ದಿನಪತ್ರಿಕೆ ಓದುವ ಅಭಿರುಚಿ ಬೆಳೆಸಿಕೊಳ್ಳಿ

ಚಿಕ್ಕಬಳ್ಳಾಪುರ: ‘ಸಾರ್ವಜನಿಕರು ದಿನ ಪತ್ರಿಕೆಗಳನ್ನು ಓದುವ ಮೂಲಕ ಸುತ್ತಮುತ್ತಲಿನ ಸುದ್ದಿಗಳು ಮತ್ತು ಮಾಹಿತಿಯನ್ನು ತಿಳಿದುಕೊಳ್ಳಬೇಕು. ಪತ್ರಿಕೆ ಓದುವ ಅಭಿರುಚಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದು ಚಿಂತಾಮಣಿ ತಾಲ್ಲೂಕಿನ ಕೈವಾರ ಕ್ರಾಸ್‌ನಲ್ಲಿರುವ ಯೋಗಿನಾರೇಯಣ ಬಂಕ್ ಮಾಲೀಕ ವಿ.ಚೇತನ್ ಹೇಳಿದರು.
ಭಾನುವಾರ ಬಂಕ್‌ನಲ್ಲಿ ಮೊದಲ 100 ಗ್ರಾಹಕರಿಗೆ ಉಚಿತವಾಗಿ ‘ಪ್ರಜಾವಾಣಿ’ ಪತ್ರಿಕೆಯನ್ನು ವಿತರಿಸಿ ಅವರು ಮಾತನಾಡಿದರು.
‘ಕನ್ನಡ ನಾಡು, ನುಡಿ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ‘ಪ್ರಜಾವಾಣಿ’ ಎಂದರೆ ನಮಗೆ ಮೊದಲಿನಿಂದಲೂ ಹೆಮ್ಮೆ. ಪತ್ರಿಕೆಯನ್ನು ಕೊಂಡು ಓದುವುದರಿಂದ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಕನ್ನಡ ಭಾಷೆ ಬೆಳೆಸಿದಂತಾಗುತ್ತದೆ. ಪೆಟ್ರೊಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ‘ಪ್ರಜಾವಾಣಿ’ ಪತ್ರಿಕೆಯನ್ನು ಉಚಿತವಾಗಿ ವಿತರಿಸುತ್ತಿರುವುದು ಗಮನಾರ್ಹವಾದುದು’ ಎಂದು ಅಭಿಪ್ರಾಯಪಟ್ಟರು.
‘ಇದೊಂದು ರೀತಿಯಲ್ಲಿ ಪತ್ರಿಕಾ ಚಳವಳಿಯೇ ಆಗಿದೆ. ಪತ್ರಿಕೆಗಳ ಓದುಗರ ಸಂಖ್ಯೆ ಕಡಿಮೆ ಏನಿಲ್ಲ. ಬೆಳಿಗ್ಗೆ ಪತ್ರಿಕೆ ಓದಿಯೇ ಓದುತ್ತಾರೆ. ಅದರಲ್ಲೂ ಸುಮಾರು 70 ವರ್ಷಗಳಿಂದ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಾಲಕ್ಕೆ ತಕ್ಕಂತೆ ಓದುಗರಿಗೆ ವಿಶ್ವಾಸಾರ್ಹವಾದ ಸುದ್ದಿಗಳನ್ನು ನೀಡುವ ಪ್ರಜಾವಾಣಿ ಪತ್ರಿಕೆಯನ್ನು ಜನ ಬಹಳಷ್ಟು ಇಷ್ಟುಪಡುತ್ತಾರೆ. ಇದೊಂದು ಅಭಿನಂದನಾರ್ಹವಾದ ಕಾರ್ಯ’ ಎಂದು ತಿಳಿಸಿದರು.
‘ಬಂಕ್‌ನಲ್ಲಿ ಬೆಳಿಗ್ಗೆ ಮೊದಲ 100 ಗ್ರಾಹಕರಿಗೆ ನಾವು ಉಚಿತವಾಗಿ ಈ ಪತ್ರಿಕೆ ವಿತರಣೆ ಮಾಡುತ್ತಿದ್ದೇವೆ. ಇದರಿಂದ ನಮಗೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಇಂತಹ ಕಾರ್ಯಗಳು ಹೆಚ್ಚು ನಡೆಯಲಿ. ಬೇರೆ ಬೇರೆ ಕಡೆಗೂ ಈ ರೀತಿ ಪತ್ರಿಕೆಯನ್ನು ಗ್ರಾಹಕರಿಗೆ ವಿತರಿಸುವ ಪ್ರಕ್ರಿಯೆ ನಡೆಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು. ಬಂಕ್ ಸಿಬ್ಬಂದಿ ಯಶ್ವಂತ್, ನಂಜೇಗೌಡ, ಅರುಣ್, ಮಂಜುನಾಥ್, ಆನಂದ್, ಹೇಮಂತ್, ಗೋಪಿ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.