ಶಿಡ್ಲಘಟ್ಟ: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನಸಾಮಾನ್ಯರ ವಾಯುವಿಹಾರಕ್ಕಾಗಿ ಸ್ಥಳೀಯ ಆಡಳಿತವು ಉದ್ಯಾನಗಳನ್ನು ನಿರ್ಮಿಸುತ್ತದೆ. ಹೀಗೆ, ನಿರ್ಮಿಸಿದ ಬಹುತೇಕ ಉದ್ಯಾನಗಳು ನಿರ್ವಹಣೆ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹಾಳು ಕೊಂಪೆಗಳಾಗಿ ಮಾರ್ಪಡುತ್ತವೆ.

ನಗರದ ಹೊರವಲಯದ ಹನುಮಂತಪುರ ಗೇಟ್ ಸಮೀಪ ಪಟ್ರೇನಹಳ್ಳಿ ವ್ಯಾಪ್ತಿಯಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವು ಇತರ ಉದ್ಯಾನಗಳಿಗೆ ಮಾದರಿ ಎಂಬಂತಿದೆ. ಈ ವೃಕ್ಷೋದ್ಯಾನಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ಮುರಿದುಬಿದ್ದಿದ್ದ ಮಕ್ಕಳ ಆಟಿಕೆಗಳನ್ನು ನವೀಕರಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ನೆರಳಿಗಾಗಿ ನಿರ್ಮಿಸಲಾದ ಪರಗೋಲಾಗಳನ್ನು ನವೀಕರಿಸಿ, ಸುಂದರ ಚಿತ್ರಗಳಿಂದ ಸಿಂಗರಿಸಲಾಗಿದೆ. ಮಳೆನೀರು ಸಂರಕ್ಷಣೆಗೆ ಟ್ರಂಚ್ಗಳು ಮತ್ತು ಕ್ಯಾಕ್ಟಸ್ ಪಾರ್ಕ್ ಸಹ ರೂಪುಗೊಳ್ಳುತ್ತಿದೆ.

ಪಟ್ರೇನಹಳ್ಳಿಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ₹3 ಕೋಟಿ ವೆಚ್ಚದಲ್ಲಿ 2017ರ ಜೂನ್ನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಬೆಂಗಳೂರು ಪ್ರಾದೇಶಿಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಶಂಕುಸ್ಥಾಪನೆ ನೆರವೇರಿಸಿದ್ದರು. ಕೋವಿಡ್ ನಂತರ ಜನರ ನೆಚ್ಚಿನ ತಾಣವಾಗಿರುವ ಈ ವಕ್ಷೋದ್ಯಾನವು ಇತ್ತೀಚೆಗೆ ಹಲವು ಮೂಲಸೌಕರ್ಯಗಳ ಕೊರತೆಯಿಂದ ನಲುಗಿತ್ತು. ಜನರು ಈ ಉದ್ಯಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಇದೀಗ ಅರಣ್ಯ ಇಲಾಖೆಯವರು ಉದ್ಯಾನಕ್ಕೆ ಕಾಯಕಲ್ಪ ನೀಡುತ್ತಿದ್ದಾರೆ.

