ಜನಪರ ಕಾಳಜಿ ಪ್ರತೀಕ

ಬಾಗೇಪಲ್ಲಿ ತಾಲ್ಲೂಕಿನ ಮುದ್ದಲಪಲ್ಲಿ ಕೊಮಟೊಳ್ಳ ಕೆರೆ ಮರು ನಿರ್ಮಾಣ ಮತ್ತು ಗಂಟ್ಲಮಲ್ಲಮ್ಮ ಕಣಿವೆ ಮೇಲೆ ಮಣ್ಣಿನ ಅಣೆಕಟ್ಟು ನಿರ್ಮಿಸಲು ರಾಜ್ಯದ ಬಜೆಟ್ನಲ್ಲಿ ಅನುಮೋದನೆ ನೀಡಲಾಗಿದೆ. ಶಾಶ್ವತ ನೀರಾವರಿ, ಕೈಗಾರಿಕೆಗಳ ಅಭಿವೃದ್ಧಿ ಸರ್ಕಾರ ಹಂತಹಂತವಾಗಿ ಅನುದಾನವನ್ನು ಸರ್ಕಾರ ನೀಡುತ್ತಿದೆ. ಪ್ರಶಾಂತಿ ನಿಲಯಂ–ಚಿಕ್ಕಬಳ್ಳಾಪುರ ರೈಲು ಮಾರ್ಗದ ಯೋಜನೆ ಆರಂಭಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಲಾಗುವುದು.

ರಾಜ್ಯ ಸರ್ಕಾರವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿದೆ. ಕೃಷಿ, ಕೃಷಿಕರು, ಮಹಿಳೆಯರು, ಯುವಕ ಮತ್ತು ಯುವತಿಯರ ಕಲ್ಯಾಣ ಯೋಜನೆಗಳಿಗೆ ಸರ್ಕಾರವು ಅನುದಾನ ನೀಡಿದೆ. ಎಚ್.ಎನ್. ವ್ಯಾಲಿಯ 3ನೇ ಹಂತದ ಶುದ್ಧೀಕರಣ ಮಾಡಲಿದೆ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಿ, ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು. ಜನರ ಕಲ್ಯಾಣ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಮೀಸಲಿಜಡಲಾಗಿದೆ.

ಎಸ್.ಎನ್. ಸುಬ್ಬಾರೆಡ್ಡಿ, ಶಾಸಕ

ಬಡವರ ವಿರೋಧಿ ಆಯವ್ಯಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಡವರ ವಿರೋಧಿ ಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಎಚ್.ಎನ್. ವ್ಯಾಲಿ ನೀರನ್ನು 3ನೇ ಹಂತದಲ್ಲಿ ಶುದ್ಧೀಕರಣಕ್ಕೆ ಯೋಜನೆ ಪ್ರಕಟಿಸಿಲ್ಲ. ಶಾಶ್ವತ ನೀರಾವರಿಗೆ ಡಾ.ಪರಮಶಿವಯ್ಯ ವರದಿ ಅನುಷ್ಠಾನ, ಕೃಷ್ಣನದಿ ನೀರಿನ ಪಾಲು ಬಗ್ಗೆ ಪ್ರಸ್ತಾಪ ಇಲ್ಲ. ಕೃಷಿ, ನೀರಾವರಿ ಮತ್ತು ಕೈಗಾರಿಕೆಗಳ ಆರಂಭಕ್ಕೆ ಅನುದಾನ ನೀಡದೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದೆ. ಕೃಷಿ ವಿಸ್ತಾರ ಯೋಜನೆಗೆ ₹100 ಕೋಟಿ ಅನುದಾನ ಪ್ರಕಟಿಸಲಾಗಿದೆ. ಆದರೆ, ಇಷ್ಟು ಹಣ ಯಾವುದಕ್ಕೆ ಸಾಕಾಗಲಿದೆ. 800 ಪಬ್ಲಿಕ್ ಶಾಲೆ ಆರಂಭಸಲು ಮುಂದಾಗಿರುವ ಸರ್ಕಾರಕ್ಕೆ, ಗ್ರಾಮಗಳಲ್ಲಿ ಸರ್ಕಾರಿ ಕನ್ನಡ ಶಾಲೆ ಅಭಿವೃದ್ಧಿ ಆಗುವುದು ಮಾತ್ರ ಬೇಡವಾಗಿದೆಯೇ?

ಡಿ.ಟಿ. ಮುನಿಸ್ವಾಮಿ. ಕೆಪಿಆರ್ಎಸ್, ಬಾಗೇಪಲ್ಲಿ ತಾಲ್ಲೂಕು ಕಾರ್ಯದರ್ಶಿ

ಉಪ್ಪು, ಹುಳಿ ಇಲ್ಲ

ಈ ಬಜೆಟ್ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತಿದೆ. ನಗರ ಪ್ರದೇಶಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಆದರೆ, ಹಿಂದುಳಿದ ಕ್ಷೇತ್ರದ ಅಭಿವೃದ್ಧಿ ಯಾವುದೇ ಅನುದಾನ ನೀಡಿಲ್ಲ. ರಾಜ್ಯ ಬಜೆಟ್ ಜನವಿರೋಧಿಯಾಗಿದೆ. ಸಾಮಾನ್ಯ ಜನರ ಪರವಾದ ಹೊಸ ಕಲ್ಯಾಣ ಯೋಜನೆಗಳು ಘೋಷಣೆಯಾಗಿಲ್ಲ. ಒಟ್ಟಾರೆ ಉಪ್ಪು, ಹುಳಿ, ಖಾರ ಏನೂ ಇಲ್ಲದ ಸಪ್ಪೆ ಬಜೆಟ್ ಆಗಿದೆ.

ಹರಿನಾಥರೆಡ್ಡಿ, ಸ್ಥಳೀಯ ನಿವಾಸಿ, ಬಾಗೇಪಲ್ಲಿ

ಶಿಕ್ಷಣ ಕಡೆಗಣನೆ

ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ನಲ್ಲಿ ಶಿಕ್ಷಣಕ್ಕೆ ₹47,224 ಕೋಟಿಯಷ್ಟೇ ಮೀಸಲಿಡಲಾಗಿದೆ. ಇದರಿಂದಾಗಿ ಈ ಬಜೆಟ್ ಅನ್ನು ಶೈಕ್ಷಣಿಕ ವಿರೋಧಿ ಎನ್ನಬಹುದು. ಉತ್ತಮ ಕಲಿಕೆ, ಉಜ್ವಲ ಭವಿಷ್ಯ ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತಿಕರಿಸಲಾಗಿದೆ. ಇದಕ್ಕೆ ಸರ್ಕಾರವು ₹3,900 ಕೋಟಿ ಖರ್ಚು ಮಾಡಲಿದೆ. ಈ ಯೋಜನೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಿಗೆ ವಿಲೀನ ಮಾಡಬಾರದು ಎಂದು ಎಸ್ಎಫ್ಐ ಒತ್ತಾಯಿಸಿದೆ.

ಎಸ್.ಸೋಮಶೇಖರ, ಜಿಲ್ಲಾ ಕಾರ್ಯದರ್ಶಿ ಎಸ್ಎಫ್ಐ

ರೈತರ ಮೂಗಿಗೆ ತುಪ್ಪ

ರಾಜ್ಯ ಬಜೆಟ್ ನಿರಾಶಾದಾಯಕವಾಗಿದ್ದು, ರಾಜ್ಯದ ರೈತರ ಮೂಗಿಗೆ ತುಪ್ಪ ಸವರಲಾಗಿದೆ. ಶಿಡ್ಲಘಟ್ಟ ತಾಲ್ಲೂಕಿಗೆ ಸಿಲ್ಕ್ ಪಾರ್ಕ್ ಯೋಜನೆ ಪ್ರಕಟಿಸಿರುವುದು ಸಂತೋಷಕರ. ಆದರೆ, ಎಚ್.ಎನ್. ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣದ ಬಗ್ಗೆ ಘೋಷಣೆ ಮಾಡಬೇಕಿತ್ತು. ಬಯಲು ಸೀಮೆ ಜಿಲ್ಲೆಗಳ ಜನರ ನೀರಿನ ದಾಹ ತೀರಿಸಲು ಕೃಷ್ಣಾ ನದಿ ನೀರಿನ ಯೋಜನೆ ಆರಂಭಿಸಬೇಕಿತ್ತು.

ತಾಲ್ಲೂಕಿಗೆ ಒಂದರಂತೆ ಮಣ್ಣು ಪರೀಕ್ಷೆ ಕೇಂದ್ರಗಳನ್ನು ತೆರೆಯಲು ಕ್ರಮ ವಹಿಸಬೇಕಾಗಿತ್ತು. ರೈತರು ಬೆಳೆದ ಹಣ್ಣು, ಹಂಪಲು ತರಕಾರಿಗಳಿಗೆ ಬೆಲೆ ಇಳಿಮುಖವಾದಾಗ, ರೈತರು ಬೆಳೆದ ಆಹಾರ ಉತ್ಪನ್ನಗಳನ್ನು ಶೇಖರಿಸಲು ಸಂಸ್ಕರಣಾ ಘಟಕಗಳನ್ನು ತೆರೆಯಲು ಸರ್ಕಾರ ಕ್ರಮ ವಹಿಸಬೇಕಿತ್ತು.

ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಪ್ರದಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಆರೋಗ್ಯ, ಶಿಕ್ಷಣ ಇಲಾಖೆಗೆ ಬಂಪರ್

ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ರೋಗಿಗಳಿಗೆ ಇಸ್ಕಾನ್ ಅಕ್ಷಯಪಾತ್ರೆ ಮೂಲಕ ಆಹಾರ ವಿತರಣೆ, ಮಧುಮೇಹದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಇನ್ಸುಲಿನ್ ನೀಡುವ ಭರವಸೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ, 800 ಸರ್ಕಾರಿ ಶಾಲೆಗಳನ್ನು ಪಬ್ಲಿಕ್ ಶಾಲೆಗಳನ್ನಾಗಿ ಪ್ರಾರಂಭಿಸಲಾಗುವುದು ಎಂದು ಘೋಷಿಸಲಾಗಿದೆ. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ಮತ್ತು 8–12ನೇ ತರಗತಿಯಲ್ಲಿ ಎಐ ವಿಷಯಗಳ ಬಗ್ಗೆ ಅಧ್ಯಯನಕ್ಕೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ.

ಬಿ.ಆರ್. ಅನಂತಕೃಷ್ಣ, ಶಿಡ್ಲಘಟ್ಟ

ಅಭಿವೃದ್ಧಿಗಿಲ್ಲ ಅನುದಾನ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಬಜೆಟ್ನಲ್ಲಿ ಕೇವಲ ₹26,559 ಕೋಟಿ ನಿಗದಿ ಮಾಡಲಾಗಿದೆ. ಈ ಮೊತ್ತವು ಕಳೆದ ಬಾರಿ ನೀಡಿದ್ದಕ್ಕಿಂತ ₹176 ಕೋಟಿಯಷ್ಟು ಕಡಿಮೆ. ಇಷ್ಟು ಕಡಿಮೆ ಹಣದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ಕೊಡಲು ಹೇಗೆ ಸಾಧ್ಯ.

ಮನರೇಗಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಪನ್ ಮಾಡುವ ಕೆಲಸ ಮಾಡಿದ್ದಾರೆ. ಇವರು ಜನರ ಬಳಿ ಹೋಗಿ ಕೂಲಿಕಾರರ ವೇಷ ಹಾಕಿ ಪ್ರತಿಭಟನೆಯ ಅಣಕು ಪ್ರದರ್ಶನ ಮಾಡುವುದು ರಾಜಕೀಯ ನಾಟಕವೆನಿಸುತ್ತದೆ. ಮನರೇಗಾ ಯೋಜನೆ ಬಗ್ಗೆ ಇವರಿಗೆ ಕಾಳಜಿ ಇದ್ದಿದ್ದರೆ, ಈ ಯೋಜನೆಗೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದರು.

ಶಶಿರಾಜ್ ಹರತಲೆ, ಕವಿ, ಸಾಮಾಜಿಕ ಕಾರ್ಯಕರ್ತ, ಚಿಂತಾಮಣಿ

ಯುವಕರಿಗೆ ಉದ್ಯೋಗ ನೀಡಲಿ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆ ಯುವಜನರು ಶಿಕ್ಷಿತರಾಗುತ್ತಿದ್ದಾರೆ. ಪ್ರತಿವರ್ಷ ಉನ್ನತ ಶಿಕ್ಷಣ ಪಡೆದು ಶಿಕ್ಷಣ ಸಂಸ್ಥೆಗಳಿಂದ ಹೊರ ಬರುತ್ತಿರುವ ಸಾವಿರಾರು ಯುವಜನರಿಗೆ ಉದ್ಯೋಗದ ಭದ್ರತೆಯೇ ಇಲ್ಲದಂತಾಗಿದೆ. ಈ ಬಜೆಟ್ನಲ್ಲಿ ಯುವಕರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಬೇಕಿತ್ತು. ಇತ್ತೀಚೆಗೆ ಸರ್ಕಾರಿ ನೇಮಕಾತಿಗೆ ಆಗ್ರಹಿಸಿ ಉತ್ತರ ಕರ್ನಾಟಕದಲ್ಲಿ ಸಾವಿರಾರು ಯುವ ಜನರು ಬೀದಿಗಿಳಿದಿದ್ದರು. ಯುವಜನರ ಕೈಗೆ ಉದ್ಯೋಗ ಕೊಡಲು ಸರ್ಕಾರ ಬಜೆಟ್ನಲ್ಲಿ ಘೋಷಿಸಬೇಕಿತ್ತು.

ಭವಾನಿ, ಯುವಯಾನ, ಚಿಂತಾಮಣಿ

ಮುಂದುವರಿದ ಎತ್ತಿನಹೊಳೆ ಭಜನೆ

ರಾಜ್ಯ ಸರ್ಕಾರದಿಂದ ಪೆನ್ನಾರ್ ಜಲಾನಯನ ಪ್ರದೇಶದ ಬರಪೀಡಿತ ಜಿಲ್ಲೆಗಳ ಕನ್ನಡಿಗರ ಕಡೆಗಣನೆ, ಗಡಿ ಜಿಲ್ಲೆಗಳಿಗೆ ದಶಕಗಳಿಂದ ಮುಂದುವರೆದ ನೀರಾವರಿ ತಾರತಮ್ಯವು ಮುಂದುವರಿದಿದೆ.

ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆ ಬೇಕು. ನಮ್ಮ ರೈತರ ಭೂಮಿ ಬೇಕು. ನಮ್ಮ ಜಿಲ್ಲೆಗಳ ಅಂತರ್ಜಲ ಪಾತಾಳ ತಲುಪಿದೆ. ಕುಡಿಯುವ ನೀರಿನ ಮೂಲಗಳು ವಿಷವಾಗಿವೆ. ನೀರಿನಲ್ಲಿ ಯುರೇನಿಯಂ ಪತ್ತೆ ಆಗಿರುವ ಬಗ್ಗೆಯೂ ಸರ್ಕಾರಕ್ಕೆ ಕನಿಷ್ಠ ಕನಿಕರವಿಲ್ಲ.

ಸಿಎಜಿ ವರದಿಯಲ್ಲಿ ಎತ್ತಿನಹೊಳೆ ಕರ್ಮಕಾಂಡ ಬಯಲಾಗಿದ್ದರೂ ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆ ಭಜನೆ ಮುಂದುವರಿದೆ. ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣದ ಪೊಳ್ಳು ಭರವಸೆ. ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಿಸುವ ವಿಚಾರವಿಲ್ಲ. ಕೆರೆ, ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗಾದರೂ ಪ್ಯಾಕೇಜ್ ನೀಡಿಲ್ಲ. ತುರ್ತಾಗಿ ಕುಡಿಯುವ ನೀರಿನ ದಾಹ ತಣಿಸಬಲ್ಲ ಕೃಷ್ಣಾ- ಪೆನ್ನಾರ್ ನದಿ ಜೋಡಣೆ ಬಗ್ಗೆಯೂ ಚಕಾರ ಎತ್ತಿಲ್ಲ.

ಆಂಜನೇಯ ರೆಡ್ಡಿ ಆರ್., ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ

ಒಂದು ವರ್ಗದ ಓಲೈಕೆ ಸ್ಪಷ್ಟ

ಸಿದ್ದರಾಮಯ್ಯ ಅವರು ಇಡೀ ರಾಜ್ಯದ ಜನ ಹಾಗೂ ಜನರ ಬದುಕು ದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್ ಅಲ್ಲ. ಕೇವಲ ಒಂದು ಧರ್ಮ, ಒಂದು ವರ್ಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗಾಗಿ ಮಾತ್ರ ಮಂಡಿಸಿದ ಬಜೆಟ್ ಇದು. 56 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಹೇಳಲಾಗಿದೆ. ಇದು ಈ ಸರ್ಕಾರ ಇರುವವರೆಗೂ ಸಾಧ್ಯವೇ ಇಲ್ಲ. ನೀರಾವರಿ, ಕೃಷಿಕರ ಹಿತಕ್ಕಾಗಿ ಯಾವುದೇ ಯೋಜನೆ ರೂಪಿಸಿಲ್ಲ. ಇರುವ ಯೋಜನೆಗಳಿಗೆ ಅನುದಾನ ಒದಗಿಸದೆ ಒದ್ದಾಡುತ್ತಿರುವ ಸರ್ಕಾರ ಹೊಸ ಯೋಜನೆಗಳನ್ನು ಅನುಷ್ಠಾನ ಮಾಡಲಿದೆ ಎಂದರೆ ಹಾಸ್ಯಾಸ್ಪದವೇ ಸರಿ.

ಸೀಕಲ್ ರಾಮಚಂದ್ರಗೌಡ, ಬಿಜೆಪಿ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.