ಶಿಡ್ಲಘಟ್ಟ: ನಗರದ ಸಿದ್ದಾರ್ಥ ನಗರದ ರೇಷ್ಮೆ ನೂಲು ಬಿಚ್ಚಾಣಿಕೆ (ರೀಲಿಂಗ್) ಘಟಕ ಹಾಗೂ ಎ.ಆರ್.ಎಂ ಘಟಕಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ನವೀನ್ ಭಟ್ ಭೇಟಿ ನೀಡಿ, ಸ್ಥಳೀಯ ರೈತರು ಹಾಗೂ ರೀಲರ್ಗಳ ಸಮಸ್ಯೆಗಳನ್ನು ವಿಚಾರಿಸಿದರು. ಜೊತೆಗೆ ಅವರ ಕಾರ್ಯವೈಖರಿಯನ್ನು ವೀಕ್ಷಿಸಿದರು.

ರೇಷ್ಮೆ ನೂಲು ತಯಾರಿಕೆ, ಟ್ವಿಸ್ಟಿಂಗ್ ಮತ್ತು ಗುಣಮಟ್ಟ ಪರೀಕ್ಷೆ, ರೇಷ್ಮೆ ನೂಲು ಬಿಚ್ಚಾಣಿಕೆ ರೀತಿ, ಗೂಡಿನಲ್ಲಿರುವ ಹುಳು ನಿರ್ಜೀವಗೊಳಿಸುವುದರಿಂದ ಆರಂಭವಾಗಿ ರೇಷ್ಮೆ ದಾರ ಮಾರಾಟ ಮಾಡುವವರೆಗೆ ಹಲವಾರು ಸಂಸ್ಕರಣಾ ವಿಧಾನಗಳನ್ನು ಒಳಗೊಂಡ ಬಗ್ಗೆ ಮಾಹಿತಿ ಪಡೆದರು. ಸಾಂಪ್ರದಾಯಿಕ ನೂಲು ಬಿಚ್ಚಾಣಿಕೆಯಲ್ಲಿ ಸಂಸ್ಕರಣಾ ವಿಧಾನಗಳು ಅನುಕ್ರಮವಾಗಿ, ಗೂಡು ಉಬ್ಬೆ ಕೊಡುವುದು, ಗೂಡು ವಿಂಗಡಣೆ, ಏಕಪಾತ್ರೆಯಲ್ಲಿ ಗೂಡು ಬೇಯಿಸುವುದು. ನೂಲು ಬಿಚ್ಚಾಣಿಕೆ ಹಾಗೂ ಮರು ಸುತ್ತಾಣಿಕೆ ಬಗ್ಗೆ ಮಾಹಿತಿ ಪಡೆದರು.

ಅದೇ ರೀತಿ ಪ್ರಸ್ತುತ ನೂಲು ಬಿಚ್ಚಾಣಿಕೆ ತಾಂತ್ರಿಕತೆ ಸಂಸ್ಕರಣಾಗಳಾದ ಗೂಡು ಶೇಖರಣೆ, ಗೂಡು ವಿಂಗಡಣೆ, ಗೂಡು ಬೇಯಿಸುವುದು, ರೇಷ್ಮೆ ನೂಲು ಬಿಚ್ಚಾಣಿಕೆ, ರೀಲ್ ಪರ್ಮಿಯೇಶನ್, ಮರು ಬಿಚ್ಚಾಣಿಕೆ, ರೀಲ್ ತೂಕದ ಮಾಹಿತಿ ಪಡೆದರು. ನಂತರ ಎಸ್.ಎಲ್.ಎನ್ ಸಿಲ್ಕ್ ಕೈಗಾರಿಕಾ ಕೇಂದ್ರ, ಎಲ್ಲ ವಿಧದ ಬಗೆಬಗೆಯ ಟ್ವಿಸ್ಟಿಂಗ್ ಸಿಲ್ಕ್ ಮತ್ತು ನಲ್ಲಿಮರದಹಳ್ಳಿಯ ಎ.ಆರ್.ಎಂ ಸಿಲ್ಕ್ ಘಟಕಕ್ಕೆ ಭೇಟಿ ನೀಡಿ, ಆಧುನಿಕ ಯಂತ್ರೋಪಕರಣಗಳ ಬಳಕೆ ಬಗ್ಗೆ ಮಾಹಿತಿ ಪಡೆದರು.

ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ ಆರ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಎನ್, ನರೇಗಾ ಐಇಸಿ ಸಂಯೋಜಕ ಲೋಕೇಶ, ರೇಷ್ಮೆ ಇಲಾಖೆ ಸಿಬ್ಬಂದಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-16-1546100588

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.