ವಿವಿಧ ಮರಗಳ ತಾಣ: ಸಿಲ್ವರ್ ಓಕ್, ಶ್ರೀಗಂಧ, ಗ್ಲಿರಿಸಿಡಿಯಾ, ಚಿಗರೆ, ಗೇರುಮರ, ಹುಣಿಸೆ, ಸಾಗುವಾನಿ, ಬೇವು, ಬಿದಿರು, ಕರಿ ಜಾಲಿ, ಬಿಳಿ ಜಾಲಿ, ರಕ್ತಚಂದನ, ಹಿಪ್ಪೆಮರ, ಬಾಗೆಮರ, ಮುತ್ತುಗ, ಕಕ್ಕೆ, ನೀಲಗಿರಿ, ಆಲದಮರ, ಅತ್ತಿಮರ, ಅರಳಿಮರ, ತಪಸಿಮರ, ಬೇಲದಮರ, ಈಚಲು, ಹೊನ್ನೆ, ನೇರಳೆ, ಹೊಂಗೆ, ಹಾಲೆ ಮರ ಮುಂತಾದ ಮರಗಳಿದ್ದು, ಅವುಗಳಿಗೆ ನಾಮಫಲಕ, ಮಾಹಿತಿ ಫಲಕಗಳನ್ನು ಅಳವಡಿಸುವ ಕಾರ್ಯ ನಡೆದಿದೆ. ಮರಗಳ ವೈಜ್ಞಾನಿಕ ಹೆಸರು, ಔಷಧೀಯ ಗುಣಗಳು, ಪರಿಸರಕ್ಕೆ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಮಡಿವಾಳ, ಕಳ್ಳಿಪೀರ, ಗಿಣಿ, ಹೂ ಮಕರಂದ ಹೀರುವ ಹಕ್ಕಿಗಳು ಮುಂತಾದ ಜೀವ ವೈವಿಧ್ಯದ ಕುರಿತಾಗಿಯೂ ಚಿತ್ರ ಸಹಿತ ಮಾಹಿತಿ ಫಲಕಗಳನ್ನು ಅಳವಡಿಸಲಾಗುತ್ತಿದೆ. ಮುರಿದುಬಿದ್ದಿದ್ದ ಮಕ್ಕಳ ಆಟಿಕೆಗಳನ್ನು ನವೀಕರಿಸಲಾಗಿದೆ. ಮಕ್ಕಳ ಸಾಹಸ ಕ್ರೀಡೆಗಳಿಗಾಗಿ ವಾಕಿಂಗ್ ಬ್ರಿಡ್ಜ್ ಅಳವಡಿಸಲಾಗಿದೆ. ಕೂರಲು ಬೆಂಚ್ಗಳು ಹಾಗೂ ಕಸ ಹಾಕಲು ಕಸದ ತೊಟ್ಟಿಗಳನ್ನೂ ಇಡಲಾಗಿದೆ.

ಪರಿಸರ ಅಧ್ಯಯನ ಕೇಂದ್ರದ ರೀತಿಯಲ್ಲಿ ಈ ಉದ್ಯಾನವನ ರೂಪಿಸುವ ಉದ್ದೇಶ ನಮ್ಮ ಇಲಾಖೆಯದ್ದು. ಜೀವವೈವಿಧ್ಯತೆ, ಗಿಡ, ಮರ, ಹಕ್ಕಿ, ಚಿಟ್ಟೆ ಪರಿಚಯವನ್ನು ಜನರು ಮಾಡಿಕೊಳ್ಳಬೇಕು. ಪರಿಸರ ಉಳಿಸುವ ನಿಟ್ಟಿನಲ್ಲಿ ಜನರ ಆಲೋಚನೆ ರೂಪಿಸುವ ಜತೆಗೆ ಪ್ರತಿಯೊಬ್ಬರಲ್ಲೂ ಪರಿಸರ ಕಾಳಜಿ ಮೂಡುವಂತೆ ಮಾಡಬೇಕು ಎಂಬ ಅಭಿಲಾಷೆ ನಮ್ಮದು. ಸಾಧ್ಯವಾದಷ್ಟೂ ಶಾಲಾ ಮಕ್ಕಳನ್ನು ಕರೆತಂದು ಮಕ್ಕಳಲ್ಲಿ ಪರಿಸರ ಪ್ರೀತಿ ಹುಟ್ಟುವಂತೆ ಮಾಡುವ ಯೋಜನೆಯಿದೆ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಗವಾಲ್ ತಿಳಿಸಿದರು.

ಇಲ್ಲಿ ಪ್ರತಿ ಗಿಡಮರಗಳ ಬಳಿ, ಪಾದಚಾರಿ ಮಾರ್ಗದ ಎರಡು ಬದಿಗಳು ಹಾಗೂ ಅರಣ್ಯಪ್ರದೇಶದ ಸಾಕಷ್ಟು ಕಡೆ ಟ್ರೆಂಚ್ ಹಾಕಿಸಿದ್ದೇವೆ. ಮಳೆಗಾಲದಲ್ಲಿ ಬೀಳುವ ಪ್ರತಿಯೊಂದು ಹನಿನೀರೂ ಇಲ್ಲಿಯೇ ಹಿಂಗಬೇಕು. ಇದರಿಂದ ನೀರಿನ ಸಂರಕ್ಷಣೆ ಮೂಲಕ ಮರ ಗಿಡಗಳ ಪೋಷಣೆಯೂ ಆಗುತ್ತದೆ ಎಂದು ವಿವರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-16-632776006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.