ಗೌರಿಬಿದನೂರು: ಮುದುಗಾನಕುಂಟೆ ಗಂಗಮ್ಮನ ದರ್ಶನಕ್ಕೆ ಬರುವ ಯಾತ್ರಾರ್ಥಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಎಲ್ಲ ರೀತಿಯ ಸೌಕರ್ಯ ಕಲ್ಪಿಸುವುದಾಗಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಭರವಸೆ ನೀಡಿದರು.

ಮುದುಗಾನಕುಂಟೆ ಪ್ರವೇಶ ದ್ವಾರದಿಂದ ಗಂಗಮ್ಮ ತಾಯಿ ಕಲ್ಯಾಣಿವರೆಗೂ ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸುವ ಸಿಮೆಂಟ್ ರಸ್ತೆಯ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗಂಗಮ್ಮ ದರ್ಶನಕ್ಕಾಗಿ ಪ್ರತಿ ಸೋಮವಾರ ಸಾವಿರಾರು ಭಕ್ತರು ಆಗಮಿಸುತ್ತಾರೆ. ಮಹಿಳಾ ಯಾತ್ರಿಕರಿಗಾಗಿ ಸ್ನಾನದ ಗೃಹಗಳ ಸಂಕೀರ್ಣ ನಿರ್ಮಿಸಲು ಸುಮಾರು ₹60ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಸ್ನಾನಗೃಹಗಳ ಸಂಕೀರ್ಣದ ಕಾಮಗಾರಿ ಪ್ರಗತಿಯಲ್ಲಿದೆ. ಭಕ್ತರಿಗಾಗಿ ಕುಡಿಯುವ ನೀರಿನ ಘಟಕ ಅವಶ್ಯಕತೆ ಇದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಸಲ್ಲಿಸಿದ್ದಾರೆ. ಅದನ್ನು ಶೀಘ್ರವಾಗಿ ನೆರವೇರಿಸಲಾಗುವುದು ಎಂದರು.

ತಹಶೀಲ್ದಾರ್ ಅರವಿಂದ್, ಇಒ ಜಿ.ಕೆ ಹೊನ್ನಯ್ಯ, ಅಂಜನ್ ಕುಮಾರ್, ನರಸಿಂಹರೆಡ್ಡಿ, ಕಿರಣ್, ಲಕ್ಷ್ಮಿನಾರಾಯಣ್ ಪಟೇಲ್, ಸಾಗಾನಹಳ್ಳಿ ಶಿವಕುಮಾರ್, ಕೆ.ನಂಜುಂಡಪ್ಪ, ಅಶೋಕ್ ಕುಮಾರ್, ಚಂದ್ರು, ಹನುಮಂತರಾಯಪ್ಪ, ಜಬೀ, ನರಸಿಂಹಮೂರ್ತಿ, ತಿಮ್ಮರೆಡ್ಡಿ, ಆನಂದ್, ಮೂರ್ತಿ, ವಿಜಯ್ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-16-358345177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.