ಸೋಮವಾರ, ಸೆಪ್ಟೆಂಬರ್ 23, 2019
22 °C

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ

Published:
Updated:
Prajavani

ಚಿಕ್ಕಬಳ್ಳಾಪುರ: ಬೆಂಗಳೂರಿನ ಹೂಡಿಯಿಂದ ಉತ್ತರಪ್ರದೇಶದ ಅಯೋಧ್ಯೆ ವರೆಗೆ ಹೊರಟ ಶ್ರೀರಾಮರಥ ಪಾದಯಾತ್ರೆಯನ್ನು ನಗರದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು, ಸ್ವಾಗತಿಸಿ ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ.ಬಿ.ವಿ.ಮಂಜುನಾಥ್, ‘ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕು ಎಂದು ಆಗ್ರಹಿಸಿ ಹೂಡಿಯ ಮಂಜುನಾಥ್ ಮತ್ತು ಮಂಜಯ್ಯ ಅವರು ಶ್ರೀರಾಮರಥದ ಜತೆಗೆ ತಲೆ ಮೇಲೆ ಕಲ್ಲಿನ ಇಟಿಗೆ ಹೊತ್ತು ಪಾದಯಾತ್ರೆ ಮಾಡುತ್ತಿರುವುದು ದೇಶದ ಜನರ ಆಶಯ ಬಿಂಬಿಸುತ್ತದೆ’ ಎಂದರು.

‘ಕೋಟ್ಯಂತರ ಹಿಂದುಗಳ ಶ್ರದ್ಧೆ, ನಂಬಿಕೆ, ಮಹದಾಸೆ, ಹೆಮ್ಮೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಕೇಂದ್ರ ಸರ್ಕಾರ ಅಯೋಧ್ಯದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ಆರ್‌ಎಸ್‌ಎಸ್‌ ಮುಖಂಡಾರ ಶ್ರೀನಿವಾಸಮೂರ್ತಿ, ಅನಿಲ್, ವಿಕ್ರಂ, ಬಾಲಚಂದ್ರ, ಬಜರಂಗದಳದ ಮುಖಂಡ ಕಾರ್ತಿಕ್, ಬಿಜೆಪಿ ಮುಖಂಡ ಸಿ.ಬಿ.ಕಿರಣ್ ಪಾದಯಾತ್ರೆಗೆ ಶುಭ ಹಾರೈಸಿದರು.

Post Comments (+)