ಸೋಮವಾರ, 18 ಮೇ 2026
×
ADVERTISEMENT

30 ವರ್ಷಗಳ ಹೋರಾಟದ ಫಲ: ಚಿಕ್ಕಬಳ್ಳಾಪುರದ ಮುಕುಟ ಶಿಡ್ಲಘಟ್ಟ ಅಂಬೇಡ್ಕರ್ ಭವನ

Published : 12 ಏಪ್ರಿಲ್ 2026, 23:17 IST
Last Updated : 13 ಏಪ್ರಿಲ್ 2026, 5:03 IST
ADVERTISEMENT
ಫಾಲೋ ಮಾಡಿ
Comments
ನಿವೇಶನ ಮಂಜೂರು ಖುಷಿ
ಡಾ.ಬಿ.ಆರ್. ಅಂಬೇಡ್ಕರ್ ಭವನದ ನಿವೇಶನಕ್ಕಾಗಿ 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಜಿಲ್ಲಾಧಿಕಾರಿ ಲತಾ ಅವರಿದ್ದ ಸಮಯದಲ್ಲಿ ನಾನು, ಈಧರೆ ಪ್ರಕಾಶ್, ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಎಲ್ಲರ ಹೋರಾಟದ ಫಲವಾಗಿ ನಿವೇಶನ ಮಂಜೂರು ಆಗಿದ್ದು ಖುಷಿ ತಂದಿತು. ನಂತರ ದಿನಗಳಲ್ಲಿ ಶಾಸಕ ಬಿ. ಎನ್. ರವಿಕುಮಾರ್ ಭವನ ನಿರ್ಮಾಣ ಮಾಡಲು ಪಣ ತೊಟ್ಟಿರುವುದು ಸಂತೋಷಕರ ಸಂಗತಿ.
ಕುಂದಲಗುರ್ಕಿ ಮುನೀಂದ್ರ, ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ
ಸಮಾನತೆ ಮೌಲ್ಯ ಬೆಳೆಸುವ ಕೇಂದ್ರ
ಶಿಡ್ಲಘಟ್ಟದಲ್ಲಿ ಅಂಬೇಡ್ಕರ್ ಭವನವನ್ನು ಸಮಾಜದ ಎಲ್ಲ ವರ್ಗಗಳ ಜನರಿಗೆ ಉಪಯೋಗವಾಗುವಂತೆ ನಿರ್ಮಿಸಲಾಗುತ್ತಿದೆ. ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಸಮಾರಂಭ, ಯುವಜನರಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ ಆಯೋಜಿಸಲು ಈ ಭವನ ಸಹಾಯಕವಾಗಲಿದೆ. ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಭವನ ನಿರ್ಮಿಸಲಾಗುತ್ತಿದೆ. ಈ ಭವನವು ಸಮಾಜದಲ್ಲಿ ಶಿಕ್ಷಣ, ಜಾಗೃತಿ ಮತ್ತು ಸಮಾನತೆಯ ಮೌಲ್ಯಗಳನ್ನು ಬೆಳೆಸುವ ಕೇಂದ್ರವಾಗಲಿದೆ. 
ಬಿ.ಎನ್.ರವಿಕುಮಾರ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT