ಚಿಂತಾಮಣಿ: ತಾಲ್ಲೂಕಿನ ಕುರುಬೂರಿನ ಕೃಷಿ ಮತ್ತು ರೇಷ್ಮೆ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿಗಳು ಮಂಗಳವಾರ ರೈತ ಕುರುಟಹಳ್ಳಿಯ ರಾಧಾಕೃಷ್ಣ ಅವರ ಕೃಷಿ ಫಾರಂಗೆ ಭೇಟಿ ನೀಡಿ ಪ್ರಾಯೋಗಿಕ ಅನುಭವ ಪಡೆದುಕೊಂಡರು.

ಅರಣ್ಯ ಕೃಷಿ, ತೋಟಗಾರಿಕಾ ಬೆಳೆ, ಕೋಳಿ ಫಾರಂ ಹಾಗೂ ಮೇಲೆ ಸೋಲಾರ್ ಅಳವಡಿಕೆ, ಜೇನು ಸಾಕಾಣಿಕೆ, ಕೃಷಿ ಹೊಂಡದಲ್ಲಿ ಮೀನು ಸಾಕಾಣಿಕೆ, ಕುರಿ-ಮೇಕೆ, ಹಸು ಸಾಕಾಣಿಕೆಯನ್ನು ವಿದ್ಯಾರ್ಥಿಗಳು ಸ್ವತ: ಕಂಡು ಚರ್ಚೆ, ಸಂವಾದ ನಡೆಸಿದರು.

ರಾಧಾಕೃಷ್ಣ ಮಾತನಾಡಿ, ಪೂರ್ವಿಕರ ಕಾಲದ ಸಮಗ್ರ ಕೃಷಿ ಹಾಗೂ ಶೂನ್ಯ ಬಂಡವಾಳದ ಪದ್ಧತಿಯ ಬಗ್ಗೆ ಕೃಷಿ ವಿದ್ಯಾರ್ಥಿಗಳು ರೈತರಿಗೆ ಜಾಗೃತಿ ಮೂಡಿಸಬೇಕು. ಯಾವುದೇ ಒಂದು ಬೆಳೆಗೆ ಜೋತು ಬೀಳದೆ ಬಹುಬೆಳೆ ಪದ್ಧತಿ ರೂಢಿಸಿಕೊಳ್ಳಬೇಕು. ಇದರಿಂದ ಒಂದು ಬೆಳೆ ಕೈಕೊಟ್ಟರೂ ಮತ್ತೊಂದು ಕೈಹಿಡಿಯುತ್ತದೆ ಎಂದರು.

ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.