ಮುದ್ದೇನಹಳ್ಳಿ: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಗಂಭೀರ ಉಸಿರಾಟ ಸಮಸ್ಯೆಯಿಂದ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದ ಮೂರುವರೆ ವರ್ಷದ ಬಾಲಕಿಗೆ ಮುದ್ದೇನಹಳ್ಳಿಯ ಮಧುಸೂದನ ಸಾಯಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

ಈ ಮೂಲಕ ಮೂರುವರೆ ವರ್ಷದ ಬಾಲಕಿಗೆ ವೈದ್ಯರು ಮರುಜೀವ ನೀಡಿದ್ದಾರೆ. ಮಗುವಿನ ಉಸಿರಾಟದ ನಾಳವು ಸಂಪೂರ್ಣವಾಗಿ ಮುಚ್ಚಿಕೊಂಡಿತ್ತು. ಇದರಿಂದಾಗಿ ಮಗು ಉಸಿರಾಟ ಸಮಸ್ಯೆಯಿಂದ ಬಳಲುತ್ತಿತ್ತು. ಮಧುಸೂದನ ಸಾಯಿ ಆಸ್ಪತ್ರೆ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ ಮುಚ್ಚಿಹೋಗಿದ್ದ ಉಸಿರಾಟ ನಾಳವನ್ನು ಮರು ನಿರ್ಮಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನೆರವೇರಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಎಂದೇ ಪರಿಗಣಿಸಲಾಗಿದೆ.

ಛತ್ತೀಸಗಢ ಮೂಲದ ಬಾಲಕಿ ಶಿವಾಂಗಿ ಶರ್ಮಾ (3) 2025ರಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಶಸ್ತ್ರಚಿಕಿತ್ಸೆ ನಂತರ ಉಂಟಾದ ತೊಂದರೆಯಿಂದಾಗಿ ಆಕೆಗೆ ದೀರ್ಘಕಾಲ ಉಸಿರಾಟದ ಟ್ಯೂಬ್ ಅಳವಡಿಸಲಾಯಿತು. ಇದರ ಪರಿಣಾಮ ‘ಸಬ್ಗ್ಲೋಟಿಕ್ ಸ್ಟೆನೋಸಿಸ್’ (ಉಸಿರಾಟದ ನಾಳ ಕಿರಿದಾಗಿ ಬಹುತೇಕ ಮುಚ್ಚಿ ಹೋಗುವ ಸ್ಥಿತಿ) ಎಂಬ ಗಂಭೀರ ಸಮಸ್ಯೆ ಕಾಣಿಸಿಕೊಂಡಿತು. ಪರಿಣಾಮ, ಬಾಲಕಿಗೆ ಸಹಜವಾಗಿ ಉಸಿರಾಡುವುದೇ ಕಷ್ಟಕರವಾಗಿತ್ತು.

ಚಿಕಿತ್ಸೆಗಾಗಿ ಛತ್ತೀಸಗಢದ ಏಮ್ಸ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಮಗುವಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗಲಿಲ್ಲ. ಅಲ್ಲದೆ, ಕುಟುಂಬವು ಆರ್ಥಿಕವಾಗಿ ದುರ್ಬಲವಾಗಿದ್ದರಿಂದಾಗಿ ದುಬಾರಿ ಚಿಕಿತ್ಸೆ ಭರಿಸುವುದೂ ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಗುವನ್ನು ಮುದ್ದೇನಹಳ್ಳಿಯ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ದಾಖಲಿಸಲಾಯಿತು. ಇಲ್ಲಿನ ತಜ್ಞ ವೈದ್ಯರ ತಂಡವು, ಮಗುವಿಗೆ ಲೇಸರ್, ಕ್ಲೊಬೇಷನ್, ಬಲೂನ್ ಡೈಲೇಷನ್ ಹಾಗೂ ಸ್ಟಂಟ್ ಅಳವಡಿಕೆ ಸೇರಿದಂತೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಉಸಿರಾಟದ ನಾಳವನ್ನು ಪುನರ್ ಸ್ಥಾಪಿಸಲಾಗಿದೆ.

ಮೇ 11ರಂದು ಸ್ಟೆಂಟ್ ತೆಗೆದು ಹಾಕಲಾಗಿದ್ದು, ನಂತರ ಹಂತ ಹಂತವಾಗಿ ಚಿಕಿತ್ಸೆ ನೀಡಿ, ಮೇ 18ರಂದು ಟ್ರೇಕಿಯೊಸ್ಟಮಿ ಟ್ಯೂಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದೀಗ ಬಾಲಕಿ ಸಹಜವಾಗಿ ಉಸಿರಾಡಲು ಮತ್ತು ಮಾತನಾಡಲು ಸಾಧ್ಯವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಾಲಕಿ ತಂದೆ ಗೌರವ್ ಶರ್ಮಾ, ‘ಮುದ್ದೇನಹಳ್ಳಿ ಆಸ್ಪತ್ರೆ ದೇವಾಲಯವಿದ್ದಂತೆ. ಯಾವ ಆಸ್ಪತ್ರೆಯಲ್ಲೂ ಸಿಗದ ವೈದ್ಯಕೀಯ ಸೌಲಭ್ಯ ಮತ್ತು ಪ್ರೀತಿ ಇಲ್ಲಿ ಸಿಕ್ಕಿದೆ. ನನ್ನ ಮಗಳಿಗೆ ಬದುಕು ಕೊಟ್ಟ ವೈದ್ಯರಿಗೆ ಆಭಾರಿ. ನಮ್ಮಂತ ಬಡವರ ಬದುಕಿಗೆ ಇದು ಆಶಾಕಿರಣ’ ಎಂದರು.

ಬಾಲ ರೋಗಿಗಳಲ್ಲಿ ಸಂಪೂರ್ಣವಾಗಿ ಮುಚ್ಚಿಕೊಂಡ ಉಸಿರಾಟದ ನಾಳವನ್ನು ಎಂಡೊಸ್ಕೋಪಿಕ್ ತಂತ್ರಜ್ಞಾನ ಬಳಸಿ ಮರುನಿರ್ಮಿಸುವುದು ಅತ್ಯಂತ ಅಪರೂಪದ ಸಾಧನೆ. ಈ ಬಾಲಕಿಗೆ ನಾವು ಅತ್ಯಂತ ಸಂಕೀರ್ಣವಾದ ಐದು ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಜಗತ್ತಿನ ಕೆಲವೇ ಆಸ್ಪತ್ರೆಗಳಲ್ಲಿ ಇಂತಹ ಜಟಿಲ ಶಸ್ತ್ರಚಿಕಿತ್ಸೆ ನಡೆಸುವ ಪರಿಣತಿ ಮತ್ತು ಸೌಲಭ್ಯಗಳಿವೆ. ಅದರಲ್ಲೂ ಯಶಸ್ಸಿನ ಪ್ರಮಾಣ ಬಹಳ ಕಡಿಮೆ ಇರುತ್ತದೆ ಎಂದು ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ. ಬಾಲಿ ಹೇಳಿದರು.

ಈ ಚಿಕಿತ್ಸೆಗೆ ಸುಮಾರು ₹30 ಲಕ್ಷ ವೆಚ್ಚವಾಗಬಹುದು. ಆದರೆ, ಈ ಚಿಕಿತ್ಸೆಯನ್ನು ಮಗುವಿಗೆ ಉಚಿತವಾಗಿ ನೀಡಲಾಗಿದೆ. ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣ ಚೇತರಿಸಿಕೊಂಡಿದ್ದು, ಇದು ಚಿಕಿತ್ಸೆ ಯಶಸ್ಸಿಗೆ ಸಾಕ್ಷಿ ಎಂದು ಆಸ್ಪತ್ರೆ ತಿಳಿಸಿದೆ. ಈ ಆಸ್ಪತ್ರೆಯು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಮಿಷನ್ ಅಡಿ ತನ್ನ ಉಚಿತ ವೈದ್ಯಕೀಯ ಸೇವಾ ಚಟುವಟಿಕೆಗಳನ್ನು ನಡೆಸುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-16-885090357

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.