ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಆಲಂಬಗಿರಿ ಗ್ರಾಮದಲ್ಲಿ ರಾಶಿ ರಾಶಿ ನಾಗರಕಲ್ಲು ಪತ್ತೆ

Published : 27 ಆಗಸ್ಟ್ 2024, 14:33 IST
Last Updated : 27 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ಚಿಂತಾಮಣಿ: ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದ ದೇವಾಲಯದ ಸಮೀಪವಿರುವ ಗ್ರಾಮದ ಕೆರೆ ಅಚ್ಚುಕಟ್ಟು ಪ್ರದೇಶದ ರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಭೂಮಿಯಲ್ಲಿ ಹುದುಗಿದ್ದ ರಾಶಿ ರಾಶಿ ನಾಗರಕಲ್ಲುಗಳು ಪತ್ತೆಯಾಗಿದೆ.

ಪತ್ತೆಯಾಗಿರುವ ನಾಗರ ಕಲ್ಲುಗಳನ್ನು ವೀಕ್ಷಿಸಲು ಜನರು ಗುಂಪು ಗುಂಪುಗಳಲ್ಲಿ ಆಗಮಿಸುತ್ತಿದ್ದಾರೆ.

ಗ್ರಾಮದ ಹೆಗ್ಗಡಿ ಮುನಿಯಪ್ಪ ಕುಟುಂಬದವರು ಆಲಂಬಗಿರಿ-ಮುನುಗನಹಳ್ಳಿ ರಸ್ತೆಯ ಅಚ್ಚುಕಟ್ಟು ಪ್ರದೇಶದಲ್ಲಿ ಪುರಾತನ ಕಾಲದಲ್ಲಿ ಪ್ರತಿಷ್ಠಾಪಿಸಿದ್ದ ನಾಗರಕಲ್ಲುಗಳಿಗೆ ಪ್ರತಿವರ್ಷ ನಾಗರಪಂಚಮಿ, ಗಣೇಶ ಚತುರ್ಥಿ ಸಂದರ್ಭಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಹೆಗ್ಗಡಿ ಮುನಿಯಪ್ಪ ನಿಧನರಾದ ನಂತರ ಈ ಕಲ್ಲುಗಳಿಗೆ ಪೂಜೆ ಸಲ್ಲಿಸುವುದನ್ನು ನಿಲ್ಲಿಸಿದ್ದರು ಎನ್ನಲಾಗಿದೆ.

ಕುಟುಂಬದ ಸದಸ್ಯ ಮೋಹನ್ ಬಾಬು, ಗಿರಿ, ಅಶೋಕ್ ಮತ್ತಿತರರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ಮುಂದಾಗಿದ್ದಾರೆ. ಕೆಲವು ಕಲ್ಲುಗಳು ಮಣ್ಣಿನಡಿ ಮುಚ್ಚಿಹೋಗಿದ್ದವು. ಮುಚ್ಚಿ ಹೋಗಿದ್ದ ಕಲ್ಲುಗಳನ್ನು ಮೇಲಕ್ಕೆತ್ತಲು ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಮುಂದಾಗಿದ್ದಾರೆ. ನಾಗರಕಲ್ಲುಗಳ ಸುತ್ತಲೂ ಮಣ್ಣು ತೆಗೆದಾಗ ಅನೇಕ ಕಲ್ಲುಗಳು ಪತ್ತೆಯಾಗಿವೆ.

ಮತ್ತಷ್ಟು ಗುಂಡಿ ತೆಗೆದಾಗ ಮತ್ತಷ್ಟು ಕಲ್ಲುಗಳು ಪತ್ತೆಯಾಗಿವೆ. ಸೋಮವಾರ ಹಾಗೂ ಮಂಗಳವಾರ ಬೆಳಗ್ಗೆ ಮತ್ತೆ ಗುಂಡಿ ತೆಗೆಯಲಾಯಿತು. ಆಗ ವಿವಿಧ ಆಕೃತಿಯ ನಾಗರ ಕಲ್ಲುಗಳು, ದೇವತೆಗಳಿರುವ ನೂರಕ್ಕೂ ಹೆಚ್ಚು ನಾಗರಕಲ್ಲು ಪತ್ತೆಯಾಗಿದೆ.

ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದಲ್ಲಿ ದೊರೆತಿರುವ ನಾಗರಕಲ್ಲು
ಚಿಂತಾಮಣಿ ತಾಲ್ಲೂಕಿನ ಆಲಂಬಗಿರಿ ಗ್ರಾಮದಲ್ಲಿ ದೊರೆತಿರುವ ನಾಗರಕಲ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT