ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪಾಲಿಗೆ ದಾರಿದೀಪ

Last Updated 13 ನವೆಂಬರ್ 2020, 2:01 IST
ಅಕ್ಷರ ಗಾತ್ರ

ಪ್ರಜಾವಾಣಿ ಕೇವಲ ಸುದ್ಧಿಯನ್ನು ನೀಡುವ ಪತ್ರಿಕೆಯಾಗಿಲ್ಲ. ಅದಕ್ಕೂ ಮಿಗಿಲಾಗಿ ಲಕ್ಷಾಂತರ ನಿರುದ್ಯೋಗಿ ಯುವ ಜನತೆಗೆ ಉನ್ನತ ಹುದ್ದೆಗಳನ್ನು ಪಡೆಯಲು ಆಧಾರವಾಗಿದೆ. ಪ್ರಜಾವಾಣಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳ ಪಾಲಿಗೆ ದಾರಿದೀಪದಂತಿದೆ. ವಿಶ್ವಾಸಾರ್ಹತೆಯಿಂದ ಮನೆ ಮಾತಾಗಿರುವ ಪತ್ರಿಕೆ ನಡೆಸುತ್ತಿರುವ ನ್ಯೂಸ್‌ ಕ್ವಿಜ್‌ ಯಶಸ್ವಿಯಾಗಲಿ.

ಎಂ.ಎನ್.ರಘು, ಚಿಂತಾಮಣಿ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ

ಸದ್ವಿನಿಯೋಗ ಮಾಡಿಕೊಳ್ಳಬೇಕು

ಗ್ರಾಮೀಣ ಭಾಗದಲ್ಲಿ ಅಂತರ್ಜಾಲದ ಮೂಲಕ ಮಾಹಿತಿ ಸಂಗ್ರಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಕಷ್ಟದ ಕೆಲಸ. ಮುದ್ರಣ ಮಾಧ್ಯಮದಲ್ಲಿ ತನ್ನದೇ ಆದ ಛಾಪು ‌ಮೂಡಿಸಿರುವ ‘ಪ್ರಜಾವಾಣಿ’, ನ್ಯೂಸ್ ಕ್ವಿಜ್ ಮೂಲಕ ವಿದ್ಯಾರ್ಥಿಗಳು, ಯುವ ಸಮೂಹವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಹೊರಟಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು.

ಅಜಿತ್ ಕೌಂಡಿನ್ಯ, ಉಪನ್ಯಾಸಕ

ಜ್ಞಾನದ ಕ್ವಿತೀಜ ವಿಸ್ತರಿಸಲಿ

‘ಪ್ರಜಾವಾಣಿ’ ಪತ್ರಿಕೆಯು ನಮ್ಮ ನಾಡಿನ ಅತ್ಯುತ್ತಮ, ವಿಶ್ವಾಸಾರ್ಹ ಹಾಗೂ ಪತ್ರಿಕಾ ರಂಗದಲ್ಲಿ ಹಲವು ದಶಕಗಳಿಂದ ಕ್ರಾಂತಿಯನ್ನುಂಟು ಮಾಡಿರುವ ಹೆಮ್ಮೆಯ ದಿನ ಪತ್ರಿಕೆ. ಗುಣಮಟ್ಟಕ್ಕೆ ಹೆಸರಾಗಿದ್ದು,ಎಲ್ಲ ವಯೋಮಾನದವರಿಗೂ ಉಪಯುಕ್ತವಾಗುವಂತಹ, ವೈವಿಧ್ಯಮಯವಾದ ಸುವಿಚಾರಗಳನ್ನುಬಿತ್ತರಿಸುತ್ತಾ ಬಂದಿದೆ. ‌ನ್ಯೂಸ್ ಕ್ವಿಜ್‌ ವಿದ್ಯಾರ್ಥಿಗಳ ಜ್ಞಾನದ ಕ್ವಿತೀಜ ವಿಸ್ತರಿಸಲು ಸಹಕಾರಿಯಾಗಲಿದೆ.

ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ

‘ಪ್ರಜಾವಾಣಿ’ ಕೈದೀವಿಗೆ

ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆಗೈಯಲು ‘ಪ್ರಜಾವಾಣಿ’ ದಿನಪತ್ರಿಕೆ ಕೈದೀವಿಗೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಯಶಸ್ವಿಯಾದ ಪ್ರತಿಯೊಬ್ಬರು ಈ ಪತ್ರಿಕೆ ಓದಿರಲೇಬೇಕು. ವಸ್ತುನಿಷ್ಠ, ನಿಖರ ಮತ್ತು ವೈವಿಧ್ಯಮಯ ಸುದ್ದಿಗಾಗಿ ಇದನ್ನು ಓದಲೇ ಬೇಕು. ಈ ಪತ್ರಿಕೆ ಓದುವುದರಿಂದ ಗ್ರಂಥಗಳ ಅಧ್ಯಯನ ಮಾಡಿದ ಅನುಭವವಾಗುತ್ತದೆ. ನ.15ರಿಂದ ಪ್ರಾರಂಭಗೊಳ್ಳುವ ‘ಪ್ರಜಾವಾಣಿ’ ನ್ಯೂಸ್ ಕ್ವಿಜ್‌ನಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿರಿ.

ಕೋಡಿ ರಂಗಪ್ಪ, ಶಿಕ್ಷಣ ತಜ್ಞ

ಶ್ಲಾಘನೀಯ ಕಾರ್ಯ

ಪತ್ರಿಕೆ ಎಂದರೇ ಬಡವನಿಂದ ಬಲ್ಲಿದನವರೆಗೂ ಕೈಗೆ ಎಟುಕುವ ಏಕೈಕ ಜ್ಞಾನದ ಸರಕು. ‘ಪ್ರಜಾವಾಣಿ’ ಆರಂಭಿಸಲಿರುವ ಕ್ವಿಜ್ ಕಾರ್ಯಕ್ರಮ ಜ್ಞಾನದ ದೀವಿಗೆಯನ್ನು ಹಚ್ಚಿ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಲಿದೆ. ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳಿಲ್ಲದ ಈ ಸಮಯದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಪತ್ರಿಕೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ.

ಸುಷ್ಮಾ ಶ್ರೀನಿವಾಸ್, ಹೋರಾಟಗಾರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT