ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ ಕಳಪೆ ಬಜೆಟ್ ಮಂಡಿಸಿದ್ದಾರೆ. ಬಯಲು ಸೀಮೆಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ಈ ಬಜೆಟ್ನಲ್ಲಿ ‘ಅಭಿವೃದ್ಧಿ’ ಎಂಬ ಪದದ ಅರ್ಥವನ್ನೇ ಕಾಂಗ್ರೆಸ್ ಸರ್ಕಾರ ಮರೆತಿದೆ. ಕನ್ನಡಿಗರಿಗೆ ಸಾಲದ ಸುಳಿ ಮತ್ತು ತೆರಿಗೆ ಹೊರೆಯನ್ನಷ್ಟೇ ನೀಡಿದೆ. ಕರ್ನಾಟಕವನ್ನು ಕಲ್ಯಾಣ ರಾಜ್ಯದ ಬದಲು ‘ಸಾಲಗಾರ ರಾಜ್ಯ’ವನ್ನಾಗಿ ಪರಿವರ್ತಿಸಿದೆ. ಅಂಕಿ-ಅಂಶಗಳೇ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಕನ್ನಡಿ ಹಿಡಿದಿವೆ ಎಂದು ದೂರಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಅಭಿವೃದ್ಧಿಯ ಉದ್ದೇಶ ಈ ಬಜೆಟ್ನಲ್ಲಿಲ್ಲ. ಚಿಕ್ಕಬಳ್ಳಾಪುರ ಹೂ ಹಾಗೂ ತರಕಾರಿ ಬೆಳೆಗೆ ಜನಪ್ರಿಯವಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಅವಧಿಯಲ್ಲಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆ ನೀಡಲಾಗಿತ್ತು. ಆದರೆ ಈಗಿನ ಬಜೆಟ್ನಲ್ಲಿ ಅಂತಹ ಮಾರುಕಟ್ಟೆ ರೂಪಿಸುವ ಯಾವುದೇ ಯೋಜನೆ ಅಥವಾ ಅನುದಾನ ನೀಡುವ ಕ್ರಮ ವಹಿಸಿಲ್ಲ. ಹೂ ಕೃಷಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಸೂಕ್ತ ಯೋಜನೆಯನ್ನು ನೀಡಿದ್ದರೆ ಬಯಲುಸೀಮೆಗೆ ಒಳಿತಾಗುತ್ತಿತ್ತು ಎಂದಿದ್ದಾರೆ.

ಎತ್ತಿನಹೊಳೆ ಯೋಜನೆಯಡಿ 2ನೇ ಹಂತದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವ ಬಗ್ಗೆ ಹೇಳಲಾಗಿದೆ. ಕೊರಟಗೆರೆ ತಾಲ್ಲೂಕು ಸಮೀಪ ಸಮತೋಲನ ಜಲಾಶಯ ನಿರ್ಮಿಸುವ ಬಗ್ಗೆ ತಿಳಿಸಲಾಗಿದೆ. ಆದರೆ ಚಿಕ್ಕಬಳ್ಳಾಪುರ ಭಾಗಕ್ಕೆ ಯಾವಾಗ ನೀರು ಬರಲಿದೆ ಎಂಬ ಸಮಗ್ರ ಚಿತ್ರಣವನ್ನು ನೀಡಿಲ್ಲ. ಇಲ್ಲಿನ ರೈತರು ಬಹಳ ವರ್ಷಗಳಿಂದ ನೀರಾವರಿಗಾಗಿ ಕಾಯುತ್ತಿದ್ದರೂ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಇನ್ನೂ ಬಂದಿಲ್ಲ ಎಂದು ಟೀಕಿಸಿದ್ದಾರೆ.

ಎಚ್.ಎನ್ ವ್ಯಾಲಿ ಹಾಗೂ ಕೆ.ಸಿ ವ್ಯಾಲಿ ಯೋಜನೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸುವಂತೆ ಆಗ್ರಹಿಸುತ್ತಲೇ ಇದ್ದೇನೆ. ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮಕೈಗೊಳ್ಳುವುದು ಅನಿವಾರ್ಯ. ಆದರೆ ಈ ಬಗ್ಗೆ ಯಾವುದೇ ಚಿಂತನೆಯನ್ನು ಸರ್ಕಾರ ನಡೆಸಿಲ್ಲ. ಇದರಿಂದಾಗಿ ಈ ಭಾಗದ ಜನರ ನಿರೀಕ್ಷೆ ಹುಸಿಯಾಗಿದೆ ಎಂದು ದೂರಿದ್ದಾರೆ.

‘ಕಾಂಗ್ರೆಸ್ ಸರ್ಕಾರದ ಹಣಕಾಸು ನಿರ್ವಹಣೆ ಎಷ್ಟು ಅದಕ್ಷವಾಗಿದೆ ಎಂದರೆ, ರಾಜ್ಯದ ಒಟ್ಟು ರಾಜಸ್ವ ಆದಾಯದ ಶೇ 88ರಿಂದ 90 ರಷ್ಟು ಹಣ ಕೇವಲ ಸಂಬಳ, ಪಿಂಚಣಿ ಮತ್ತು ಸಾಲದ ಬಡ್ಡಿ ಪಾವತಿಸಲು ವ್ಯಯವಾಗುತ್ತಿದೆ. ಅಂದರೆ ನಾವುಗಳಿಸುವ ಪ್ರತಿ ₹100ರಲ್ಲಿ ₹88 ವೆಚ್ಚಗಳಿಗೇ ಸರಿಯಾಗುತ್ತಿದೆ. ಇನ್ನು ರಾಜ್ಯದ ಪ್ರಗತಿಗೆ ಹೊಸ ಯೋಜನೆಗಳನ್ನು ಜಾರಿಗೆ ತರಲು ನಿಮ್ಮ ಬಳಿ ಹಣವೆಲ್ಲಿದೆ’ ಎಂದು ಪ್ರಶ್ನಿಸಿದ್ದಾರೆ.

ಈ ವರ್ಷ ಸರ್ಕಾರ ಸುಮಾರು ₹1.32 ಲಕ್ಷ ಕೋಟಿ ಸಾಲ ಮಾಡುತ್ತಿದೆ. ಆದರೆ ಆ ಸಾಲದ ಹಣದಲ್ಲಿ ಸರ್ಕಾರ ಮಾಡುತ್ತಿರುವ ಬಂಡವಾಳ ವೆಚ್ಚ ಕೇವಲ ₹72,000 ಕೋಟಿ ಮಾತ್ರ. ಅಂದರೆ ಸಾಲದ ಬಹುದೊಡ್ಡ ಭಾಗವನ್ನು ಆಸ್ತಿ ಸೃಜನೆಗೆ ಬಳಸುವ ಬದಲು, ದಿನನಿತ್ಯದ ಆಡಳಿತಾತ್ಮಕ ವೆಚ್ಚಗಳು ಮತ್ತು ಅವೈಜ್ಞಾನಿಕ ಗ್ಯಾರಂಟಿಗಳ ಅಸಮರ್ಪಕ ನಿರ್ವಹಣೆಗೆ ಸುರಿಯುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯ 5 ವರ್ಷಗಳಲ್ಲಿ ಮಾಡಿದ ಒಟ್ಟು ಸಾಲ ₹1.16 ಲಕ್ಷ ಕೋಟಿ. ಎರಡನೇ ಅವಧಿಯ ಕೇವಲ 3 ವರ್ಷಗಳಲ್ಲಿಯೇ ಕರ್ನಾಟಕವನ್ನು ₹4 ಲಕ್ಷ ಕೋಟಿಗೂ ಹೆಚ್ಚು ಸಾಲದ ಕೂಪಕ್ಕೆ ದೂಡಿದ್ದಾರೆ. ರಾಜ್ಯದ ಒಟ್ಟು ಸಾಲ ಈಗ ₹8 ಲಕ್ಷ ಕೋಟಿ ಗಡಿ ದಾಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜಸ್ವ ಮಿಗತೆ ಹೊಂದಿದ್ದ ಕರ್ನಾಟಕ, ಇಂದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಕೃಪೆಯಿಂದ ₹22,957 ಕೋಟಿ ರಾಜಸ್ವ ಕೊರತೆ ಎದುರಿಸುತ್ತಿದೆ. ವಿತ್ತೀಯ ಕೊರತೆ ₹1 ಲಕ್ಷ ಕೋಟಿ ಆಸುಪಾಸಿಗೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನ ಪ್ರಕಾರ ಇದು ಬಜೆಟ್ ಅಲ್ಲ. ಕರ್ನಾಟಕದ ವಿನಾಶದ ನೀಲನಕ್ಷೆ. ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುವುದನ್ನೇ ಕಸುಬು ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಮೊದಲು ತನ್ನ ಈ ಎಡಬಿಡಂಗಿ ಆರ್ಥಿಕ ನೀತಿಗಳಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯಕ್ಕೆ ಮೊದಲು ಉತ್ತರಿಸಲಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.