ಚಿಂತಾಮಣಿ: ತಾಲ್ಲೂಕಿನ ಕೈವಾರ ಮತ್ತು ಬನಹಳ್ಳಿ ಗ್ರಾಮ ದೇವತೆಗಳ ಊರ ದ್ಯಾವರಗಳ ಜಾತ್ರೆಯನ್ನು ಸಾಂಪ್ರದಾಯಿಕವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು.

ಬುಧವಾರ ನಡು ಬೀದಿ ಗಂಗಮ್ಮಗೆ ದೀಪೋತ್ಸವವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಕೈವಾರ ಬೆಟ್ಟದ ರಸ್ತೆ ಮಧ್ಯೆ ಗಂಗಮ್ಮ ದೇವಿಯನ್ನು ಸ್ಥಾಪನೆ ಮಾಡಿ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು.

ನಡುಬೀದಿ ಗಂಗಮ್ಮ ದೇವಿಗೆ ಶಾಶ್ವತವಾದ ದೇವಸ್ಥಾನವೂ ಇಲ್ಲ. ಜೊತೆಗೆ ನಿರಂತರವಾಗಿ ಪೂಜೆಯೂ ನೆರವೇರುವುದಿಲ್ಲ. ಐದು ವರ್ಷಕ್ಕೊಂದು ಬಾರಿ ನಡೆಯುವ ಊರ ದೇವರ ಜಾತ್ರೆಯಲ್ಲಿ ಮಾತ್ರ ಬೆಟ್ಟದ ರಸ್ತೆಯಲ್ಲಿ ತಾತ್ಕಾಲಿಕವಾಗಿ ಒಂದು ದಿನ ಗಂಗಮ್ಮ ದೇವಿಯನ್ನು ಪ್ರತಿಷ್ಠಾಪನೆ ಮಾಡಿ, ಪೂಜೆ ನೆರವೇರಿಸಲಾಗುತ್ತದೆ.

ಉಗ್ರ ರೂಪ ತಾಳಿದ ಗಂಗಮ್ಮ ದೇವಿಗೆ ಕುರಿ ಬಲಿಕೊಟ್ಟು ಅದರ ರಕ್ತ ಮತ್ತು ಮಾಂಸದ ತುಂಡುಗಳನ್ನು ಊರಿನ ಸುತ್ತ ಪ್ರಮುಖ ಸ್ಥಳಗಳಲ್ಲಿ ಹಾಕಲಾಗುತ್ತದೆ. ಆಗ ದೇವಿ ಶಾಂತಳಾಗಿ ಊರಿನ ರಕ್ಷಣೆ ಮಾಡುತ್ತಾಳೆಂಬ ನಂಬಿಕೆ ಗ್ರಾಮಸ್ಥರಲ್ಲಿದೆ. ನಂತರ ದೇವಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ.

ಗ್ರಾಮದ ಎಲ್ಲ ಮಹಿಳೆಯರು ತಲೆ ಮೇಲೆ ದೀಪಗಳನ್ನು ಹೊತ್ತು ಮೆರವಣಿಗೆ ಮೂಲಕ ಸಾಗಿ ಗಂಗಮ್ಮ ದೇವಿಗೆ ದೀಪ ಬೆಳಗಿದರು.

ದೀಪೋತ್ಸವದ ಅಂಗವಾಗಿ ಅಮ್ಮನವರ ಮೂರ್ತಿಗೆ ಅಭಿಷೇಕ ಸೇವೆ ನೆರವೇರಿಸಲಾಯಿತು. ವಿಶೇಷ ಪೂಜೆ ಮಾಡಿ ಮಹಾಮಂಗಳಾರತಿ ಮಾಡಲಾಯಿತು.

ತಮಟೆ ಬಾರಿಸುತ್ತ ಗಂಗಮ್ಮ ದೇವಿಯ ಹಾಡು ಹೇಳಿದರು. ಮಹಿಳೆಯರು, ಊರ ಹಿರಿಯರು ದೀಪ ಬೆಳಗಿದರು. ಯುವಕರು ಅತಿ ಉತ್ಸಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-16-2074024010

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.