ಬಾಗೇಪಲ್ಲಿ: ತಾಲ್ಲೂಕು ಮಿನಿವಿಧಾನಸೌಧಕ್ಕೆ ಆಗಮಿಸುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು, ಶೌಚಾಲಯದ ಹಾಗೂ ಕಚೇರಿ ಮುಂದೆ ವಾಹನ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಇಲ್ಲ... ಹೀಗೆ ಇಲ್ಲಗಳ ಸರಮಾಲೆಯೇ ಹೆಚ್ಚಾಗಿರುವುದರಿಂದ ಜನರು ಪರದಾಡುವಂತಾಗಿದೆ.
ಕಚೇರಿ ಮುಖ್ಯದ್ವಾರದ ಬಾಗಿಲು ಮುರಿದು ಅನೇಕ ವರ್ಷ ಕಳೆದಿದೆ. ಇದುವರೆಗೂ ಅನೇಕ ಮಂದಿ ತಹಶೀಲ್ದಾರ್ ವರ್ಗಾವಣೆ ಆದರೂ, ಕನಿಷ್ಠ ಗೇಟು ಹಾಕಿಸಿಲ್ಲ. ವಾಹನ ಸವಾರರು ಕಚೇರಿ ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಪಾರ್ಕಿಂಗ್‌ಗೆ ಸ್ಥಳ ಮೀಸಲಿಟ್ಟು ಬ್ಯಾರಿಕೇಡ್ ಹಾಕಿಲ್ಲ. ಆದರೂ ಸಂಬಂಧಪಟ್ಟ ತಹಶೀಲ್ದಾರ್ ಕ್ರಮವಹಿಸಿಲ್ಲ.
ಶೌಚಾಲಯ, ಕುಡಿಯುವ ನೀರಿನ ಘಟಕ, ಗಾಳಿ, ಬೆಳಕು ಇರಬೇಕು ಎಂದು ಆದೇಶ ಇದೆ. ಆದರೆ ತಾಲ್ಲೂಕಿನ ಮಿನಿವಿಧಾನಸೌಧದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದೆ. 4 ತಿಂಗಳು ನೀರು ಸರಬರಾಜು ಆಗಿತ್ತು. ಉದ್ಘಾಟನೆ ಆದ ನಾಲ್ಕು ತಿಂಗಳುಗಳಲ್ಲೇ ಮತ್ತೊಮ್ಮೆ ಕೆಟ್ಟಿದೆ.
ತಾಲ್ಲೂಕು ಕಚೇರಿಯಲ್ಲಿಯೇ ಕುಡಿಯುವ ನೀರು ಸಿಗುತ್ತಿಲ್ಲ. ಜನರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಿಲ್ಲ. ಅಧಿಕಾರಿಗಳು, ಜನರ ಸಮಸ್ಯೆಗಳನ್ನು ಆಲಿಸುತ್ತಾರೆಯೇ? ಎಂದು ಡಿವೈಎಫ್‌ಐ ತಾಲ್ಲೂಕು ಮುಖಂಡ ಸುರೇಶ್‍ಮದಕರಿ ಪ್ರಶ್ನಿಸಿದರು.
ಈ ಹಿಂದೆ ಶುದ್ಧ ಕುಡಿಯುವ ನೀರಿನ ಯಂತ್ರ ಕೆಟ್ಟಿತ್ತು. ‘ಕಚೇರಿಯಲ್ಲಿ ಸೌಲಭ್ಯಗಳ ಕೊರತೆ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಸುದ್ದಿ ಪ್ರಕಟ ಆಗಿತ್ತು. ನಂತರ ಎಚ್ಚೆತ್ತುಕೊಂಡ ಅಂದಿನ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ ಅವರು ಯಂತ್ರ ರಿಪೇರಿ ಮಾಡಿಸಿದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೀರಿನ ಘಟಕ ಲೋಕಾರ್ಪಣೆ ಮಾಡಿದ್ದರು. 4 ತಿಂಗಳುಗಳಲ್ಲಿ ನೀರಿನ ಘಟಕದ ಯಂತ್ರ ಮತ್ತೆ ಕೆಟ್ಟಿದೆ.
ಕೆಟ್ಟಿರುವ ಕುಡಿಯುವ ನೀರಿನ ಘಟಕ ರಿಪೇರಿ ಮಾಡಿಸಲಾಗುವುದು. ಶೌಚಾಲಯ ನಿರ್ಮಿಸಲಾಗುವುದು. ಪಾರ್ಕಿಂಗ್ ವ್ಯವಸ್ಥೆ ಮಾಡಿಸಲು ಕ್ರಮ ತೆಗೆದುಕೊಳ್ಳಲಾಗುವುದುಎನ್.ಮನೀಷ್ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.