ಚಿಂತಾಮಣಿ: ‘ಆರೋಗ್ಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಎಂಆರ್ಐ ಯಂತ್ರ ಕೊಡಿಸಲಾಗದಿದ್ದ ವ್ಯಕ್ತಿಗೆ ನನ್ನ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡುವ ಅರ್ಹತೆ ಇಲ್ಲ’

ಹೀಗೆಂದು ಸಂಸದ ಡಾ.ಕೆ. ಸುಧಾಕರ್ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಟೀಕಾಪ್ರಹಾರ ನಡೆಸಿದರು.

ತಾಲ್ಲೂಕಿನ ಕೋಟಗಲ್ ಗ್ರಾಮದಲ್ಲಿ ಸೋಮವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ‘ವಿಶೇಷ ಕಂದಾಯ ಉಪಗ್ರಾಮಗಳ ರಚನೆ ಹಾಗೂ ಅನಧಿಕೃತ ಮನೆಗಳಿಗೆ ಶಾಶ್ವತ ಮಾಲೀಕತ್ವ ನೀಡುವ ಅಭಿಯಾನ’ ಕಾರ್ಯಕ್ರಮಕ್ಕೆ ಉದ್ಘಾಟಿಸಿ, ಮಾತನಾಡಿದರು.

‘ಸಂಸದ ಡಾ.ಕೆ. ಸುಧಾಕರ್ ಅವರು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ನನ್ನ ಮುಖವಾಡ ಕಳಚುವುದಾಗಿ ಹೇಳಿದ್ದಾರೆ. ನನಗಿರುವುದು ಒಂದೇ ಮುಖ. ಕೋವಿಡ್ ಕಾಲಘಟ್ಟದಲ್ಲಿ ಅವರ ವ್ಯಾಘ್ರ ಮುಖವನ್ನು ರಾಜ್ಯದ ಜನರು ಕಂಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಜಿಲ್ಲೆಯಲ್ಲಿ ಅವರು ಮಾಡಿದ್ದ ಯೋಜನೆಗಳಿಗೆ ನಾನು ಟೇಪ್ ಕಟ್ ಮಾಡುತ್ತಿದ್ದೇನೆ ಎಂದಿರುವುದು ಅವರ ಬಾಯಿಚಪಲವಲ್ಲದೆ ಮತ್ತೇನೂ ಅಲ್ಲ. ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ ಖರ್ಚು ಮಾಡಿದ್ದ ಹಣವನ್ನು ಅಧಿಕೃತವಾಗಿ ಮಂಜೂರು ಮಾಡಿಸಿರಲಿಲ್ಲ. ನಾವು ಸಾಕಷ್ಟು ಹೆಣಗಾಡಿ ಮಂಜೂರು ಮಾಡಿಸಿದೆವು. ನಂದಿ ಬೆಟ್ಟಕ್ಕೆ ರೋಪ್ ವೇ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಇಲಾಖೆ ಮಂಜೂರಾತಿ ಪಡೆದಿರಲಿಲ್ಲ. ಕಳೆದ ಮೂರು ವರ್ಷಗಳಿಂದ ಕಾನೂನಾತ್ಮಕ ಪ್ರಕ್ರಿಯೆ ಕೈಗೊಂಡಿದ್ದೇವೆ. ಹೂ ಮಾರುಕಟ್ಟೆ, ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ಎಲ್ಲ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಕೈಗೊಂಡು ಹಣ ಮಂಜೂರಾತಿ ಮಾಡಿಸಿದ್ದೇನೆ’ ಎಂದರು.

ಯೋಜನೆಗಳನ್ನು ಘೋಷಣೆ ಮಾಡಿ ಪ್ರಚಾರ ಪಡೆಯುವುದು ಮುಖ್ಯವಲ್ಲ. ಘೋಷಣೆ ಮಾಡಿದ ಯೋಜನೆಗಳನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಬೇಕು. ಅಧಿಕೃತ ಸರ್ಕಾರಿ ಆದೇಶ, ಅನುದಾನ ಬಿಡುಗಡೆಯಾಗಬೇಕು. ಸ್ಥಳ ನೀಡಬೇಕು, ಟೆಂಡರ್ ಆಗಬೇಕು, ಅಂದಾಜುಪಟ್ಟಿ, ನಕ್ಷೆ ಅನುಮೋದನೆಯಾಗಿ ಕಾಮಗಾರಿ ಪ್ರಾರಂಭವಾಗಬೇಕು. ಕೈಗಾರಿಕಾ ಪ್ರಾಂಗಣಗಳ ಯೋಜನೆಯಲ್ಲಿ ಒಂದು ಸೆ.ಮೀ ಜಾಗವನ್ನು ನಾನು ಪಡೆಯುವ ಯೋಚನೆ ಮಾಡಿಲ್ಲ. ತಾಕತ್ತಿದ್ದರೆ, ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.

ಕೆ.ಸಿ.ವ್ಯಾಲಿ ಮತ್ತು ಎಚ್.ಎನ್.ವ್ಯಾಲಿ ನೀರನ್ನು ಕೆರೆಗಳಿಗೆ ಹರಿಸುತ್ತಿರುವುದು ಕೇವಲ ಅಂತರ್ಜಲ ವೃದ್ಧಿಗೆ ಹೊರತು ಕುಡಿಯಲು ಅಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ವೈಜ್ಞಾನಿಕ ವರದಿಗಳನ್ನು ಆಧರಿಸಿಯೇ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಕೆಲವರು ಬಾಯಿಚಪಲ ಮತ್ತು ಪ್ರಚಾರಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ತಾವೇ ಮೇಧಾವಿಗಳು, ಪ್ರಜ್ಞಾವಂತರ ಎಂಬಂತೆ ಮಾತನಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕು. ರೈತರ ಬದುಕು ಬದಲಾಗಬೇಕು. ಮಕ್ಕಳಿಗೆ ಉದ್ಯೋಗ ಸಿಗಬೇಕು. ಅವರ ಭವಿಷ್ಯ ಉಜ್ವಲವಾಗಬೇಕು ಎಂದು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದೇವೆ. ಡೀಮ್ಡ್ ಫಾರೆಸ್ಟ್(ಪರಿಬಾವಿತ ಅರಣ್ಯ) ಸಮಸ್ಯೆಗೆ ನೇರ ಕಾರಣ ನೀವು, ಸಾವಿರಾರು ಎಕರೆ ರೈತರ ಭೂಮಿ, ಕೆರೆ, ಕುಂಟೆಗಳು, ಸರ್ಕಾರಿ ಜಾಗಗಳು ನಿಮ್ಮ ಬೇಜವಾಬ್ದಾರಿತನದಿಂದ ಡೀಮ್ಡ್ ಫಾರೆಸ್ಟ್ಗೆ ಸೇರಿಕೊಂಡಿವೆ. ವೈಜ್ಞಾನಿಕವಾಗಿ ಕಂದಾಯ ಗ್ರಾಮಗಳ ಅಭಿಯಾನದ ಲೋಪಗಳು ಇದ್ದರೆ ಚರ್ಚೆ ಮಾಡಲಿ ಎಂದರು.

ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ ಕಾರ್ಯಕ್ರಮದ ಉದ್ದೇಶ, ಗುರಿ ಮತ್ತಿತರ ವಿವರಗಳನ್ನು ನೀಡಿದರು.

ತಹಶೀಲ್ದಾರ್ ಸುದರ್ಶನ ಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ಆನಂದ್, ಡಿವೈಎಸ್ಪಿ ಮುರಳೀಧರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುನಿನಾರಾಯಣಪ್ಪ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-16-2137036631

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.