ಸೋಮವಾರ, ಜುಲೈ 26, 2021
26 °C
ಬಾಗೇಪಲ್ಲಿ: ಪಟ್ಟಣದ 12ನೇ ವಾರ್ಡ್‌ನಲ್ಲಿ ನೀರಿಗೆ ಹಾಹಾಕಾರ

ಬಾಗೇಪಲ್ಲಿ | ಸೌಕರ್ಯ ವಂಚಿತ 12ನೇ ವಾರ್ಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣದ 12ನೇ ವಾರ್ಡ್‌ನಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಸಮರ್ಪಕವಾಗಿರದಿರುವುದರಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

12ನೇ ವಾರ್ಡ್‌ನಲ್ಲಿ 400 ಕುಟುಂಬಗಳಿವೆ. ಅಂಬೇಡ್ಕರ್‌ ಕಾಲೊನಿಯ ಹಿಂದಿನ ಕಲ್ಲುಬಂಡೆ ಮೇಲೆ ಬಹುತೇಕರು ಮನೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಬಹುತೇಕ ಮನೆಗಳಿಗೆ ಪೈಪ್‌ಲೈನ್‌ ಇಲ್ಲ.

ವಾರ್ಡ್‌ಗೆ ಕೊಳವೆಬಾವಿ ಮೂಲಕ ನೀರು ಪೂರೈಸಲಾಗುತ್ತದೆ. ಅಂತರ್ಜಲ ಕುಸಿದಿರುವುದರಿಂದ ವಾರ್ಡ್‌ನಲ್ಲಿ 15 ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ವಾರ್ಡ್‌ನಲ್ಲಿ ಒಂದು ಸಾರ್ವಜನಿಕ ಕೊಳಾಯಿ ಇದೆ. 15 ದಿನಗಳಿಗೊಮ್ಮೆ ನೀರು ಸರಬರಾಜು ಆದರೂ, ಇಲ್ಲಿನ ಜನರಿಗೆ ಸಿಗುವುದು 3ರಿಂದ 5 ಕೊಡದಷ್ಟು ಮಾತ್ರ ಕುಡಿಯುವ ನೀರು ಸಿಗುತ್ತಿದೆ.

ಈ ವಾರ್ಡ್‌ಗೆ ಕೊರ್ಲಕುಂಟೆ ಪಂಪ್‌ಹೌಸ್‌ನಲ್ಲಿನ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿದೆ. ಹಳೇ ಪೈಪುಗಳು ಒಡೆದಿದ್ದು, ಸಾಕಷ್ಟು ನೀರು ಪೋಲಾಗುತ್ತಿದೆ. ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ ಎಂದು ವಾರ್ಡ್‌ನ ನಿವಾಸಿಗಳು ಆರೋಪಿಸಿದ್ದಾರೆ.

ಸ್ವಚ್ಛತೆ ಕೊರತೆ: ವಾರ್ಡ್‌ನ ಚರಂಡಿಗಳನ್ನು 15 ದಿನವಾದರೂ ಸ್ವಚ್ಛತೆ ಮಾಡಿಲ್ಲ. ಚರಂಡಿಗಳಲ್ಲಿ ಹೂಳು, ತ್ಯಾಜ್ಯ ತುಂಬಿಕೊಂಡು ದುರ್ನಾತ ಬೀರುತ್ತಿದೆ. ಜನರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ. ಬಹುತೇಕರು ಶೌಚಾಲಯ ಇದ್ದರೂ ಬಯಲು ಶೌಚಕ್ಕೆ ತೆರಳುತ್ತಿದ್ದಾರೆ.

ಸುಸಜ್ಜಿತ ರಸ್ತೆ ಇಲ್ಲ: ಬಹುತೇಕ ರಸ್ತೆಗಳಿಗೆ ಡಾಂಬರು ಹಾಕಿಲ್ಲ. ಮುಖ್ಯ ರಸ್ತೆಯೇ ಹೊಂಡ ಗುಂಡಿಗಳಿಂದ ಕೂಡಿದ ಕಚ್ಚಾ ರಸ್ತೆಯಾಗಿದೆ. ಇಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ರಸ್ತೆ ಬದಿಗಳಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಿಸಲಾಗಿಲ್ಲ. ಇದ
ರಿಂದ ಮಳೆಗಾಲದಲ್ಲಿ ಹೆಚ್ಚು ತೊಂದರೆಯಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು