ಶಿಡ್ಲಘಟ್ಟ: ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕುತ್ತಾಂಡಹಳ್ಳಿ ಗ್ರಾಮದಲ್ಲಿ ಕೊಳವೆಬಾವಿಗೆ ಹೊಸ ಪಂಪು, ಮೋಟಾರ್ ಅನ್ನು ಅಳವಡಿಸಿ, ನೀರು ಹರಿಸಿತು. ಇದರೊಂದಿಗೆ ಒಂದು ವಾರದಿಂದ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಂತಾಗಿದ್ದು, ಗ್ರಾಮಸ್ಥರು ಪುಳಕಿತರಾದರು.

ಕುತ್ತಾಂಡಹಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಕೊಳವೆಬಾವಿ ಬರಿದಾಗಿತ್ತು. ಮತ್ತೊಂದು ಕೊಳವೆಬಾವಿಯಲ್ಲಿ ನೀರು ಇತ್ತು. ಆದರೆ, ಪಂಪು ಮತ್ತು ಮೋಟಾರ್ ಇರಲಿಲ್ಲ. ಹೀಗಾಗಿ, ಗ್ರಾಮಸ್ಥರು ಸೋಮವಾರ ಖಾಲಿ ಕೊಡಗಳೊಂದಿಗೆ ದೇವರಮಳ್ಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಈ ಕುರಿತು ‘ಪ್ರಜಾವಾಣಿ’ಯ ಮಾರ್ಚ್ 3ರ ಸಂಚಿಕೆಯಲ್ಲಿ ‘ನೀರಿಗಾಗಿ ಕುತ್ತಾಂಡಹಳ್ಳಿ ಜನರ ಒತ್ತಾಯ’ ಎಂಬ ಶೀರ್ಷಿಕೆಯೊಂದಿಗೆ ವರದಿ ಪ್ರಕಟಿಸಿತ್ತು.

ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಹೊಸ ಪಂಪು ಮತ್ತು ಮೋಟಾರ್ ಖರೀದಿಸಿ, ಕೊಳವೆಬಾವಿಗೆ ಅಳವಡಿಸಿದ್ದಾರೆ. ಆ ಮೂಲಕ ಗ್ರಾಮಕ್ಕೆ ನೀರು ಹರಿಯುವಂತೆ ಕ್ರಮ ಕೈಗೊಂಡರು.

ಇಒ ಆರ್. ಹೇಮಾವತಿ ಮಾತನಾಡಿ, ‘ಕುತ್ತಾಂಡಹಳ್ಳಿ ಗ್ರಾಮದಲ್ಲಿ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿತ್ತು. ಈ ಬಗ್ಗೆ ಶಾಸಕರು ನೀಡಿದ ಸೂಚನೆಯಂತೆ ಹೊಸ ಮೋಟಾರ್ ಮತ್ತು ಪಂಪು ಖರೀದಿಸಿ, ಕೊಳವೆಬಾವಿಗೆ ಬಿಟ್ಟು ನೀರು ಹರಿಸಿದ್ದೇವೆ’ ಎಂದು ಹೇಳಿದರು.

ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವಂತೆ ಎಲ್ಲ ಪಿಡಿಒಗಳಿಗೆ ಸೂಚಿಸಲಾಗಿದೆ ಎಂದರು.

ಈ ವೇಳೆ ಪಿಡಿಒ ಸಿದ್ದಿಕ್, ದೇವರಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆಂಪೇಗೌಡ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.