ಬುಧವಾರ, ಡಿಸೆಂಬರ್ 7, 2022
22 °C

ಚಿಕ್ಕಬಳ್ಳಾಪುರ: ಮಗನ ಹೊಸ ಮನೆಯಿಂದ ಬಿದ್ದು ತಾಯಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೇಳೂರು: ಮೂರನೇ ಮಹಡಿಯಲ್ಲಿದ್ದ ಮಗನ ಹೊಸ ಮನೆಯ ಆವರಣದ ಕಸ ಗೂಡಿಸುತ್ತಿದ್ದ ಮಹಿಳೆಯೊಬ್ಬರು ಭಾನುವಾರ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. 

ಚೇಳೂರಿನ ಎರಡನೇ ಬ್ಲಾಕ್‌ನ ಪೋಲಿಸ್ ಕ್ವಾರ್ಟರ್ಸ್‌ ಮುಂಭಾಗದ ಬಡಾವಣೆಯಲ್ಲಿ ಮಗ ಹೊಸದಾಗಿ ಕಟ್ಟಿಸಿದ್ದ ಹೊಸ ಮನೆಯ ಪ್ರವೇಶ ಸಮಾರಂಭಕ್ಕೆ ಬಂದಿದ್ದ ಮದ್ದಮ್ಮ (62) ಜಾರಿ ಬಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ಮೂರನೇ ಮಹಡಿಯಿಂದ ಬಿದ್ದ ರಭಸಕ್ಕೆ ತಲೆ ಚಿಪ್ಪು ಒಡೆದು ಮಿದುಳು ಹೊರ ಬಂದಿತ್ತು.   

ಗೆಂಗಿರೆಡ್ಡಿ ಎಂಬುವರು ಗೃಹ ಪ್ರವೇಶಕ್ಕೆ ಸ್ವಗ್ರಾಮ ಬೈರಪ್ಪನಹಳ್ಳಿ ಗ್ರಾಮದಿಂದ ಪೋಷಕರನ್ನು ಕರೆಸಿದ್ದರು. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು. ಈ ಕುರಿತು ಪ್ರಕರಣ ದಾಖಲಾಗಿಲ್ಲ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು