ಭಾನುವಾರ, ಜನವರಿ 24, 2021
24 °C

ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಸಹಾಯಕ ಪ್ರಾದೇಶಿಕ ಕಚೇರಿಯ ಸಾರಿಗೆ ಅಧಿಕಾರಿಯಾಗಿ(ಎ.ಆರ್.ಟಿ.ಒ) ಆರ್. ರಾಜಪ್ಪ ಅಧಿಕಾರ ಸ್ವೀಕರಿಸಿದ್ದಾರೆ.

ಸುಮಾರು ಎರಡು ವರ್ಷಗಳಿಂದ ಹುದ್ದೆ ಖಾಲಿ ಇದ್ದು ನಾಗಿರೆಡ್ಡಿ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿದ್ದರು. ನಗರದ ಕನಂಪಲ್ಲಿಯಲ್ಲಿರುವ ಸಹಾಯಕ ಪ್ರಾದೇಶಕ ಸಾರಿಗೆ ಅಧಿಕಾರಿ  ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ರಾಜಪ್ಪ, ‘ನಾಗಿರೆಡ್ಡಿ ಅವರಿಗೆ ನೀಡುತ್ತಿದ್ದ ಸಹಕಾರವನ್ನು ನನಗೂ ನೀಡಬೇಕು. ಕಚೇರಿಯ ಎಲ್ಲ ಸಿಬ್ಬಂದಿ ಪರಸ್ಪರ ಹೊಂದಾಣಿಕೆಯಿಂದ ಉತ್ತಮವಾಗಿ ಕೆಲಸ ಮಾಡೋಣ’ ಎಂದರು.

ಸಾರಿಗೆ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಮಾತನಾಡಿ, ಸರ್ಕಾರಿ ಹುದ್ದೆಯಲ್ಲಿ ವರ್ಗಾವಣೆ, ನಿವೃತ್ತಿ ಸಾಮಾನ್ಯ ಎಂದರು.

ಕಚೇರಿ ಅಧೀಕ್ಷಕ ವೇಣುಗೋಪಾಲ್, ಸಿಬ್ಬಂದಿಯಾದ ದೇವರಾಜ್, ಪ್ರವೀಣ್, ಅಬ್ದುಲ್, ರೆಡ್ಡಿ, ಮಂಜುನಾಥ್, ನಗರಸಭೆಯ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.