ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಶ್ರೀಗಂಧದ ಸಸಿಗಳ ನಾಟಿ

ಪ್ರಸಕ್ತ ವರ್ಷ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಗಳಲ್ಲಿವೆ 6,90,000 ಸಸಿಗಳು
Last Updated 27 ಜೂನ್ 2021, 3:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶ್ರೀಗಂಧದ ನಾಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಸಕ್ತ ವರ್ಷ ರೈತರು ಸಾಮಾಜಿಕ ಅರಣ್ಯ ಇಲಾಖೆಯಿಂದ ಶ್ರೀಗಂಧದ ಸಸಿಗಳನ್ನು ಹೆಚ್ಚು ಪಡೆದು ಜಮೀನುಗಳಲ್ಲಿ, ಬದುಗಳಲ್ಲಿ, ಖಾಲಿ ಜಾಗಗಳಲ್ಲಿ ನಾಟಿ ಮಾಡುತ್ತಿದ್ದಾರೆ.

20 ವರ್ಷಗಳ ಕಾಲ ಶ್ರೀಗಂಧವನ್ನು ಬೆಳೆಸಿ ಕಟಾವು ಮಾಡಬಹುದು. ಇದರಿಂದ ಆದಾಯವೂ ಹೆಚ್ಚುತ್ತದೆ. ನೀರು ಕಡಿಮೆ ಇದ್ದರೂ ಶ್ರೀಗಂಧದ ಸಸಿಗಳನ್ನು ಆರೈಕೆ ಮಾಡಬಹುದು. ಅಲ್ಲದೆ ಕಳೆದ ವರ್ಷವೂ ಉತ್ತಮ ಮಳೆ ಆಗಿತ್ತು. ಈ ವರ್ಷವೂ ಉತ್ತಮ ಮಳೆ ಆಗುತ್ತಿದೆ. ಭವಿಷ್ಯದಲ್ಲಿ ಉತ್ತಮಗಳಿಸಬಹುದು ಎನ್ನುವ ಉದ್ದೇಶದಿಂದ ರೈತರು ಶ್ರೀಗಂಧದ ಸಸಿಗಳನ್ನು ನಾಟಿ ಮಾಡುತ್ತಿದ್ದಾರೆ.

ಈ ಮುನ್ನ ಬದುಗಳಲ್ಲಿ ಮಾತ್ರ ಶ್ರೀಗಂಧವನ್ನು ರೈತರು ಬೆಳೆಸುತ್ತಿದ್ದರು. ಆದರೆ ಈಗ ಹೊಲಗಳಲ್ಲಿ ಇತರೆ ಸಸಿಗಳನ್ನು ನಾಟಿ ಮಾಡಿದಂತೆಯೇ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಅರಣ್ಯ ಇಲಾಖೆಯು ಚಿಕ್ಕಬಳ್ಳಾಪುರದಲ್ಲಿ ಸುಲ್ತಾನ್ ಪೇಟೆ, ಗುಡಿಬಂಡೆಯಲ್ಲಿ ಎಲ್ಲೋಡು, ಗೌರಿಬಿದನೂರಿನಲ್ಲಿ ಕುರೂಡಿ, ಬಾಗೇಪಲ್ಲಿಯಲ್ಲಿ ಪರಗೋಡು, ಶಿಡ್ಲಘಟ್ಟದಲ್ಲಿ ಪಟ್ರಹಳ್ಳಿ, ಚಿಂತಾಮಣಿಯಲ್ಲಿ ಆರ್‌ಎಫ್ಒ ಕಚೇರಿಯಲ್ಲಿ ನರ್ಸರಿಗಳಿವೆ.

ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಗೊಂಗಡಿಪುರ, ಗುಡಿಬಂಡೆಯಲ್ಲಿ ಜುಬಲಿ ಗಾರ್ಡನ್, ಗೌರಿಬಿದನೂರಿನಲ್ಲಿ ಮುದುಗಾನ ಕುಂಟೆ, ಬಾಗೇಪಲ್ಲಿಯಲ್ಲಿ ಕೊಂಡರೆಡ್ಡಿಪಲ್ಲಿ, ಶಿಡ್ಲಘಟ್ಟದಲ್ಲಿ ಪಟ್ರೇನಹಳ್ಳಿ, ಚಿಂತಾಮಣಿ ತಾಲ್ಲೂಕಿನ ರಾಗುಟ್ಟಹಳ್ಳಿಯಲ್ಲಿ ನರ್ಸರಿಗಳಿವೆ. ಈ ನರ್ಸಸಿಲ್ವರ್‌ ಓಕ್, ಸಾಗುವಾನಿ, ಹೆಬ್ಬೇವು, ಶ್ರೀಗಂಧ, ರಕ್ತ ಚಂದನ, ಹುಣಸೆ, ಬೇವು, ನುಗ್ಗೆ. ಹೊಂಗೆ, ಸಿಮರೂಬಾ, ಬೀಟೆ, ಜಂಬು ನೇರಳೆ, ಹಿಪ್ಪೆ, ಬಿದಿರು, ಬೆಟ್ಟದ ನೆಲ್ಲಿ, ಸಿಲ್ವರ್ ಓಕ್ ಸಸಿಗಳು ದೊರೆಯುತ್ತವೆ.

‘ಈ ವರ್ಷ ಗಂಧ ಮತ್ತು ಮಹಾಗನಿ ಸಸಿಗಳನ್ನು ಹೆಚ್ಚು ಕೇಳುತ್ತಿದ್ದಾರೆ. ಕಳೆದ ವರ್ಷ ಈ ಸಸಿಗಳ ಜತೆಗೆ ಹೆಬ್ಬೇವನ್ನು ಹೆಚ್ಚು ಕೇಳುತ್ತಿದ್ದರು. ಗಂಧನಕ್ಕೆ ಒಂದು ಕೆ.ಜಿಎಗೆ ₹ 10 ಸಾವಿರವಿದೆ. ಗಿಡಗಳನ್ನು ಉಳಿಸಿ ಬೆಳೆಸಿದರೆ ಹೆಚ್ಚು ಅನುಕೂಲ ಆಗುತ್ತದೆ.ಗಂಧದ ಸಸಿಗಳನ್ನು ಬೆಳೆಸುವುದು ಉತ್ತಮವಾದುದು. ಆದಾಯವೂ ಹೆಚ್ಚುತ್ತದೆ. ಎಲ್ಲ ನರ್ಸರಿಗಳಲ್ಲಿ ಜನರಿಗೆ ಅಗತ್ಯವೇನಿದೆಯೊ ಅಷ್ಟು ಗಂಧದದ ಸಸಿಗಳು ಇವೆ. ಬೇಡಿಕೆಯ ಪ್ರಕಾರವೇ ಸಸಿಗಳನ್ನು ಬೆಳೆಸುತ್ತಿದ್ದೇವೆ’ ಎಂದು ಸಾಮಾಜಿಕ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೆ.ಶ್ರೀನಾಥ್‌ ಅವರು
ತಿಳಿಸಿದರು.

‘ರೈತರಿಗೆ ವಿತರಣೆ ಹಾಗೂ ರಸ್ತೆ ಬದಿಗಳಲ್ಲಿ ನಾಟಿ ಮಾಡಿದ್ದು ಸೇರಿದಂತೆ 12 ಲಕ್ಷ ಸಸಿಗಳನ್ನು ವಿತರಿಸಿದ್ದೆವು. ಈ ವರ್ಷ ಸದ್ಯ ನರ್ಸರಿಗಳಲ್ಲಿ 6,90,000 ಸಾವಿರ ಸಸಿಗಳಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT