ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೈತಿಕ ಶಕ್ತಿ ಹೆಚ್ಚಿಸಿದ ಜನಬೆಂಬಲ’

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ‘ಪಂಚರತ್ನ’ ಯಾತ್ರೆ ಪೂರ್ಣಗೊಳಿಸಿದ ಎಚ್‌ಡಿಕೆ
Last Updated 29 ನವೆಂಬರ್ 2022, 5:22 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ‘ಪಂಚರತ್ನ’ ರಥಯಾತ್ರೆಗೆ ನಿರೀಕ್ಷೆಗೂ ಮೀರಿ ಜನಬೆಂಬಲ ವ್ಯಕ್ತವಾಗಿದೆ. ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಈ ಎರಡೂ ಜಿಲ್ಲೆಯ ಜನರು ಸಂದೇಶ ಕೊಟ್ಟಿದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ನಂದಿ ಗ್ರಾಮದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲ್ಲಿಯವರೆಗೆ ಹಾಸನ, ಮೈಸೂರು, ಮಂಡ್ಯಕ್ಕೆ ಜೆಡಿಎಸ್ ಸೀಮಿತವಾಗಿತ್ತು. ಇಲ್ಲಿ ಬಂದು ನಾಟಕ ಆಡುತ್ತಿದ್ದಾರೆ ಎಂದು ಸಚಿವರೊಬ್ಬರು ಹೇಳಿದ್ದಾರೆ. ಆದರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಜೆಡಿಎಸ್‌ನಭದ್ರಕೋಟೆ. ನಮ್ಮಲ್ಲಿನ ಕೆಲವುಸಮಸ್ಯೆಗಳ ಕಾರಣದಿಂದ ಪಕ್ಷಕ್ಕೆ ಹಿನ್ನಡೆ ಆಗಿತ್ತು. ಆದರೆ ಈ ಬಾರಿ ಎರಡೂ ಜಿಲ್ಲೆಗಳ 11 ಕ್ಷೇತ್ರಗಳಲ್ಲಿ ಗೆಲ್ಲಬೇಕು ಎನ್ನುವ ಗುರಿ ಇದೆ’ ಎಂದರು.

‘ನನಗೆ ಬೇರೆ ಪಕ್ಷಗಳ ಪ್ರಮಾಣ ಪತ್ರ ಅಗತ್ಯವಿಲ್ಲ. ನನಗೂ ಜನರನಾಡಿಮಿಡಿತ ಅರಿತುಕೊಳ್ಳುವ ಜ್ಞಾನ ಇದೆ. ಮಾ. 24ರವರೆಗೆ ನಡೆಯುವ ಯಾತ್ರೆಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ನೈತಿಕ ಮತ್ತು ಮಾನಸಿಕ ಶಕ್ತಿ ತುಂಬಿದ್ದಾರೆ. ಮುಂದಿನ 100 ದಿನಗಳ ಯಾತ್ರೆಗೆ ಇಲ್ಲಿನ ಜನರ ಬೆಂಬಲಆಮ್ಲಜನಕದ ರೀತಿ ದೊರೆತಿದೆ’ ಎಂದು ನುಡಿದರು.

ರೈತರ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯುತ್ತಿಲ್ಲ. ಸಾಲಗಾರರಾಗುವ ಪರಿಸ್ಥಿತಿ ಇದೆ. ಚಿಕ್ಕಬಳ್ಳಾಪುರ ಎಪಿಎಂಸಿ ಬಳಿ ರೈತರೊಬ್ಬರು ತಾವು ಬೆಳೆದಬೆಳೆಗಳಿಗೆ ಬೆಲೆ ಇಲ್ಲದಿರುವುದನ್ನುಪ್ರಸ್ತಾಪಿಸಿ ಕಣ್ಣೀರು ಹಾಕಿದರು. ಮಕ್ಕಳು ಶಾಲೆಗಳಿಗೆ ತೆರಳಲು ಬಸ್ ವ್ಯವಸ್ಥೆ ಇಲ್ಲ. ಎರಡು ವರ್ಷಗಳಿಂದ ಮಕ್ಕಳಿಗೆ ಸೈಕಲ್ ಸಹ ವಿತರಿಸಿಲ್ಲ. ಗೌರಿಬಿದನೂರಿನ ಹೆಣ್ಣು ಮಗಳೊಬ್ಬರು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿಗೆ ಹೋಗುತ್ತಾರೆ. ಅವರು ಬೆಳಿಗ್ಗೆ 4ಕ್ಕೆ ಮನೆಯಿಂದ ಹೊರಟರೆ ರಾತ್ರಿ 9ಕ್ಕೆ ಮನೆಗೆ ಬರುತ್ತಾರೆ. ಹಾಸ್ಟೆಲ್ ಸೌಲಭ್ಯವೂ ದೊರೆತಿಲ್ಲ ಎಂದು ಹೇಳಿದರು.

ಸಂಜೆ 4.30ಕ್ಕೆ ಶಾಲೆ ಬಿಟ್ಟರೆ ಆರು ಗಂಟೆಯಾದರೂ ಬಸ್‌ಗಳಿಗೆ ವಿದ್ಯಾರ್ಥಿಗಳು ಕಾಯಬೇಕಾಗಿದೆ. ನೂತನ ಶಿಕ್ಷಣ ನೀತಿಯ ಮೂಲಕ ಶಿಕ್ಷಣದ ಕ್ಷೇತ್ರದಲ್ಲಿ ಬದಲಾವಣೆ ತರಲಾಗುವುದು ಎನ್ನುತ್ತಾರೆ. ಆದರೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸೌಲಭ್ಯಗಳಿಲ್ಲ. ಈ ಕಾರಣದಿಂದ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ ಎಂದರು.

ಜಿಲ್ಲೆಯಲ್ಲಿ 30, 40 ವರ್ಷದಿಂದ ಜಮೀನು ಉಳುಮೆ ಮಾಡುತ್ತಿರುವ ಪರಿಶಿಷ್ಟ ಸಮುದಾಯದ ಜನರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಹೇಳಿದರು.

‘ಪಂಚರತ್ನ’ ಯೋಜನೆಗಳಅನುಷ್ಠಾನಕ್ಕೆ ₹ 1.25 ಲಕ್ಷ ಕೋಟಿ ವೆಚ್ಚ ಮಾಡುವ ಯೋಜನೆ ಇದೆ. ಇದಕ್ಕೆ ನೀಲ ನಕ್ಷೆ ‌ತಯಾರಿಸಿದ್ದೇವೆ. ಐದು ವರ್ಷಗಳಲ್ಲಿ ಪಂಚರತ್ನ ಯೋಜನೆಗಳನ್ನು ಪ್ರತಿ ಕುಟುಂಬಕ್ಕೆ ತಲುಪಿಸಲಾಗುವುದು. ಇದಕ್ಕಾಗಿ ನನಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ನಾನು ಯೋಜನೆಯನ್ನು ಜನರಿಗೆ ತಲುಪಿಸಲು ವಿಫಲವಾದರೆ ಮತ್ತೆ ನಿಮ್ಮ ಮುಂದೆ ಮತ ಕೇಳಲು ಬರುವುದಿಲ್ಲ ಎಂದು ಹೇಳಿದ್ದೇನೆ ಎಂದರು.

ಚುನಾವಣೆಯಲ್ಲಿ ಹಣವೂನಿರ್ಣಾಯಕವಾಗುತ್ತದೆ.ಇಲ್ಲದಿದ್ದರೆ 2013ರ ಚುನಾವಣೆಯಲ್ಲಿ ಬಚ್ಚೇಗೌಡರು ಸೋಲುವ ಸಾಧ್ಯತೆ ಇರಲಿಲ್ಲ. ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರು ಎಂದರು.

ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಪಿ. ಬಚ್ಚೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ. ಮುನೇಗೌಡ ಇತರರು ಗೋಷ್ಠಿಯಲ್ಲಿ ಇದ್ದರು.

ಮೀಸಲಾತಿ: ರಾಜಕೀಯ ಲಾಭ, ನಷ್ಟ ಮುಖ್ಯವಾಗಬಾರದು

ಸರ್ಕಾರಕ್ಕೆ ಜವಾಬ್ದಾರಿ ಇದ್ದರೆ ಸಮಾಜದಲ್ಲಿನ ಬಡತನ ಹೋಗಲಾಡಿಸಲು ಮೀಸಲಾತಿ ವ್ಯವಸ್ಥೆ ಜಾರಿಗೊಳಿಸಬೇಕು.ರಾಜಕೀಯ ಲಾಭ, ನಷ್ಟದ ಲೆಕ್ಕಾಚಾರ ಇಲ್ಲಿ ಮುಖ್ಯವಾಗಬಾರದು ಎಂದುಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ನಂದಿ ಗ್ರಾಮದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಮೀಸಲಾತಿ ವ್ಯವಸ್ಥೆಯಿಂದ ಬಡತನ ಹೋಗಿದೆಯಾ ಎನ್ನುವ ವಾಸ್ತವಗಳನ್ನು ಚರ್ಚೆ ಮಾಡಬೇಕು. ಅಲೆಮಾರಿ ಸಮುದಾಯಗಳು ಇಂದಿಗೂ ಮೀಸಲಾತಿ ಸೌಲಭ್ಯದಿಂದ ಹೊರಗೆ ಉಳಿದಿವೆ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿವೆ ಎಂದರು.

ಬಿಜೆಪಿಯವರುಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾತಿ ಹೆಚ್ಚಿಸಿದ್ದೇವೆ ಎಂದು ಬೆನ್ನುತಟ್ಟಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕಾನೂನು ತೊಡಕುಗಳಿವೆ. ಮೀಸಲಾತಿ ಹೆಚ್ಚಳ ಜಾರಿಗೊಳಿಸಿ ಬಿಜೆಪಿಯವರು ಬೆನ್ನುತಟ್ಟಿಕೊಳ್ಳಲಿ ಎಂದು ಹೇಳಿದರು.

‘ಸಿ.ಎಂ.ಇಬ್ರಾಹಿಂ ಯಾಕೆ ಸಿ.ಎಂ ಆಗಬಾರದು, ಅವರೇನು ಅಸ್ಪೃಶ್ಯರೇ?’ ಎನ್ನುವ ನಿಮ್ಮ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ, ‘ನಾನು ಇಲ್ಲಿ ಸ್ಪರ್ಶ, ಅಸ್ಪೃಶ್ಯತೆಯ ಬಗ್ಗೆ ಹೇಳಿದ್ದೇನೆ. ಅಸ್ಪೃಶ್ಯರು ಏಕೆ ಸಿ.ಎಂ ಆಗಬಾರದು ಎಂದು ಪ್ರಶ್ನಿಸಿದ್ದೇನೆ. ಅದು ಅಸ್ಪೃಶ್ಯ ಸಮಾಜವನ್ನು ತೆಗಳಿರುವುದಲ್ಲ, ‘ಅವರು ಏಕೆ ಆಗಬಾರದು’ ಎಂದು ಕೇಳಿರುವುದುಅವರಲ್ಲಿ ವಿಶ್ವಾಸ ತುಂಬುವಮತ್ತು ಅವರಿಗೆ ಗೌರವ ಕೊಡುವ ಮಾತಾಗಿದೆ ಎಂದು ಸ್ಪಷ್ಟಪಡಿಸಿದರು.

‘ಕೆ.ಸಿ.ವ್ಯಾಲಿಯಂತ್ರ ದುರಸ್ತಿಗೆ’

‘ನನಗೆ ಇರುವ ಮಾಹಿತಿ ಪ್ರಕಾರಕೆ.ಸಿ.ವ್ಯಾಲಿ ಯೋಜನೆಯ ನೀರು ಶುದ್ಧೀಕರಣಯಂತ್ರಗಳುದುರಸ್ತಿಗೆ ಬಂದಿವೆ. ಸರ್ಕಾರಕ್ಕೆಜನರಿಗೆ ಪರಿಶುದ್ಧ ನೀರು ಕೊಡಬೇಕು ಎನ್ನುವುದಿಲ್ಲ. ಅವರ ಜೇಬು ತುಂಬಬೇಕು ’ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT