ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಮೋರಿ ಅಭಿವೃದ್ಧಿಯಾಗದೆ ಸಂಚಾರಕ್ಕೆ ಸಂಕಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ಪಟ್ಟಣದ ಮುಖ್ಯ ರಸ್ತೆ ವಿಸ್ತರಣೆಯಾಗಿ 6 ವರ್ಷ ಕಳೆದರೂ ರಾಜಕಾಲುವೆ ಮೇಲಿನ ಮೋರಿಯ  ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ಮುಂದಾಗಿಲ್ಲ.

ಪಟ್ಟಣದ ಮುಖ್ಯ ರಸ್ತೆ ಕಾಮಗಾರಿ ಬಹುತೇಕ ಮುಗಿದಿದೆ. ನಗರದ ಹೃದಯ ಭಾಗದ ಮಸೀದಿ ಸಮೀಪ ಇರುವ ರಾಜಕಾಲುವೆಯ ಮೋರಿ ಕಾಮಗಾರಿ ಮಾತ್ರ ಇನ್ನೂ ಅರಂಭವಾಗಿಲ್ಲ.

ಚಿಕ್ಕಬಳ್ಳಾಪುರ, ಬಾಗೇಪಲ್ಲಿ ರಸ್ತೆ ಕಡೆಯಿಂದ ಗೌರಿಬಿದನೂರು ಕಡೆಗೆ ಹೊಗುವ ವಾಹನಗಳಿಗೆ ಪಟ್ಟಣದ ಮುಖ್ಯ ರಸ್ತೆ ಒಂದೇ ಮಾರ್ಗವಾಗಿದೆ. ರಸ್ತೆಯಲ್ಲಿ ಸಾರಿಗೆ ವಾಹನಗಳ ಜತೆಗೆ ಟ್ರಕ್‌ಗಳ ದಟ್ಟಣೆ ಹೆಚ್ಚಾಗುತ್ತಿದೆ. ಮೋರಿ ಮುರಿದುಬಿದ್ದರೆ ಗೌರಿಬಿದನೂರು ಕಡೆ ಸಂಪರ್ಕ ಕಡಿತಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ದಲಿತ ಮುಖಂಡ
ಜಿ.ವಿ.ಗಂಗಪ್ಪ ಹೇಳಿದರು.

ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದ ಮೋರಿ ಅಭಿವೃದ್ಧಿಯಾಗಿಲ್ಲ. ಈ ರಸ್ತೆಯಲ್ಲಿ ಈಚೆಗೆ ವಾಹನ ಸಂಚಾರ ಹೆಚ್ಚಾಗಿದೆ. ಮೋರಿಗೆ ತಡೆಗೋಡೆಯೂ ಇಲ್ಲ. ಆಯತಪ್ಪಿದರೆ ಮೋರಿಗೆ ಬೀಳುವುದು ಖಚಿತ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಬಿ.ಎ.ರಾಜೇಶ ಹೇಳಿದರು.

ಮುಖ್ಯ ರಸ್ತೆಯಲ್ಲಿ ಮೋರಿ ಅಭಿವೃದ್ಧಿಗೆ ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜಕಾಲುವೆ ಹಲವಾರು ವರ್ಷಗಳಿಂದ ಸ್ವಚ್ಛವಾಗದೇ ಕಾಲುವೆಯಲ್ಲಿ ತ್ಯಾಜ್ಯ ತುಂಬಿದ್ದು ಸರಿಪಡಿಸಲು ಅನುದಾನಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜಶೇಖರ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.