ಗೌರಿಬಿದನೂರು: ‘ತಾಲ್ಲೂಕಿಗೆ ರಾಜ್ಯದ ಅತಿರಥ ಮಹಾರಥರೇ ಬಂದರು ನಮ್ಮ ಪ್ರಾಮಾಣಿಕ ಕೆಲಸವೇ ಮಾತನಾಡಲಿದೆ. ಮುಂದಿನ ಚುನಾವಣೆಯಲ್ಲಿ ಹಿಂದಿನ ಬಾರಿಗಿಂತ ಕಡಿಮೆಯಾಗದಂತ ಮತ ಪಡೆದು ಗೆಲ್ಲುವೆ’ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿ ಗೌಡ ಹೇಳಿದರು.

ಶನಿವಾರ ಕೆಎಚ್ಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜಕೀಯ ನಿಂತ ನೀರಲ್ಲ, ತಾಲ್ಲೂಕಿನಲ್ಲಿ ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಸ್ವಯಂಪ್ರೇರಿತರಾಗಿ ಜನ ನಮ್ಮ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಆರಂಭ ಮಾತ್ರ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನ ನಮ್ಮ ಬಣಕ್ಕೆ ಸೇರ್ಪಡೆಯಾಗುತ್ತಾರೆ’ ಎಂದರು.

‘₹100 ಕೋಟಿಗೂ ಅಧಿಕ ಹಣವನ್ನು ಈಗಾಗಲೇ ಗ್ರಾಮೀಣ ಭಾಗದ ರಸ್ತೆಗಳ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹಾಕಲಾಗಿದೆ. ನಗರಕ್ಕೆ ನನ್ನ ಅವಧಿಯಲ್ಲಿ ಶಾಶ್ವತ ಕುಡಿಯುವ ನೀರನ್ನು ತರಲಾಗುವುದು’ ಎಂದರು.

ಕೋಚಿಮುಲ್ ನಿರ್ದೇಶಕ ಕಾಂತರಾಜ್ ಮಾತನಾಡಿ, ‘ತಾಲ್ಲೂಕಿನಲ್ಲಿ ರಾಜಕೀಯ ಬದಲಾವಣೆಗಾಗಿ ಹಲವು ವರ್ಷಗಳ ಕಾಲ ಮುಖಂಡರು ಕೆಎಚ್ಪಿ ಬಣಕ್ಕೆ ಸಹಕಾರ ನೀಡಿದರು. ಅವರು ಮಾಡಿದ ಸಮಾಜ ಸೇವೆ ಮನೆ ಮನೆಗೆ ತಲುಪಿದವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಅದಾಗ ಎಲ್ಲರನ್ನು ಅಭಿಪ್ರಾಯ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಬಾಹ್ಯ ಬೆಂಬಲ ಸೂಚಿಸಿದರು. ರಾಜ್ಯದ ಯಾವುದೇ ತಾಲ್ಲೂಕಿನಲ್ಲೂ ಆಗದ ಅಭಿವೃದ್ಧಿ ಕಾರ್ಯಗಳು ಇಂದು ತಾಲ್ಲೂಕಿನಲ್ಲಿ ನಡೆಯುತ್ತಿವೆ. ತಾಲ್ಲೂಕಿನ ಗಡಿ ಭಾಗದ ಗ್ರಾಮೀಣ ರಸ್ತೆಗಳು ಸಹ ಇಂದು ಅಭಿವೃದ್ಧಿ ಕಾಣುತ್ತವೆ’ ಎಂದರು.

ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಮಾತನಾಡಿ, ‘ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ತಾಲ್ಲೂಕಿನಲ್ಲಿ ಮಾತ್ರ ಎರಡು ಪಕ್ಷಗಳು ಒಂದೇ ಆಗಿ ಕೆಲಸ ಮಾಡುತ್ತಿದ್ದವು. ಇಂತಹ ಪಕ್ಷಗಳ ವಿರುದ್ಧ ಗಟ್ಟಿಯಾಗಿ ನಿಂತು ಜನಪರ ಕೆಲಸ ಮಾಡುವ ವ್ಯಕ್ತಿಯಾಗಿ ಜನರ ಧ್ವನಿಯಾದರು’ ಎಂದರು.

ನಗರಸಭಾ ಸದಸ್ಯ ಕಲೀಂ ಉಲ್ಲಾ ಮಾತನಾಡಿ, ಶಾಸಕರ ಕಾರ್ಯವೈಖರಿ ಮೆಚ್ಚಿ ಎಲ್ಲಾ ನಗರಸಭೆ ಸದಸ್ಯರು ಕೆಎಚ್ಪಿ ಬಣಕ್ಕೆ ಸೇರ್ಪಡೆಯಾಗುತ್ತಿದ್ದೇವೆ. ನಾನು ಯಾವುದೇ ಪಕ್ಷಕ್ಕೆ ಪಕ್ಷ ದ್ರೋಹ ಮಾಡಿಲ್ಲ. ಆದರೆ ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ನಗರದಲ್ಲಿ ಯಾವುದೇ ಲೋಪದೋಷ ನಡೆಯದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಕಾಂಗ್ರೆಸ್ ನಗರಸಭೆ ಸದಸ್ಯ ಖಲೀಮ್ ಉಲ್ಲಾ, ಶ್ರೀರಾಮಪ್ಪ, ಶ್ರೀಕಾಂತ್, ಮಂಜುಳಾ, ಗಿರೀಶ್, ನಗರಗೆರೆ ಗ್ರಾಮ ಪಂಚಾಯಿತಿ ಸದಸ್ಯ ರವೀಂದ್ರ ರೆಡ್ಡಿ,
ಮಡಿವಾಳ ಸಮಾಜದ ಮುಖಂಡ ಸುದರ್ಶನ್ ಬಾಬು, ರಾಮು, ಕೆಂಪಣ್ಣ, ಅಶೋಕ್, ಚಂದ್ರಣ್ಣ, ವಿವೇಕ್ ಕೆಎಚ್ಪಿ ಬಣಕ್ಕೆ ಸೇರ್ಪಡೆಯಾದರು.

ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಫರೀದ್, ನಗರಸಭೆ ಮಾಜಿ ಅಧ್ಯಕ್ಷ ನರಸಿಂಹ ಮೂರ್ತಿ, ಲಕ್ಷ್ಮಿನಾರಾಯಣ, ವೆಂಕಟರಾಮರೆಡ್ಡಿ, ಅಬ್ದುಲ್ಲಾ, ವೇಣು, ಗೋಪಾಲಪ್ಪ, ಬಲರಾಮ್ ಲಕ್ಷ್ಮಣ್ ರಾವ್, ಮಂಜುಳಾ, ಗಿರೀಶ್, ಬೊಮ್ಮಣ್ಣ, ತರೀದಾಳು ಚಿಕ್ಕಣ್ಣ, ಹೊಸೂರು ನಾಗರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾರಾಯಣ ಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.