ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆ (ಜೆಜೆಎಂ) ಕಾಮಗಾರಿ ಜಿಲ್ಲೆಯಲ್ಲಿ ತೃಪ್ತಿದಾಯಕವಾಗಿಲ್ಲ. ಚಿಂತಾಮಣಿಯ ಚಿಲಕಲನೇರ್ಪು ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಭೂಮಿಯ ಒಂದು ಅಡಿಯಲ್ಲಿ ಪೈಪ್ಲೈನ್ ಅಳವಡಿಸಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಪ್ರಗತಿ ಪರಿಶೀಲಿಸಿದರು.

ಜೆಜೆಎಂ ಕಾಮಗಾರಿಗೆ ಜಿಲ್ಲೆಯ 1640 ಗ್ರಾಮಗಳಿಗೆ ₹ 993 ಕೋಟಿ ಬಿಡುಗಡೆ ಮಾಡಿದೆ. 1,318 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿ ಇದೆ. 321 ಗ್ರಾಮಗಳಲ್ಲಿ ಕಾಮಗಾರಿ ಪ್ರಾರಂಭಿಸಬೇಕು. 139 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣವಾಗಿ ಪಂಚಾಯಿತಿಗಳಿಗೆ ಒಪ್ಪಿಸಿದ್ದೇವೆ. ಇಲ್ಲಿಯವರೆಗೆ ₹ 235 ಕೋಟಿ ವೆಚ್ಚವಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು.

ಪೈಪ್ಲೈನ್ಗಳ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಸಂಸದರು, ಕನಿಷ್ಠ 3 ಅಡಿ ಆಳದಲ್ಲಿ ಪೈಪ್ ಇರಬೇಕು. ಆದರೆ ಬಹಳಷ್ಟು ಕಡೆಗಳಲ್ಲಿ ಆ ರೀತಿಯಲ್ಲಿ ಇಲ್ಲ. ನೀವು ಕಾಮಗಾರಿ ಪರಿಶೀಲಿಸದಿದ್ದರೆ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಜೆಜೆಎಂನಡಿ ಜಿಲ್ಲೆಯಲ್ಲಿ 960 ಓವರ್ಹೆಡ್ ಟ್ಯಾಂಕ್ ನಿರ್ಮಾಣ ಆಗಬೇಕು. 395 ಕಡೆಗಳಲ್ಲಿ ಟ್ಯಾಂಕ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 565 ಕಡೆ ಟ್ಯಾಂಕ್ ನಿರ್ಮಾಣ ಬಾಕಿ ಇದೆ. ಈ ಪೈಕಿ 140 ಕಡೆ ಜಾಗದ ಸಮಸ್ಯೆ ಇದೆ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು.

ಆಗ ಸಂಸದರು, ‘ತಾಲ್ಲೂಕು ಪಂಚಾಯಿತಿ ಇಒಗಳಿಗೆ ಈ ಕೆಲಸಕ್ಕಿಂತ ಮುಖ್ಯವಾದುದು ಯಾವುದು ಇದೆ. 3 ತಿಂಗಳಲ್ಲಿ ಜಾಗ ಕೊಡಿಸಬೇಕು. ಗುತ್ತಿಗೆದಾರರು ನಾವು ಕೆಲಸ ಮಾಡುತ್ತೇವೆ ಎಂದು ಟೆಂಡರ್ ಪಡೆದು ಬಂದಿದ್ದಾರೆ. ಕೆಲವರು ಗುತ್ತಿಗೆ ಪಡೆದು ಉಪಗುತ್ತಿಗೆ ಸಹ ನೀಡಿದ್ದಾರೆ. ಗುತ್ತಿಗೆದಾರರಿಗೆ ಹೇಳಿ ಕಾಮಗಾರಿ ವೇಗಗೊಳಿಸಿ ಎಂದು ನಿರ್ದೇಶನ ನೀಡಿದರು.

ಮುಂದಿನ ದಿಶಾ ಸಭೆಯ ವೇಳೆಗೆ ಈಗ ಪ್ರಗತಿಯಲ್ಲಿರುವ ಕಾಮಗಾರಿಗಳು ಪೂರ್ಣವಾಗಿರಬೇಕು ಎಂದು ನಿರ್ದೇಶನ ನೀಡಿದರು.

ಮಂಡಿಕಲ್ಲು, ದಂಡಿಗಾನಹಳ್ಳಿ ಮತ್ತು ಗುಡಿಬಂಡೆ ಅಮಾನಿಬೈರಸಾಗರದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಬಗ್ಗೆ ವಿವರಗಳನ್ನು ಪಡೆದರು.

ಫಸಲ್ ಬಿಮಾ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ನೋಂದಾಯಿಸಲು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯೋಜನೆಯಡಿ ಒಟ್ಟು 74,460 ರೈತರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಒಟ್ಟು ರೈತರ ಸಂಖ್ಯೆಗೆ ಹೋಲಿಸಿದರೆ ನೋಂದಾಯಿಸಿದ ರೈತರ ಸಂಖ್ಯೆ ಕಡಿಮೆ ಇದೆ. ಎರಡೂ ಇಲಾಖೆ ಅಧಿಕಾರಿಗಳು ನೋಂದಣಿಗೆ ಗಮನ ಹರಿಸಬೇಕು ಎಂದರು.

ದೇವನಹಳ್ಳಿ ಬಳಿಯ ನಂದಿ ಉಪಚಾರ ಹೋಟೆಲ್ ಬಳಿಯಿಂದ ಬಾಗೇಪಲ್ಲಿ ತಾಲ್ಲೂಕಿನ ಗಡಿಯವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ 14 ಅಪಘಾತ ವಲಯಗಳನ್ನು ಗುರುತಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು.

ಆಗ ಡಾ.ಕೆ.ಸುಧಾಕರ್, ಸರ್ವಿಸ್ ರಸ್ತೆ ಅಭಿವೃದ್ಧಿ, ಸೂಚನಾ ಫಲಕಗಳ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮವಹಿಸಲು ನಿರ್ದೇಶನ ನೀಡಿದರು.

ಕೋಲಾರ ಸಂಸದ ಮಲ್ಲೇಶ್ ಬಾಬು, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ದಿಶಾ ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

13ರಂದು ರೈಲ್ವೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ

ಚಿಕ್ಕಬಳ್ಳಾಪುರ ವಾರ್ಡ್ ನಂಬರ್ 30ರ (ಶಿಡ್ಲಘಟ್ಟ ರಸ್ತೆ) ಬಳಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆ ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಎದುರಾಗಿರುವ ತೊಡಕುಗಳ ಬಗ್ಗೆ ಚರ್ಚೆ ನಡೆಯಿತು. ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಜ.13 ರಂದು ಸ್ಥಳ ಸಮೀಕ್ಷೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

‘ಅವರದ್ದೇ ಸರ್ಕಾರವಿದ್ದರೂ ಸಮಸ್ಯೆ’

ನರೇಗಾ ಯೋಜನೆಯ ಕಾಮಗಾರಿಗಳ ಕುರಿತು ನಡೆದ ಚರ್ಚೆಯ ವೇಳೆ ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕುಗಳಲ್ಲಿ 14 ಮಂದಿ ಪಿಡಿಒಗಳ ಕೊರತೆ ಇರುವುದನ್ನು ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು. 28 ಪಿಡಿಒಗಳು ಅಗತ್ಯವಿದ್ದು 14 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಚೇನಹಳ್ಳಿ ತಾಲ್ಲೂಕಿನಲ್ಲಿ 7 ಪಿಡಿಒಗಳ ಪೈಕಿ ನಾಲ್ಕು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌರಿಬಿದನೂರು ತಾಲ್ಲೂಕಿನಲ್ಲಿ 7 ಪಿಡಿಒಗಳ ಕೊರತೆ ಇದೆ ಎಂದರು. ಆಗ ಸಂಸದರು ಬಾಗೇಪಲ್ಲಿಯ ಶಾಸಕರಿಗೆ ಈ ಬಗ್ಗೆ ಹೇಳಿ. ಅವರದ್ದೇ ಸರ್ಕಾರವಿದೆ ಎಂದರು. ಜಿಲ್ಲೆಯಲ್ಲಿ ಪಿಡಿಒಗಳ ಕೊರತೆಯ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಪತ್ರ ಬರೆಯಲಾಗುವುದು ಎಂದರು.

ತಪ್ಪು ಮಾಡಿದ್ದವರ ವಿರುದ್ಧ ಕ್ರಮವಹಿಸಿ

ಗೌರಿಬಿದನೂರು ತಾಲ್ಲೂಕಿನ ಸೊನಗಾನಹಳ್ಳಿ ಗ್ರಾಮದ 1190 ರೈತರಿಗೆ ಬೆಳೆ ವಿಮೆ ಪಾವತಿ ಆಗದಿರುವ ಬಗ್ಗೆ ಸಂಸದರು ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಶಿಡ್ಲಘಟ್ಟ ಗೌರಿಬಿದನೂರು ಮತ್ತು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಈ ಸಮಸ್ಯೆ ಆಗಿದೆ ಎಂದರು. ಈ ಹಿಂದಿನ 7 ವರ್ಷಗಳ ಇಳುವರಿಗೂ ಮತ್ತು ಕಳೆದ ವರ್ಷದ ಇಳುವರಿಗೆ ಹೋಲಿಸಿದರೆ ಕಳೆದ ವರ್ಷ ಉತ್ತಮ ಇಳುವರಿ ಬಂದಿದೆ ಎಂದು ಸಮೀಕ್ಷೆ ಮಾಡುವವರು ವರದಿ ಮಾಡಿದ್ದಾರೆ. ಇದರಿಂದ ಬೆಳೆವಿಮೆ ಬಂದಿಲ್ಲ. ಈ ಬಗ್ಗೆ ತನಿಖೆ ಮಾಡಿ ವರದಿ ಸಹ ಸಲ್ಲಿಸಿದ್ದೇವೆ. ಸಮೀಕ್ಷೆ ಮಾಡಿದವರು ತಪ್ಪು ಮಾಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು. ‘ರೈತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು. ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಂಸದರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.