ಶಿಡ್ಲಘಟ್ಟ: ಗುಣಮಟ್ಟದ ಹಾಲು ಉತ್ಪಾದಿಸುವತ್ತ ಗಮನಹರಿಸುವ ಮೂಲಕ ರೈತರು ಉತ್ತಮ ಆರ್ಥಿಕ ಆದಾಯ ಗಳಿಸಬೇಕೆಂದು ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸುರೇಶ್ ಹೇಳಿದರು.

ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸಂಘದ ಆವರಣದಲ್ಲಿ ಹಾಲಿನ ಕ್ಯಾನ್ ವಿತರಿಸಿ ಮಾತನಾಡಿದರು.

ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆಯಿಂದ ಹಾಲಿನ ಉತ್ಪಾದನೆ ಕುಂಠಿತವಾಗುವ ಸಾಧ್ಯತೆ ಇರುವುದರಿಂದ ರೈತರು ತಮ್ಮ ಜಾನುವಾರುಗಳಿಗೆ ಕೇವಲ ಹಸಿರು ಮೇವು ನೀಡುವುದರ ಜತೆಗೆ ಖನಿಜಾಂಶ ಮಿಶ್ರಣ ಮತ್ತು ಅಜೋಲಾದಂತಹ ಪೌಷ್ಟಿಕಾಂಶ ಭರಿತ ಆಹಾರ ನೀಡಬೇಕು. ಸಾಧ್ಯವಾದಷ್ಟು ಒಣ ಮೇವು (ಬೂಸ) ನೀಡುವುದನ್ನು ಕಡಿಮೆ ಮಾಡಿದರೆ ಗುಣಮಟ್ಟದ ಹಾಲು ಉತ್ಪಾದಿಸಲು ಸಾಧ್ಯವಾಗುತ್ತದೆ. ರಾಸುಗಳನ್ನು ಸಾಧ್ಯವಾದಷ್ಟು ತಂಪಾದ ವಾತಾವರಣದಲ್ಲಿ ಕಟ್ಟಿ ಅವುಗಳ ಆರೋಗ್ಯ ಕಾಪಾಡಬೇಕು. ಹಸುಗಳನ್ನು ಹೆಚ್ಚು ಹೊತ್ತು ಬಿಸಿಲಿನಲ್ಲಿ ಕಟ್ಟಿದರೆ ಹಾಲಿನ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಎಂದು ತಿಳಿಸಿದರು.

ಡೇರಿ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಅಶ್ವಥಪ್ಪ ಮಾತನಾಡಿ, ಬೇಸಿಗೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಬೆಳೆಯುವುದು ಕಷ್ಟವಾದಾಗ ರೈತರ ಜೀವನ ಸುಧಾರಣೆಗೆ ಹೈನುಗಾರಿಕೆಯೇ ವರದಾನವಾಗಿದೆ. ಈ ಉದ್ಯಮದಿಂದಲೇ ರೈತರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ರೈತರು ಹೈನುಗಾರಿಕೆ ಬಗ್ಗೆ ನಿರಾಸಕ್ತಿ ತೋರದೆ ಜಾನುವಾರು ಪಾಲನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಹಾಲು ಒಕ್ಕೂಟದಿಂದ ಲಭ್ಯವಾಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಪ್ರಮೀಳಾ ವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಸಿ.ವೆಂಕಟೇಶಪ್ಪ, ಸಂಘದ ಉಪಾಧ್ಯಕ್ಷ ಜಿ.ಎಂ.ಮುತ್ತೇಗೌಡ, ನಿರ್ದೇಶಕರಾದ ಜಿ.ಕೆ.ಶಿವಾನಂದ, ಜಿ.ಎಂ.ನಾಗರಾಜ್, ಕರಗಪ್ಪ, ಜಿ.ಎಂ.ಶಿವಾನಂದ, ಯಶೋಧಮ್ಮ, ಪಿಳ್ಳೇಗೌಡ, ನಂಜಮ್ಮ, ಮುಖ್ಯಕಾರ್ಯನಿರ್ವಾಹಕ ಬೈರೇಗೌಡ, ಅಂಬರೀಶ್ ಮತ್ತಿತರರು ಉಪಸ್ಥಿತರಿದ್ದರು.

