ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: 'ಪ್ರಗತಿಪೂರಕ ಚಟುವಟಿಕೆಯಿಂದ ಸಾಧನೆ'

ಕೌಶಲ ತರಬೇತಿ ಕಾರ್ಯಾಗಾರ
Last Updated 20 ಜನವರಿ 2021, 2:09 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಪ್ರತಿಯೊಂದು ಮಗುವಿನಲ್ಲಿಯೂ ಸುಪ್ತವಾಗಿರುವ ಅರಿವನ್ನು ಜಾಗೃತಗೊಳಿಸಲು ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣವು ಉತ್ತಮ ಮಾರ್ಗವಾಗಿದೆ. ಮಕ್ಕಳನ್ನು ಸರ್ವತೋಮುಖ ಪ್ರಗತಿಗೆ ಪೂರಕವಾದ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಸಾಧನೆ ಸುಲಭವಾಗುವುದು’ ಎಂದು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್ ಬಹುಗುಣ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯಕೋಶ, ಯಲಹಂಕ ಅನಿಕೇತನ ಯುವಜನಸೇವಾಸಂಘಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ, ಕೌಶಲ ತರಬೇತಿ ಕಾರ್ಯಾಗಾರ, ವಿವಿಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇವಲ ಔಪಚಾರಿಕ ಶಿಕ್ಷಣವಲ್ಲದೇ ಕರಕುಶಲ, ಕಲೆ, ನಾಟಕ, ಕ್ರೀಡೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿಯೂ ಹೆಚ್ಚೆಚ್ಚು ತೊಡಗಿಸುವ ಮೂಲಕ ಮಕ್ಕಳನ್ನು ವಿಶಾಲಮನೋಭಾವನೆಯತ್ತ ಕೊಂಡೊಯ್ಯಬೇಕಾದ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಪರಿಸರ ಸಂರಕ್ಷಣೆ, ಮಾನವೀಯ ಸಂಬಂಧಗಳ ಬೆಳವಣಿಗೆ, ಉತ್ತಮ ಬದುಕಿಗೆ ಯುವಪೀಳಿಗೆಯನ್ನು ಸನ್ನದ್ಧಗೊಳಿಸುವಲ್ಲಿ ಎಲ್ಲರೂ ಶ್ರಮವಹಿಸಬೇಕು’ ಎಂದರು.

ನವದೆಹಲಿಯ ರಾಷ್ಟ್ರೀಯ ಯುವಯೋಜನೆಯ ರಾಜ್ಯಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ‘ಸ್ವಾಮಿವಿವೇಕಾನಂದರ ಆದರ್ಶಗಳು ಯುವಪೀಳಿಗೆಯಲ್ಲಿ ಆತ್ಮವಿಶ್ವಾಸ, ಸ್ಫೂರ್ತಿ, ಧೈರ್ಯ, ಸಾಹಸಪ್ರವೃತ್ತಿಗಳನ್ನು ಬಿತ್ತಬಲ್ಲವು. ಮಕ್ಕಳದಿಸೆಯಿಂದಲೇ ಪ್ರೀತಿ, ಸೇವಾಮನೋಭಾವನೆಗಳನ್ನು ಬೆಳೆಯುವಂತೆ ಮಾಡಿ, ನೈತಿಕ ಮೌಲ್ಯಗಳನ್ನಾಧರಿಸಿದ ಬದುಕು ಕಂಡುಕೊಳ್ಳಲು ಸಹಕಾರಿಯಾಗಲಿವೆ’ ಎಂದರು.

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗಾಗಿ ಕರಕುಶಲ ವಸ್ತುಗಳ ತಯಾರಿ ಕುರಿತು ತರಬೇತಿ ನೀಡಲಾಯಿತು. ಪ್ರಬಂಧ ರಚನೆ, ಚಿತ್ರರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾಮಕ್ಕಳಿಂದ ಗೀತೆಗಳ ಗಾಯನ ನಡೆಯಿತು.

ಸ್ಪರ್ಧಾ ವಿಜೇತರು: ಪ್ರಬಂಧ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎಸ್.ಕಾವ್ಯಾ-ದ್ವಿತೀಯ, ಆರ್.ದೀಪಿಕಾ-ತೃತೀಯ; ಚಿತ್ರರಚನೆ ಸ್ಪರ್ಧೆಯಲ್ಲಿ ಎಸ್.ಆರ್.ಮೋಹನ್-ಪ್ರಥಮ, ಎಸ್.ಎ.ವಿಕ್ರಂ-ದ್ವಿತೀಯ, ಎಸ್.ಪಿ.ಧನುಶ್‌ಗೌಡ-ತೃತೀಯ; ಕರಕುಶಲವಸ್ತುಗಳ ತಯಾರಿ ಸ್ಪರ್ಧೆಯಲ್ಲಿ ಎಸ್.ಎಂ.ನಂದಿನಿ-ಪ್ರಥಮ, ಆರ್.ದೀಪಿಕಾ-ದ್ವಿತೀಯ, ಎಸ್.ಎನ್.ಅನುಷಾ-ತೃತೀಯ ಬಹುಮಾನ ಪಡೆದುಕೊಂಡರು.

ಎಸ್‌ಡಿಎಂಸಿ ಅಧ್ಯಕ್ಷ ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ನಾರಾಯಣಸ್ವಾಮಿ, ಸದಸ್ಯೆ ನರಸಮ್ಮ, ಮಾಜಿ ಸದಸ್ಯ ಬಚ್ಚೇಗೌಡ, ಗ್ರಾಮಪಂಚಾಯಿತಿ ಸದಸ್ಯ ಶಿವಶಂಕರಪ್ಪ, ಎಂ.ನಾಗರಾಜು, ಮಾಜಿ ಸದಸ್ಯೆ ಎನ್.ಅಶ್ವತ್ಥಪ್ಪ, ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಚಿಕ್ಕಮುನಿವೆಂಕಟಶೆಟ್ಟಿ, ಎನ್‌ಎಸ್‌ಎಸ್ ಸ್ವಯಂಸೇವಕ ಸಿ.ಪವನ್, ಎಸ್.ಎಂ.ಪವನ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT