ಚಿಕ್ಕಬಳ್ಳಾಪುರ: ಮೃತ ಬಾಬು ಅವರ ಗೌರಿಬಿದನೂರು ತಾಲ್ಲೂಕಿನ ಇಡುಗೂರು ನಿವಾಸಕ್ಕೆ ಶಾಸಕ ಪ್ರದೀಪ್ ಈಶ್ವರ್ ಭಾನುವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತ ಬಾಬು ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ತಮ್ಮನ್ನು ಸಂಪರ್ಕಿಸಿ ಮತ್ತು ಬಾಬು ಸಾವಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

‘ನಿಮಗೆ ಆರ್ಥಿಕ ಸಮಸ್ಯೆ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೆ ತಿಳಿಸಿ’ ಎಂದರು. ಆಗ ಸ್ಥಳದಲ್ಲಿ ಇದ್ದವರು, ‘ಕುಟುಂಬದ ಆರ್ಥಿಕ ಸ್ಥಿತಿ ಕಷ್ಟವಿದೆ. ಅವರು ಬಡವರು’ ಎಂದರು. ಆಗ ಪ್ರದೀಪ್ ಈಶ್ವರ್, ಕಾನೂನು ಪ್ರಕಾರ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರೆಯಬೇಕೊ ಆ ಸೌಲಭ್ಯಗಳನ್ನು ದೊರಕಿಸಿಕೊಡುವೆ. ಈಗ ಪ್ರಕರಣ ತನಿಖೆ ಹಂತದಲ್ಲಿದೆ. ನಾನು ಆರ್ಥಿಕ ನೆರವು ಘೋಷಿಸಿದರೆ ತಪ್ಪು ಸಂದೇಶ ಹೋಗುತ್ತದೆ. ನಾನು ಖಂಡಿತವಾಗಿ ನಿಮಗೆ ಏನು ಸಹಾಯ ಮಾಡಬೇಕೊ ಅದನ್ನು ಮಾಡುತ್ತೇನೆ ಎಂದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, ‘ಇನ್ನೆರಡು ದಿನಗಳಲ್ಲಿ ಬಾಬು ಅವರ ಪತ್ನಿಯ ಖಾತೆಗೆ ಸರ್ಕಾರದಿಂದ ಮೊದಲ ಹಂತದಲ್ಲಿ ₹ 4.12 ಲಕ್ಷ ಜಮೆ ಆಗಲಿದೆ. ಪ್ರಕರಣದ ಚಾರ್ಜ್ಶೀಟ್ ಆದ ಮೇಲೆ ಮತ್ತೆ ₹ 4.50 ಲಕ್ಷ ದೊರೆಯಲಿದೆ ಎಂದು ಹೇಳಿದರು.

ಬಾಬು ಪತ್ನಿಗೆ ಕಾಯಂ ಉದ್ಯೋಗ ದೊರಕಿಸಿಕೊಡುವೆ. ಈ ಸಂಬಂಧ ಮುಖ್ಯಮಂತ್ರಿ, ಸ್ವೀಕರ್ ಅವರ ಜೊತೆ ಮಾತುಕತೆ ನಡೆಸುವೆ. ಅವರ ತಾಯಿಗೂ ಕೆಲಸ ಮತ್ತು ಪಿಂಚಣಿ ಕೊಡಿಸಲಾಗುವುದು. ಈಗ ಬಾಬು ಅವರ ಸಹೋದರನೇ ಆ ಕುಟುಂಬಕ್ಕೆ ಆಧಾರ. ಅವರಿಗೂ ಕೆಲಸ ಕೊಡಿಸುವೆ. ಸರ್ಕಾರದಿಂದ ಈ ಕುಟುಂಬಕ್ಕೆ ಯಾವ ಸೌಲಭ್ಯಗಳು ದೊರಕಲಿವೆಯೇ ಆ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವೆ ಎಂದು ಭರವಸೆ ನೀಡಿದರು.

ಬಿಜೆಪಿಯವರು ಗೌರಿಬಿದನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆದರೆ ಸೌಜನ್ಯಕ್ಕೂ ಬಂದು ಈ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ. ಅಯೋಗ್ಯ ಬಿಜೆಪಿಯವರಿಗೆ ಸಾಮಾನ್ಯ ಜ್ಞಾನವಿದೆಯಾ? ಬರಿ ಪ್ರಕರಣದಿಂದ ಸುಧಾಕರ್ ಹೆಸರು ಕೈಬಿಡಿ ಎನ್ನುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ದಲಿತರ ಸಾವಿಗೆ ಗೌರವವಿಲ್ಲವೇ. ಮೇಲ್ವರ್ಗದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೀಗೆ ಸತ್ತಿದ್ದರೆ ನಗರಕ್ಕೆ ಬೆಂಕಿ ಇಡುತ್ತಿದ್ದರು. ದಲಿತರ ಪಾಡೇ ಇಷ್ಟೇ. ದಲಿತರು ಸಾವಿರಾರು ವರ್ಷದಿಂದ ಶೋಷಣೆಗೆ ಒಳಗಾಗಿದ್ದಾರೆ. ಡೆತ್ನೋಟ್ನಲ್ಲಿ ಏನು ಬರೆದಿದ್ದಾರೆಯೊ ಆ ರೀತಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ನಾನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.

ಬಾಬು ತಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ₹ 13 ಲಕ್ಷ ವಿಮೆ ಹಣ ಬಂದಿತ್ತು. ಅದರ ಜೊತೆಗೆ ಮತ್ತಷ್ಟು ಹಣ ಸೇರಿಸಿ ಚಾಲಕನ ಕೆಲಸ ಕೊಡಿಸಲು ನೀಡಿದ್ದಾಗಿ ಅವರ ತಾಯಿ ಹೇಳಿದರು ಎಂದರು.

‘ಪವರ್ ಬಳಸಿದ್ದರೆ ಅಣಕನೂರಿನಲ್ಲಿ ಇರುತ್ತಿದ್ದರು’

‘ನಾನು ಶಾಸಕ ಸ್ಥಾನವನ್ನು ಜವಾಬ್ದಾರಿ ಎಂದುಕೊಂಡಿದ್ದೇನೆ. ಪವರ್ ಎಂದಿಕೊಂಡಿದ್ದರೆ ನೀವು (ಡಾ.ಕೆ.ಸುಧಾಕರ್) ಅಣಕನೂರಿನಲ್ಲಿ (ಜಿಲ್ಲಾ ಕಾರಾಗೃಹ) ಇರುತ್ತಿದ್ದಿರಿ. ಸಾವಿನಲ್ಲಿ ರಾಜಕೀಯ ಮಾಡುವುದಿಲ್ಲ. ಆದರೆ ಈ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುತ್ತೇವೆ ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.