ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಯಲ್ಲಿ ಹೋಟೆಲ್ ಆರಂಭಕ್ಕೆ ಮನವಿ

Last Updated 19 ಆಗಸ್ಟ್ 2022, 4:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ)ದಿಂದ ಮಾತ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಇದೆ. ಮಧ್ಯಮ ವರ್ಗದ ಪ್ರವಾಸಿಗರಿಗೆ ಇಲ್ಲಿನ ತಿಂಡಿಗಳ ಬೆಲೆಗಳು ಕೈಗೆ ಎಟಕುವುದಿಲ್ಲ. ದರ ದುಬಾರಿಯಾಗಿದೆ. ಆದ್ದರಿಂದ ತೋಟಗಾರಿಕಾ ಇಲಾಖೆಯಿಂದ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕೈಗೆಟಕುವ ದರದಲ್ಲಿ ಕಾಫಿ, ಟೀ, ಊಟ ಸೇರಿದಂತೆ ಆಹಾರಗಳು ದೊರೆಯುವಂತೆ ಮಾಡಬೇಕು. ಅದಕ್ಕಾಗಿ ಗಿರಿಧಾಮದಲ್ಲಿ ಹೋಟೆಲ್ ಆರಂಭಿಸಿ ಎಂದು ಪ್ರವಾಸಿಗರಾದ ಲಲಿತಾ ವಾಣಿ ಎಂಬುವವರು ನಂದಿಗಿರಿಧಾಮದ ವಿಶೇಷಾಧಿಕಾರಿಗೆ ಲಿಖಿತವಾಗಿ ಮನವಿ ಮಾಡಿದ್ದಾರೆ.

ಗಿರಿಧಾಮದಲ್ಲಿ ಟೀ, ಕಾಫಿ, ತಿಂಡಿಯ ಬೆಲೆ ದುಬಾರಿಯಾಗಿದೆ. ಮಯೂರ ರೆಸ್ಟೋರೆಂಟ್‌ನಲ್ಲಿ ಬಾರ್ ಸಹ ಇದ್ದು ಪ್ರವಾಸಿಗರಿಗೆ ಇರುಸು ಮುರುಸಾಗುತ್ತದೆ. ಹಸಿದು ಬಂದವರಿಗೆ ಇಲ್ಲಿ ಸರಿಯಾದ ಊಟದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ಇಲಾಖೆಯಿಂದ ಹೋಟೆಲ್ ಆರಂಭಿಸಿ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT