ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಬಂಡೆ: ಶಾಲೆಯಲ್ಲೇ ವಿದ್ಯಾರ್ಥಿಗಳ ರಾತ್ರಿ ವಾಸ್ತವ್ಯ

ಇಂದಿರಾಗಾಂಧಿ ವಸತಿ ಶಾಲಾ ನೂತನ ಕಟ್ಟಡ ಕಾಮಗಾರಿ ಕುಂಠಿತ
Published 23 ಆಗಸ್ಟ್ 2023, 7:45 IST
Last Updated 23 ಆಗಸ್ಟ್ 2023, 7:45 IST
ಅಕ್ಷರ ಗಾತ್ರ

ಗುಡಿಬಂಡೆ: ಪರಿಶಿಷ್ಟ ಜಾತಿ ಸಮುದಾಯದ ವಿದ್ಯಾರ್ಥಿಗಳ ವಾಸ ಮತ್ತು ಕಲಿಕೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2019ರಲ್ಲಿ ಸೋಮೇನಹಳ್ಳಿ ಹೋಬಳಿಯ ಗೆಗ್ಗಿಲರಾಳ್ಳಹಳ್ಳಿ ಬಳಿ ಹೊಸ ಕಟ್ಟ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಈ ಕಟ್ಟಡ ಕಾಮಗಾರಿ ಮಾತ್ರ ಈವರೆಗೆ ಪೂರ್ಣಗೊಂಡಿಲ್ಲ.

ಇದರಿಂದಾಗಿ ಈ ವಸತಿ ಶಾಲೆಯಲ್ಲಿದ್ದ 190 ವಿದ್ಯಾರ್ಥಿಗಳು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಾಸವಿದ್ದಾರೆ. ಆದರೆ, ಇದೇ ಕಟ್ಟಡದಲ್ಲಿ ಬೆಳಿಗ್ಗೆ ತರಗತಿಗಳನ್ನು ನಡೆಸುವ ಕಾರಣದಿಂದಾಗಿ ಬಾಲಕಿಯರ ವಸತಿ ನಿಲಯವು ವಿದ್ಯಾರ್ಥಿಗಳಿಗೆ ಹಗಲು ಹೊತ್ತಿನಲ್ಲಿ ತರಗತಿಗಳಾಗಿದ್ದರೆ, ರಾತ್ರಿ ಹೊತ್ತಿನಲ್ಲಿ ಮಲಗುವ ಕೋಣೆಯಾಗಿ ಪರಿವರ್ತನೆಯಾಗುತ್ತದೆ. 

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲಾ ಆವರಣದಲ್ಲಿ 2017-18ರಲ್ಲಿ ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯನ್ನು ಆರಂಭಿಸಲಾಗಿತ್ತು. ವಸತಿ ಶಾಲೆಗೆ ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯಲ್ಲದೆ ಪಕ್ಕದ ತಾಲ್ಲೂಕಿನ ವಿದ್ಯಾರ್ಥಿಗಳು ಸೇರಿದ್ದರು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯದಲ್ಲಿ ಕೊಠಡಿಗಳ ಕೊರತೆ ಇತ್ತು. 

ಹೀಗಾಗಿ ಸೋಮೇನಹಳ್ಳಿ ಹೋಬಳಿಯ ಗೆಗ್ಗಿಲರಾಳ್ಳಹಳ್ಳಿ ಬಳಿ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಕಾಮಗಾರಿಗೆ 2019ರಲ್ಲಿ  ₹20 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿತ್ತು. ಕಾಮಗಾರಿ ಹೊಣೆಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ವಹಿಸಿಕೊಂಡಿದೆ. 

ವಸತಿ ಶಾಲೆಯಲ್ಲಿ 190 ವಿದ್ಯಾರ್ಥಿಗಳು ಇದ್ದು, ಅವರನ್ನು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಇಲ್ಲಿ ಕೊಠಡಿಗಳ ಕೊರತೆಯಿಂದಾಗಿ ಇರುವ ಕೊಠಡಿಗಳಲ್ಲೇ ಬಾಲಕ ಮತ್ತು ಬಾಲಕಿಯರು ವಾಸಿಸುತ್ತಿದ್ದಾರೆ. ಜತೆಗೆ ಅಲ್ಲೇ ಪಾಠ ಮತ್ತು ರಾತ್ರಿ ನಿದ್ದೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದರು. 

ಇಂದಿರಾಗಾಂಧಿ ಪರಿಶಿಷ್ಟ ಜಾತಿ ವಸತಿ ಶಾಲೆಯ ಪ್ರಭಾರಿ ಪ್ರಾಂಶುಪಾಲ ಅಂಜನೇಯಲು ಮಾತನಾಡಿ, ಮಾರ್ಚ್ ತಿಂಗಳಿನಲ್ಲಿ ನೂತನ ಕಟ್ಟಡ ಉದ್ಘಾಟನೆಯಾಗಿದೆ. ಆದರೆ, ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದ್ದು, ಇನ್ನೂ ಪರಿಪೂರ್ಣವಾಗಿಲ್ಲ. ಒಂದು ಕಡೆ ತಡೆಗೋಡೆ ಕಾಮಗಾರಿ ಮುಗಿದಿದ್ದು, ಮೂರು ಕಡೆ ತಂತಿಬೇಲೆ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು. 

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಾಮಗಾರಿ ಸಂಪೂರ್ಣವಾಗಿ ಮುಗಿದ ಬಳಿಕ ಹೊಸ ಕಟ್ಟಡಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. 

ಕಟ್ಟಡದ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, 600 ಮೀಟರ್ ಉದ್ದದ ತಂತಿ ಬೇಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. 

ಶ್ರೀನಿವಾಸ್, ಸಹಾಯಕ ಎಂಜಿನಿಯರ್, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಕ್ರೈಸ್ಸ್

ಗುಡಿಬಂಡೆ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವುದು. ರಾತ್ರಿ ಇದೇ ಕೊಠಡಿ ಮಲಗುವ ಕೋಣೆಯಾಗಿ ಪರಿವರ್ತನೆ
ಗುಡಿಬಂಡೆ ಪಟ್ಟಣದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ಪಾಠ ಕಲಿಯುತ್ತಿರುವುದು. ರಾತ್ರಿ ಇದೇ ಕೊಠಡಿ ಮಲಗುವ ಕೋಣೆಯಾಗಿ ಪರಿವರ್ತನೆ
ಊಟದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನೆಲದ ಮೇಲೆ ಕುಳಿದು ಊಟ ಮಾಡುತ್ತಿರುವುದು
ಊಟದ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕವಾಗಿ ನೆಲದ ಮೇಲೆ ಕುಳಿದು ಊಟ ಮಾಡುತ್ತಿರುವುದು
ಆಟದ ಮೈದಾನ ಕೊರತೆಯಿಂದ ವಸತಿ ಶಾಲೆ ಮುಂಭಾಗದ ಖಾಸಗಿ ಜಮೀನಿನಲ್ಲಿ ಬೆಳಗಿನ ಪ್ರಾಥನೆ ಮಾಡುತ್ತಿರುವುದು
ಆಟದ ಮೈದಾನ ಕೊರತೆಯಿಂದ ವಸತಿ ಶಾಲೆ ಮುಂಭಾಗದ ಖಾಸಗಿ ಜಮೀನಿನಲ್ಲಿ ಬೆಳಗಿನ ಪ್ರಾಥನೆ ಮಾಡುತ್ತಿರುವುದು
ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಗೆಗ್ಗಿಲರಾಳ್ಳಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆ 
ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿಯ ಗೆಗ್ಗಿಲರಾಳ್ಳಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆ 

ಹೊಸ ಕಟ್ಟಡದಲ್ಲಿ 18 ಕೊಠಡಿಗಳು ಗೆಗ್ಗಿಲರಾಳ್ಳಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಹೊಸ ವಸತಿ ನಿಲಯದ ಕಟ್ಟಡದಲ್ಲಿ ಒಂಬತ್ತು ಬೋಧನಾ ಕೊಠಡಿಗಳು ಸೇರಿದಂತೆ ಒಟ್ಟಾರೆ 17 ಕೊಠಡಿಗಳಿವೆ.  ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ತಲಾ 18 ಕೊಠಡಿಗಳಿರುವ ಎರಡು ವಸತಿ ಕಟ್ಟಡಗಳು ಊಟದ ವ್ಯವಸ್ಥೆಗಾಗಿ ಒಂದು ಕಟ್ಟಡ ಪ್ರಾಂಶುಪಾಲ 12 ಬೋಧಕ ಸಿಬ್ಬಂದಿಗೆ 13 ವಸತಿ ಗೃಹಗಳು ವಿದ್ಯಾರ್ಥಿಗಳಿಗೆ ಆಟವಾಡಲು ಕ್ರೀಡಾಂಗಣವನ್ನೂ ಈ ಹೊಸ ಕಟ್ಟಡ ಒಳಗೊಂಡಿದೆ. ಈ ಶಾಲಾ ಕಟ್ಟಡದಲ್ಲಿ 300 ವಿದ್ಯಾರ್ಥಿಗಳು ಓದಲು ವ್ಯವಸ್ಥೆ ಕಲ್ಪಿಸಲಾಗಿದೆ.  ವಿದ್ಯಾರ್ಥಿಗಳಿಗೆ ವಾಸವಿರಲು ನಿರ್ಮಿಸಲಾಗುತ್ತಿರುವ ವಸತಿ ಕಟ್ಟಡದಲ್ಲಿ 336 ವಿದ್ಯಾರ್ಥಿಗಳು ವಾಸವಿರಲು ಯೋಗ್ಯವಾಗಿರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಕಟ್ಟಡ ನಿರ್ಮಾಣ ಹೊಣೆಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (kreis) ವಹಿಸಿಕೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT