ಶಿಡ್ಲಘಟ್ಟ: ತಾಲ್ಲೂಕಿನ ಮಳ್ಳೂರು ಗ್ರಾಮದ ವೃತ್ತದ ಬಳಿ ಹಂದಿಬೇಟೆಯನ್ನಾಡುವ ನಾಯಿಯ ಸ್ಮಾರಕದ ಶಿಲ್ಪ ಪತ್ತೆಯಾಗಿದೆ. ಅದರ ಜತೆಯಲ್ಲಿ ನಾಲ್ಕು ಸಾಲುಗಳ ಕನ್ನಡ ಶಾಸನ ಕೂಡ ಕಂಡುಬಂದಿದೆ.

ಮಣ್ಣಿನಲ್ಲಿ ಹುದುಗಿದ್ದ ಈ ಕಲ್ಲುಗಳನ್ನು ಗ್ರಾಮಸ್ಥರಾದ ನಾರಾಯಣಸ್ವಾಮಿ, ಮಂಜುನಾಥ್, ನಾಣಿ, ರೆಡ್ಡಿ, ಬೇಕರಿ ವೆಂಕಟೇಶ್, ಮಧು, ಶ್ರೀನಿವಾಸ ನಾಯಕ್, ನರಸಿಂಹಮೂರ್ತಿ, ಅಶೋಕ್ ಹೊರತೆಗೆದಿದ್ದಾರೆ. ಶಾಸನತಜ್ಞ ಧನಪಾಲ್ ಮತ್ತು ತ್ಯಾಗರಾಜ್ ಅದರಲ್ಲಿ ಕೆತ್ತಿರುವ ಕನ್ನಡ ಲಿಪಿಯನ್ನು ಓದಿದ್ದಾರೆ.

ಈ ಶಿಲ್ಪವು ಶಾಸನದ ಲಿಪಿಯ ದೃಷ್ಟಿಯಿಂದ ಸುಮಾರು 15ನೇ ಶತಮಾನಕ್ಕೆ ಅಂದರೆ ಕ್ರಿ.ಶ. 1432ರ ಮಾರ್ಚ್ 8ರ ಶನಿವಾರಕ್ಕೆ ಅಂದಾಜಿಸಬಹುದು. ಗ್ರಾಮದ ಹೊಲಗಳಲ್ಲಿ ಹಂದಿಯ ಉಪಟಳ ಹೆಚ್ಚಾದಾಗ ಗ್ರಾಮದ ಗಡ್ಡೆದಡೆ ವೊಂಡೆದೆಯರ ಬಾಣ ಎಂಬಾತನು ತನ್ನ ಮುದ್ದಿನ ಬೀಮಾಂಚ ಎಂಬ ನಾಯಿಯೊಡನೆ ಬೇಟೆಗೆ ಹೋದಾಗ, ಬಲಿಷ್ಠ ಹಂದಿಯೊಡನೆ ಹೋರಾಡಿ ಹಂದಿಯನ್ನು ಕೊಂದು ನಾಯಿಯೂ ಮರಣಹೊಂದಿದಾಗ, ತನ್ನ ಮುದ್ದಿನ ನಾಯಿಯ ವೀರತ್ವ ಸೂರ್ಯ ಚಂದ್ರರು ಇರೋವರೆಗೂ ಮುಂದಿನ ಜನಾಂಗಕ್ಕೆ ತಿಳಿಯಲು ಈ ಸ್ಮಾರಕವನ್ನು ಹಾಕಲಾಗಿದೆ ಎಂದು ಅವರು ವಿವರಿಸಿದರು.

ಈ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿದ ಶಾಸನತಜ್ಞ ಡಿ.ಎನ್.ಸುದರ್ಶನರೆಡ್ಡಿ ಅವರು, ಹಂದಿಬೇಟೆ ವೀರಗಲ್ಲು ಎಂದರೆ ಸಾಮಾನ್ಯ ಎಂದು ನಾವು ಭಾವಿಸಬಾರದು. ಇಂತಹುದೇ ಒಂದು ವೀರಗಲ್ಲು ಕನ್ನಡನಾಡಿನ ಚರಿತ್ರೆಯ ಒಂದು ಮಹತ್ವದ ಘಟನೆ– ಚೋಳರ ಮೇಲಿನ ಕನ್ನಡಿಗರ ವಿಜಯದ ಬಗ್ಗೆ ನಮಗೆ ತಿಳಿಸಿಕೊಡುತ್ತದೆ. ಮಂಡ್ಯ ಜಿಲ್ಲೆಯ ಆತಕೂರಿನಲ್ಲಿ ಇರುವ ಹಂದಿಬೇಟೆ ವೀರಗಲ್ಲು ತಕ್ಕೋಳಂ ಕದನದ ವಿವರಗಳನ್ನು ಒಳಗೊಂಡಿದೆ.

ಕ್ರಿ.ಶ.943ನೇ ಇಸವಿಯಲ್ಲಿ ರಾಷ್ಟ್ರಕೂಟರ ಮೂರನೇ ಕೃಷ್ಣನು ಚೋಳರ ಯುವರಾಜ ರಾಜಾದಿತ್ಯನ ವಿರುದ್ಧ ಅರಕೋಣಂ ಬಳಿ ಯುದ್ಧ ಮಾಡಿದ. ಅವನ ಪರವಾಗಿ ಗಂಗ, ನೊಳಂಬ ರಾಜರೂ ಹೋರಾಡಿದ್ದರು. ಹೋರಾಟದಲ್ಲಿ ಗಂಗರ ರಾಜಕುಮಾರ ಇಮ್ಮಡಿ ಬೂತುಗನು ರಾಜಾದಿತ್ಯನು ಕುಳಿತಿದ್ದ ಆನೆಯ ಮೇಲೆ ಜಿಗಿದು ಅಂಬಾರಿಯನ್ನೇ ಸಮರಾಂಗಣ ಮಾಡಿಕೊಂಡು ರಾಜಾದಿತ್ಯನನ್ನು ಕೊಂದನು. ಜಯವು ಕನ್ನಡಿಗರಾದ ರಾಷ್ಟ್ರಕೂಟ ಮಿತ್ರಪಡೆಯದಾಯಿತು. ತಮಿಳುನಾಡು ಕನ್ನಡಿಗರ ವಶವಾಯಿತು. ಮೂರನೇ ಕೃಷ್ಣ ರಾಮೇಶ್ವರದಲ್ಲಿ ವಿಜಯಸ್ಥಂಭ ನೆಟ್ಟನು. ಈ ಯುದ್ಧದ ಸಾಹಸಿ ಬೂತುಗನಿಗೆ ರಾಷ್ಟ್ರಕೂಟರ ಮೂರನೇ ಕೃಷ್ಣ ಬೆಳುವಲದ ವರೆಗಿನ ಪ್ರದೇಶ ಬಳುವಳಿಯಾಗಿ ಕೊಟ್ಟರೆ, ಬೂತುಗನ ಅಂಕಕಾರ ಮನಲೇರನಿಗೆ ಆತಕೂರು ಪ್ರದೇಶ ಕೊಡುಗೆಯಾಗಿ ಸಿಕ್ಕಿತು. ಜೊತೆಗೆ ಮನಲೇರನಿಗೆ ಅವನ ಕೋರಿಕೆಯ ಮೇರೆಗೆ ಕೃಷ್ಣನ ನಾಯಿ ಕಾಳಿಯೂ ಸಿಕ್ಕಿತು.

ಮುಂದೊಂದು ದಿನ ಕಾಳಿ ನಾಯಿಯು ಒಂದು ಬೃಹತ್ ಕಾಡುಹಂದಿ ಜತೆ ಹೋರಾಡುವಾಗ ಮರಣಿಸಿತು. ಮನಲೇರ ಅದಕ್ಕೆ ಒಂದು ಆಲಯ ಕಟ್ಟಿಸಿ, ಅದರ ಪೂಜೆಗೆ ಜನರನ್ನು, ನಿರ್ವಹಣೆಗೆ ಭೂಮಿಯನ್ನೂ ವ್ಯವಸ್ಥೆ ಮಾಡಿದ. ಈ ಎಲ್ಲ ಅಂಶಗಳೂ ಆತಕೂರು ಹಂದಿಬೇಟೆ ವೀರಗಲ್ಲಿನಲ್ಲಿ ನಮಗೆ ಓದಲು ಸಿಗುತ್ತವೆ. ಈ ವೀರಗಲ್ಲು ಸಿಗಲಿಲ್ಲ ಎಂದಿದ್ದರೆ ಚೋಳರ ಪರಾಜಯ, ಕನ್ನಡಿಗರ ಈ ವಿಜಯ ಇತಿಹಾಸದಲ್ಲಿ ಮರೆಯಾಗಿ ಹೋಗುತ್ತಿತ್ತು ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.