ಶಿಡ್ಲಘಟ್ಟ: ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ, ಹಾಲು ಉತ್ಪಾದಕರು, ಉತ್ತಮ ಆರ್ಥಿಕ ಆದಾಯದ ಕಡೆಗೆ ಗಮನಹರಿಸಬೇಕು ಎಂದು ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸುರೇಶ್ ಹೇಳಿದರು.

ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ, ಹಾಲಿನ ಕ್ಯಾನುಗಳು ವಿತರಣೆ ಮಾಡಿ ಅವರು ಮಾತನಾಡಿದರು.

ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆಯಿಂದಾಗಿ, ಹಾಲಿನ ಉತ್ಪಾದನೆ ಕುಂಠಿತವಾಗಬಹುದು. ಉತ್ಪಾದಕರು, ಕೇವಲ ಹಸಿರು ಮೇವು ಕೊಟ್ಟರೆ ಸಾಲದು ಅದರ ಜೊತೆಗೆ ಮಿನರಲ್ ಮಿಕ್ಸರ್, ಅಜೋಲಾದಂತಹ ಪೌಷ್ಟಿಕಾಂಶ ಭರಿತವಾದ ಆಹಾರವನ್ನೂ ರಾಸುಗಳಿಗೆ ನೀಡಬೇಕು. ಸಾಧ್ಯವಾದಷ್ಟು ಬೂಸ ಕೊಡುವುದನ್ನು ಕಡಿಮೆ ಮಾಡಿದರೆ, ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಎಸ್.ಎನ್.ಎಫ್ ಉತ್ತಮವಾದಷ್ಟು ಉತ್ಪಾದಕರಿಗೆ ಲಾಭವಾಗುತ್ತದೆ. ರಾಸುಗಳನ್ನು ಸಾಧ್ಯವಾದಷ್ಟು ವಾತಾವರಣ ತಣ್ಣಗಿರುವ ಜಾಗದಲ್ಲಿ ಕಟ್ಟುವ ಮೂಲಕ ಅವುಗಳ ಆರೋಗ್ಯವನ್ನು ಕಾಪಾಡಿ, ಹಸುಗಳನ್ನು ಬಿಸಿಲಿನಲ್ಲಿ ಹೆಚ್ಚಿನ ಸಮಯ ಕಟ್ಟುವುದರಿಂದ ಹಾಲು ಡಿಗ್ರಿ ಬರುವುದಿಲ್ಲವೆಂದರು.

ಡೈರಿ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಅಶ್ವಥಪ್ಪ ಮಾತನಾಡಿ, ಬೇಸಿಗೆಯಲ್ಲಿ, ಕೃಷಿ, ತೋಟಗಾರಿಕೆ ಬೆಳೆಗಳು ಬೆಳೆಯುವುದಕ್ಕೆ ಕಷ್ಟಕರವಾದ ಪರಿಸ್ಥಿತಿ ಉಂಟಾದಾಗ, ರೈತರ ಜೀವನ ಸುಧಾರಣೆ ಮಾಡುವುದು ಹೈನುಗಾರಿಕೆ. ಇಂತಹ ಉಧ್ಯಮದಿಂದಲೇ ಇಂದು ರೈತರು, ನೆಮ್ಮದಿಯ ಜೀವನ ನಡೆಸುವಂತಾಗಿದೆ. ಇಂತಹ ಉದ್ಯಮದ ಕಡೆಗೆ ಅಸಡ್ಡೆ ಮನೋಭಾವನೆಯನ್ನು ಬಿಟ್ಟು, ರಾಸುಗಳ ಪಾಲನೆಯಲ್ಲಿ ತೊಡಗಿಸಿಕೊಳ್ಳಬೇಕು. ಒಕ್ಕೂಟದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಪ್ರಮೀಳಾವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಸಿ.ವೆಂಕಟೇಶಪ್ಪ, ಸಂಘದ ಉಪಾಧ್ಯಕ್ಷ ಜಿ.ಎಂ.ಮುತ್ತೇಗೌಡ, ನಿರ್ದೇಶಕರಾದ ಜಿ.ಕೆ.ಶಿವಾನಂದ, ಜಿ.ಎಂ.ನಾಗರಾಜ್, ಕರಗಪ್ಪ, ಜಿ.ಎಂ.ಶಿವಾನಂದ, ಯಶೋಧಮ್ಮ, ಪಿಳ್ಳೇಗೌಡ, ನಂಜಮ್ಮ, ಮುಖ್ಯಕಾರ್ಯನಿರ್ವಾಹಕ ಬೈರೇಗೌಡ, ಅಂಬರೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.