ಗೌರಿಬಿದನೂರು: ಬದುಕಿದ ಗಂಡ ಸತ್ತಿದ್ದಾನೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಗಂಡನ ಸಂಬಂಧಿಕರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಲ್ಲೂಕಿನ ಸಾಗಾನಹಳ್ಳಿಯ ಅನುಜಾ ಮತ್ತು ಕುಮಾರ್ ಅವರು 9 ವರ್ಷದ ಹಿಂದೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸದ್ಯ ಈ ದಂಪತಿ ದೇವನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೌಟುಂಬಿಕ ಕಲಹದಿಂದಾಗಿ ಅನುಜಾ ಇದ್ದಕ್ಕಿದ್ದಂತೆ ಗಂಡನನ್ನು ತೊರೆದು ಹುಟ್ಟೂರು ಗೌರಿಬಿದನೂರಿಗೆ ಬಂದಿದ್ದಾರೆ.

‘ವಾಪಸ್ ಬರುವಂತೆ ಕುಮಾರ್ ಅವರು ಅನುಜಾ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ನಿನ್ನ ಸಹವಾಸವೇ ಬೇಡ. ನನ್ನ ಗಂಡ ಸತ್ತಿದ್ದಾನೆ (RIP) ಎಂಬುದಾಗಿ ತಮ್ಮ ಫೇಸ್ಬುಕ್ನಲ್ಲಿ ಹಾಕಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಕುಮಾರ್ ಅವರ ಸಹೋದರ ಭಾಸ್ಕರ್ ಸಂಬಂಧಿಕರೊಂದಿಗೆ ಗೌರಿಬಿದನೂರಿಗೆ ಬಂದು ಈ ಕುರಿತು ಅನುಜಾ ಕುಟುಂಬಸ್ಥರಿಗೆ ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಅನುಜಾ ಅವರ ಅಣ್ಣ– ತಮ್ಮಂದಿರು, ಸಂಬಂಧಿಕರು ಕುಮಾರ್ ಕಡೆಯವರ ಮೇಲೆ ಖಾರದ ಪುಡಿ ಎರಚಿ, ಕಬ್ಬಿಣದ ಸಲಾಕೆ, ದೊಣ್ಣೆ, ಕಲ್ಲುಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ’ ಎಂದು ಕುಮಾರ್ ತಂದೆ ವೆಂಕಟರಮಣಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-16-1350062556

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.