ಚಿಕ್ಕಬಳ್ಳಾಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಭಾನುವಾರ ಬೆಳ್ಳಂ ಬೆಳಿಗ್ಗೆ ನಂದಿಗಿರಿಧಾಮಕ್ಕೆ ಭೇಟಿ ನೀಡಿ ಪ್ರವಾಸಿಗರಿಂದ ಸೌಲಭ್ಯಗಳ ಮಾಹಿತಿ ಪಡೆದರು.

ಸಾರಿಗೆ, ವಾಹನ ನಿಲುಗಡೆ, ಸಂಚಾರ ದಟ್ಟಣೆ, ಜನಸಂದಣಿ ನಿಯಂತ್ರಣ, ಶೌಚಾಲಯ ಸೌಲಭ್ಯ ಹೀಗೆ ವಿವಿಧ ವಿಚಾರಗಳ ಕುರಿತು ಪ್ರವಾಸಿಗರಿಂದ ಮಾಹಿತಿ ಪಡೆದರು. ರೋಪ್ ವೇಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಭಾನುವಾರ ಬೆಳಿಗ್ಗೆ 5ಕ್ಕೆ ಗಿರಿಧಾಮದ ಪ್ರವೇಶ ದ್ವಾರಕ್ಕೆ ಸಚಿವರು ಬಂದರು. ಈ ವೇಳೆ ಸ್ಥಳದಲ್ಲಿ ಇದ್ದ ಪ್ರವಾಸಿಗರ ಜೊತೆ ಮಾತುಕತೆ ನಡೆಸಿದರು. 5.30ರ ವೇಳೆಗೆ ಗಿರಿಧಾಮ ಪ್ರವೇಶಿಸಿದರು.

ಪ್ರವಾಸಿಗರಿಂದ ಶುಲ್ಕವನ್ನು ಯಾವ ರೀತಿಯಲ್ಲಿ ಸಂಗ್ರಹಿಸಲಾಗುತ್ತಿದೆ. ನಗದು ರೂಪವೇ, ಇ–ಪೇಮೆಂಟ್ ಯಾವ ರೀತಿ ಸಂಗ್ರಹಿಸಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಪಡೆದರು. ಖುದ್ದು ಪರಿಶೀಲನೆ ಸಹ ನಡೆಸಿದರು. ಯಾವುದಕ್ಕೆ ಯಾವ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಎನ್ನುವುದನ್ನು ತಿಳಿಸಿದರು.

ಶೌಚಾಲಯದ ಸ್ಥಿತಿಗಳು ಉತ್ತಮವಾಗಿವೆಯೇ, ಗಿರಿಧಾಮದಲ್ಲಿ ಮತ್ತಷ್ಟು ಸುಧಾಕರಣೆಯ ಕ್ರಮಗಳನ್ನು ಯಾವ ರೀತಿ ಕೈಗೊಳ್ಳಬಹುದು ಎನ್ನುವ ಬಗ್ಗೆ ಪ್ರವಾಸಿಗರಿಂದಲೇ ಮಾಹಿತಿ ಪಡೆದರು.

ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಸಂಚಾರ ದಟ್ಟಣೆ ಎದುರಾಗುತ್ತದೆ. ಈ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವುದನ್ನು ಪ್ರಮುಖವಾಗಿ ಚರ್ಚಿಸಿದರು.

ರೋಪ್ ವೇ ಚರ್ಚೆ: ನಂದಿ ಗಿರಿಧಾಮಕ್ಕೆ ರೂಪಿಸುತ್ತಿರುವ ರೋಪ್ ವೇ ಕಾಮಗಾರಿಯು ಸದ್ಯ ಯಾವ ಹಂತದಲ್ಲಿ ಇದೆ ಎನ್ನುವ ಬಗ್ಗೆ ಮಾಹಿತಿ ಪಡೆದರು. ಎಲ್ಟಿಪಿ (ಲೋಯರ್ ಟರ್ಮಿನಲ್ ಪಾಯಿಂಟ್), ಯುಟಿಪಿ (ಅಪ್ಪರ್ ಟರ್ಮಿನಲ್ ಪಾಯಿಂಟ್)ಗಳಲ್ಲಿ ಯಾವ ಕೆಲಸಗಳು ಆಗಿವೆ. ಯಾವ ಕೆಲಸಗಳು ಆಗಬೇಕು. ರೋಪ್ ವೇ ಟೆಂಡರ್ ಪಡೆದಿರುವ ಸಂಸ್ಥೆಯು ಮತ್ತೆ ಇನ್ನೇನು ಸೌಲಭ್ಯಗಳನ್ನು ಬಯಸಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅವರಿಂದ ಸಮಗ್ರವಾಗಿ ಮಾಹಿತಿ ಕಲೆ ಹಾಕಿದರು.

ಸಚಿವ ಸಂಪುಟದ ಸಭೆಯ ವಿಚಾರವೂ ಚರ್ಚೆ: ಮುಂದಿನ ದಿನಗಳಲ್ಲಿ ಬೆಂಗಳೂರು ವಿಭಾಗದ ಸಚಿವ ಸಂಪುಟ ಸಭೆಯು ನಂದಿಗಿರಿಧಾಮದಲ್ಲಿ ನಡೆಯಲಿದೆ. ಆಗ ಇಲ್ಲಿ ಯಾವ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ಎಲ್ಲಿ ಸಭೆ ಮಾಡಬಹುದು ಎನ್ನುವ ಬಗ್ಗೆಯೂ ಚರ್ಚೆ ನಡೆಸಿದರು.

ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ನಿಟ್ಟಾಲಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಯಶವಂತ್ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.