ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ, ಕಟ್ಟೆಗಳಿಗೆ ಮಳೆ ನೀರು

ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಉತ್ತಮ ಮಳೆ
Last Updated 19 ಜುಲೈ 2021, 3:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಎಲ್ಲೆಡೆ ಶನಿವಾರ ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದೆ. ನೀರಿಲ್ಲದೆ ಭಣಗುಡುತ್ತಿದ್ದ ಹಳ್ಳಗಳು, ಕೆರೆ, ಕಟ್ಟೆಗಳಲ್ಲಿ ನೀರು ತುಂಬಿದೆ. ಕೆಲವು ಕಡೆಗಳಲ್ಲಿ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.

ಮಂಡಿಕಲ್, ಮಂಚನಬಲೆ, ಪೆರೇಸಂದ್ರ, ಮುದ್ದೇನಹಳ್ಳಿ, ಅಗಲಗುರ್ಕಿ, ಪೋಶೆಟ್ಟಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹೊಲ ತೋಟಗಳಲ್ಲಿಯೇ ಹೇರಳವಾಗಿ ನೀರು ನಿಂತಿದೆ. ಬಹುತೇಕ ಗ್ರಾಮಗಳಲ್ಲಿ ಕೆರೆಗಳಲ್ಲಿ ನೀರು ತುಂಬಿದೆ.

ನಗರದ ಕಂದವಾರ ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೆರೆ ಏರಿಯ ಮಟ್ಟಕ್ಕೆ ನೀರು ಬಂದಿದೆ. ಶೆಟ್ಟಿಹಳ್ಳಿ ಬಡಾವಣೆಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಬೆಳಿಗ್ಗೆಯೆಲ್ಲ ತಗ್ಗು ಪ್ರದೇಶಗಳ ಜನರು ನೀರನ್ನು ಮನೆಗಳಿಂದ ಹೊರಗೆ ಹಾಕುತ್ತಿದ್ದರು. ಜಕ್ಕಲಮಡುಗು ಜಲಾಶಯಕ್ಕೂ ಹೇರಳವಾಗಿ ನೀರು ಹರಿದು ಬಂದಿದೆ.

ಜೈಭೀಮ್ ನಗರ, ಕಲ್ಲಪ್ಪ ಬಡವಾಣೆ, ಮಾರ್ಕೆಟ್ ರಸ್ತೆಯ ತಗ್ಗು ಪ್ರದೇಶ, ಕೆಳಗಿನ ತೋಟಗಳಲ್ಲಿ ರಸ್ತೆಗಳಲ್ಲಿ ನೀರು ನಿಂತಿದೆ. 16ನೇ ವಾರ್ಡ್‌ನಲ್ಲಿ ಗೋಡೆ ಕುಸಿದು ಬಿದ್ದು ಕಾರು ಜಖಂ ಆಗಿದೆ. 5, 6, 8, 9ನೇ ವಾರ್ಡ್ ವ್ಯಾಪ್ತಿಯಲ್ಲಿ ಮಳೆ ಹಲವು ರೀತಿಯಲ್ಲಿ ಅಧ್ವಾನಗಳನ್ನು ಸೃಷ್ಟಿಸಿದೆ. ಚಿಕ್ಕಬಳ್ಳಾಪುರದ ಸುಬ್ಬರಾಯನಪೇಟೆಯಲ್ಲಿ ಹಳೇ ಮನೆಯೊಂದು ಕುಸಿದಿದೆ.

ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು, ಪೌರಾಯುಕ್ತ ಲೋಹಿತ್, ಆಯಾ ವಾರ್ಡ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಿದರು.

ತಾಲ್ಲೂಕಿನ ಮೈಲಪ್ಪನಹಳ್ಳಿಯಲ್ಲಿ ಹೂ ಹಾಗೂ ತರಕಾರಿ ಬೆಳೆ ನಷ್ಟಕ್ಕೀಡಾಗಿದೆ. ನಂದಿಗೆ ಸಾಗುವ ರಸ್ತೆಯಲ್ಲಿ ಬೃಹತ್ ಮರಗಳು ಸಹ ಬಿದ್ದಿದ್ದವು. ಬೆಳಿಗ್ಗೆ ಮರಗಳನ್ನು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT