ಪಾದಯಾತ್ರೆಯಲ್ಲಿ ಕೈವಾರ ಮಠ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಸದಸ್ಯ ಕೆ.ನರಸಿಂಹಪ್ಪ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಸಾದಲಿಯ ಹಿರಿಯ ವಕೀಲ ಅಶ್ವಥನಾರಾಯಣ್, ಡಾ.ಸತ್ಯನಾರಾಯಣ್, ಮಠದ ವ್ಯವಸ್ಥಾಪಕ ಕೆ.ಲಕ್ಷ್ಮೀನಾರಾಯಣ್ ಹಾಗೂ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-16-1580694146

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.