ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆಸಲಪರ್ತಿ, ವಡ್ಡರಪಲ್ಲಿಗೆ ಬಸ್: ಗ್ರಾಮಸ್ಥರಲ್ಲಿ ಹರ್ಷ

Published 2 ಆಗಸ್ಟ್ 2024, 13:29 IST
Last Updated 2 ಆಗಸ್ಟ್ 2024, 13:29 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಪೆಸಲಪರ್ತಿ ಹಾಗೂ ಮುಮ್ಮಡಿವಾರಿಪಲ್ಲಿ ಗ್ರಾಮಗಳ ಜನರ ಬಹುವರ್ಷಗಳ ಬೇಡಿಕೆಯಂತೆ ಗ್ರಾಮದಿಂದ ಬೆಂಗಳೂರು ಕಡೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಲಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶುಕ್ರವಾರ ಪೆಸಲಪರ್ತಿ, ವಡ್ಡರಪಲ್ಲಿ ಕಡೆಗೆ ಸಂಚರಿಸುವ ಗ್ರಾಮೀಣ ಸಾರಿಗೆ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.

ತಾಲ್ಲೂಕಿನ ಗೂಳೂರು ಹೋಬಳಿಯ ಪೆಸಲಪರ್ತಿ, ಮುಮ್ಮಡಿವಾರಿಪಲ್ಲಿ ಗ್ರಾಮಗಳು ಬಹಳ ದೂರದಲ್ಲಿ ಆಂಧ್ರಪ್ರದೇಶದ ಗಡಿ ಅಂಚಿನಲ್ಲಿ ಇವೆ. ಗ್ರಾಮಸ್ಥರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಗೂಳೂರು ಹಾಗೂ ಬಾಗೇಪಲ್ಲಿಗೆ ಬರಲು ತೊಂದರೆ ಆಗಿತ್ತು. ಕಾಲೇಜುಗಳ ವಿದ್ಯಾರ್ಥಿಗಳು ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಹಾಗೂ ಜನತಾ ದರ್ಶನಗಳಲ್ಲಿ ಅಹವಾಲು ಸಲ್ಲಿಸಿದ್ದರು ಎಂದು ತಿಳಿಸಿದರು.

ಘಟಕದಲ್ಲಿ 50ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳು ಹಳೆಯದಾಗಿವೆ. ಅವಧಿ ಮೀರಿದ ಬಸ್‌ಗಳನ್ನು ಸಂಚರಿಸಲು ಬಿಡದೇ, ನೂತನ ಬಸ್ ಸಂಚಾರ ಮಾಡಿಸುವಂತೆ ಸಾರಿಗೆ ಇಲಾಖೆ ಸಚಿವರ ಬಳಿ ಚರ್ಚಿಸಲಾಗುವುದು. ಗ್ರಾಮಸ್ಥರಿಗೆ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಮಾಡಿಸಬೇಕು ಎಂದು ತಿಳಿಸಿದರು.

ಶುಕ್ರವಾರ ಬಸ್ ಸಂಚಾರ ಕಂಡ ಗ್ರಾಮಸ್ಥರು, ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದರು.

ಕೆಎಸ್‍ಆರ್‌ಟಿಸಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜು, ಘಟಕದ ಕಚೇರಿ ಅಧಿಕಾರಿ ಖಾಲಿದ್, ಸಹಾಯಕ ಸಂಚಾರಿ ನಿಯಂತ್ರಕ ಕಾರಕೂರುಮೂರ್ತಿ, ಸಂಚಾರಿ ನಿಯಂತ್ರಕ ಚಲಪತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT