ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಆಲಂಬಗಿರಿಯಲ್ಲಿ ಸಾಮೂಹಿಕ ಲಕ್ಷ್ಮಿ ಪೂಜೆ

Published : 16 ಆಗಸ್ಟ್ 2024, 14:21 IST
Last Updated : 16 ಆಗಸ್ಟ್ 2024, 14:21 IST
ಫಾಲೋ ಮಾಡಿ
Comments

ಚಿಂತಾಮಣಿ: ತಾಲ್ಲೂಕಿನ ಆಲಂಬಗಿರಿಯಲ್ಲಿ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ವ್ರತವನ್ನು ಶುಕ್ರವಾರ ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು.

ಆಲಂಬಗಿರಿ ಹಾಗೂ ಸುತ್ತಮುತ್ತಲು ಗ್ರಾಮಸ್ಥರು ಅರ್ಚಕರ ಸೂಚನೆಯಂತೆ ಪೂಜೆ ನೆರವೇರಿಸಿದರು. ಯೋಗಿನಾರೇಯಣ ಮಠದಿಂದ ಉಚಿತವಾಗಿ ಪ್ರತಿಯೊಬ್ಬರಿಗೂ ಪೂಜಾ ಸಾಮಗ್ರಿ ಒದಗಿಸಲಾಗಿತ್ತು.

ಸರ್ವಾಲಂಕೃತವಾದ ಪೀಠದಲ್ಲಿ ಲಕ್ಷ್ಮಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗಿತ್ತು. ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ಅರ್ಚಕ ವೃಂದದವರು ಲಕ್ಷ್ಮಿ ಅಷ್ಟೋತ್ತರ ಪಠಿಸುತ್ತಿದ್ದರೆ, ಮುತ್ತೈದೆಯರು ಕುಳಿತಲ್ಲೇ ಕುಂಕುಮಾರ್ಚನೆಯನ್ನು ಶ್ರದ್ದಾ ಭಕ್ತಿಗಳಿಂದ ಮಾಡಿದರು.

ಸಾಮೂಹಿಕ ಪೂಜೆಯ ಅಂಗವಾಗಿ ವೇದಿಕೆಯಲ್ಲಿ ವರಮಹಾಲಕ್ಷ್ಮಿ ಮತ್ತು ವೆಂಕಟರಮಣಸ್ವಾಮಿ ಮೂರ್ತಿಯನ್ನು ಸರ್ವಾಲಂಕೃತವಾಗಿ ಅಲಂಕರಿಸಲಾಗಿತ್ತು.

ಆಲಂಬಗಿರಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಾಲಯದಲ್ಲಿ ದರ್ಶನ ಪಡೆದರು.

ಶ್ರೀಯೋಗಿನಾರೇಯಣ ಟ್ರಸ್ಟ್ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಸಂಕೀರ್ತನಾ ಯೋಜನೆಯ ಸಂಚಾಲಕ ಬಾಲಕೃಷ್ಣ ಭಾಗವತರ್, ಸದಸ್ಯರಾದ ಕೆ.ನರಸಿಂಹಪ್ಪ, ಆದಿತ್ಯಪ್ರಸಾದ್ ಭಾಗವಹಿಸಿದ್ದರು.

ಲಕ್ಷ್ಮಿಗೆ ಅಲಂಕಾರ
ಲಕ್ಷ್ಮಿಗೆ ಅಲಂಕಾರ

ಆಲಂಬಗಿರಿಯಲ್ಲಿ ಇಂದು: ಶ್ರಾವಣ ಮಾಸದ 2ನೇ ಶನಿವಾರ

ಆಲಂಬಗಿರಿ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ ಘಂಟಾನಾದ ಸುಪ್ರಭಾತ ಸೇವೆ ಸ್ವಾಮಿಯ ಮೂಲಮೂರ್ತಿಗೆ ಅಭಿಷೇಕ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT