ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಹುದ್ದೆ; ₹ 21 ಲಕ್ಷ ವಂಚನೆ

2019ರ ನೇಮಕಾತಿ ವೇಳೆ ಕೆಲಸ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದ ಆರೋಪಿಗಳು
Last Updated 9 ಮೇ 2022, 14:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ:‘2019ರಲ್ಲಿ ನಡೆದ ಪಿಎಸ್‌ಐ ನೇಮಕಾತಿ ವೇಳೆ ನನ್ನ ಮಗನಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಹುಬ್ಬಳ್ಳಿಯನವೀನ್ ದಳಭಂಜನ್, ಸುಹಾನ್ ಮತ್ತು ಪವನ್₹21,20,000 ಪಡೆದಿದ್ದಾರೆ. ಅವರು ಕೆಲಸ ಕೊಡಿಸಲಿಲ್ಲ. ಹಣ ವಾಪಸ್ ಕೇಳಿದರೂ ನೀಡುತ್ತಿಲ್ಲ. ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು’ ಎಂದು ಜಿ.ಎಸ್ ಸತ್ಯನಾರಾಯಣ ಎಂಬುವವರುಬಾಗೇಪಲ್ಲಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

‘ನನ್ನ ಮಗ ಕಿರಣ್ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ.ಆ ಸಮಯದಲ್ಲಿ ಪರಿಚಿತರಾದ ಗೌರಿಬಿದನೂರು ತಾಲ್ಲೂಕು ಬಸವಾಪುರ ಗ್ರಾಮದ ಜಯರಾಮರೆಡ್ಡಿ ಅವರು ನನಗೆ ಹುಬ್ಬಳ್ಳಿ ಮೂಲದ ನವೀನ್ ಅವರನ್ನು ಪರಿಚಯಿಸಿದರು. ನನಗೆ ಸುಹಾಸ್ ಮತ್ತು ಪವನ್ ಎಂಬುವವರ ಪರಿಚಯ ಇದೆ. ನಾವೆಲ್ಲರೂ ಸೇರಿ ನಿಮ್ಮ ಮಗನಿಗೆ ಪಿಎಸ್ಐ ಕೆಲಸ ಕೊಡಿಸುತ್ತೇವೆ ಎಂದು ನವೀನ್ ನಂಬಿಸಿದ್ದರು. ₹ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ನನ್ನ ಪತ್ನಿಯ ಹೆಸರಿನಲ್ಲಿದ್ದ ಮನೆ ಮಾರಾಟ ಮಾಡಿ ಹಣ ನೀಡಿದೆ.

ನೇಮಕಾತಿ ಬಗ್ಗೆ ಕೇಳಿದಾಗ ಇಂದು ನಾಳೆ ಎಂದರು. ಪಿಎಸ್‌ಐ ನೇಮಕಾತಿ ಪಟ್ಟಿ ಪ್ರಕಟವಾಗಿದ್ದು ತಿಳಿಯಿತು. ಕೆಲಸ ಕೊಡಿಸುವುದಾಗಿ ನಮ್ಮಿಂದ ಒಟ್ಟು21,20,000 ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT