ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧಾನಸೌಧದ ಮುಂದೆ ಚರ್ಚೆಗೆ ದಿನ ನಿಗದಿಗೊಳಿಸಿ’

ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಉಪಾಧ್ಯಕ್ಷ ಉಗ್ರಪ್ಪ
Last Updated 6 ಜೂನ್ 2022, 15:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದೇಶದ ಅಭಿವೃದ್ಧಿ, ಭದ್ರತೆ ಮತ್ತು ಸಾಮರಸ್ಯದ ವಿಚಾರದಲ್ಲಿ ಜನಸಂಘ, ಆರ್‌ಎಸ್‌ಎಸ್, ಬಿಜೆಪಿ ಕೊಡುಗೆ ಏನು, ಕಾಂಗ್ರೆಸ್ ಕೊಡುಗೆ ಏನು ಎನ್ನುವ ಬಗ್ಗೆ ಚರ್ಚೆಗೆ ನಾವು ಸಿದ್ಧವಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್. ಉಗ್ರಪ್ಪ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಿಧಾನಸೌಧದ ಮುಂದೆ ಚರ್ಚೆ ನಡೆಯಲಿ. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರೇ ಸಮಯ ಮತ್ತು ದಿನಾಂಕ ನಿಗದಿಗೊಳಿಸಿದರೆ ನಾವು ಚರ್ಚೆಗೆ ಬರುತ್ತೇವೆ ಎಂದರು.

ದೇಶದಲ್ಲಿ 50 ಲಕ್ಷ ಕಾರ್ಯಕರ್ತರು ಮತ್ತು ಆರ್‌ಎಸ್‌ಎಸ್‌ನ ಅಡಿಯಲ್ಲಿ 48 ವಿವಿಧ ಸಂಘಟನೆಗಳಿವೆ ಎಂದು ಆರ್‌ಎಸ್‌ಎಸ್‌ನವರೇ ಹೇಳುತ್ತಾರೆ. ದೇಶದಾದ್ಯಂತ 3,500 ಮತ್ತು ರಾಜ್ಯದಲ್ಲಿ 100 ಮಂದಿ ಪೂರ್ಣಾವಧಿ ಪ್ರಚಾರಕರು ಇದ್ದಾರೆ. ಇವರಲ್ಲಿ ಎಷ್ಟು ಜನರು ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಜನರು ಇದ್ದಾರೆ ಎಂದು ಪಶ್ನಿಸಿದರು.

ಪೂರ್ಣಾವಧಿ ಪ್ರಚಾರಕರಲ್ಲಿ ಶೇ 90ಕ್ಕೂ ಹೆಚ್ಚು ಜನರು ಒಂದೇ ವರ್ಗದ ಜನರಾಗಿದ್ದಾರೆ ಎಂದು ಪ್ರಚಾರಕರೊಬ್ಬರು ನನಗೆ ತಿಳಿಸಿದ್ದಾರೆ.ನಾಗಪುರದ ಚಿತ್ಪಾವನ ಬ್ರಾಹ್ಮಣರ ಹಿಡಿತದಲ್ಲಿ ‌ಆರ್‌ಎಸ್‌ಎಸ್ ಇದೆ. ದೇಶದಲ್ಲಿ ಶೇ 4ರಷ್ಟಿರುವ ಪುರೋಹಿತಶಾಹಿ ವರ್ಗದ ಜನರು ಮಾತ್ರವೇ ಆರ್‌ಎಸ್‌ಎಸ್‌ನ ಆಳ್ವಿಕೆ ಮಾಡುತ್ತಿದ್ದಾರೆ. ಹಿಂದುತ್ವ ಶೇ 4ರಷ್ಟು ಜನರಿಗೆ ಸೀಮಿತವಾದುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಎಸ್‌ಎಸ್‌ನ ಶಾಖೆಗಳಲ್ಲಿ ಬಸವಣ್ಣ, ಕುವೆಂಪು, ನಾರಾಯಣಗುರು ಅವರ ಬಗ್ಗೆ ಹೇಳುವುದಿಲ್ಲ. ಕಚೇರಿಗಳಲ್ಲಿ ಅಂಬೇಡ್ಕರ್, ಮಹಾತ್ಮಗಾಂಧಿಯ ಭಾವಚಿತ್ರ ಇರುವುದಿಲ್ಲ. ರಾಷ್ಟ್ರಧ್ವಜವನ್ನು ಒಪ್ಪುವುದಿಲ್ಲ. ಇಂತಹವರು ಹಿಂದುತ್ವದ ವಕ್ತಾರರ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT